*ನರೇಗಾ ನಡಿಗೆ ಸುಸ್ಥಿರತೆಯೆಡೆಗೆ ಹಾಗೂ ಮನೆ ಮನೆ ಜಾಥಾ ಕಾರ್ಯಕ್ರಮ*

ಜಾಹೀರಾತು/Advertisment
ಜಾಹೀರಾತು/Advertisment

 *ನರೇಗಾ ನಡಿಗೆ ಸುಸ್ಥಿರತೆಯೆಡೆಗೆ ಹಾಗೂ ಮನೆ ಮನೆ ಜಾಥಾ ಕಾರ್ಯಕ್ರಮ*



ಮೂಡುಬಿದಿರೆ : ತಾಲೂಕಿನ ಪಡುಮಾರ್ನಾಡು ಗ್ರಾಮ ಪಂಚಾಯತ್ ನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2024-25 ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸುವ ಉದ್ದೇಶದಿಂದ *ಉದ್ಯೋಗ ಖಾತರಿ‌ ನಡಿಗೆ ಸುಸ್ಥಿರತೆಯೆಡೆಗೆ* ಹಾಗೂ ಮನೆ ಮನೆ ಜಾಥಾಕ್ಕೆ ಚಾಲನೆ ನೀಡಲಾಯಿತು.



 ಬಳಿಕ ಪಡುಮಾರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ 2 ಗ್ರಾಮದ 5 ವಾರ್ಡ್ ಗಳ ಮನೆ - ಮನೆ,ಅಂಗಡಿಗಳು ಹಾಗೂ ಎಸ್ ಸಿ, ಎಸ್ಟಿ ಕಾಲೋನಿಗಳಿಗೆ ಭೇಟಿ ನೀಡಿ‌ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕಾಮಗಾರಿಯ ಮಾಹಿತಿಯನ್ನು ಒಳಗೊಂಡ ಕರಪತ್ರವನ್ನು ಹಂಚಲಾಯಿತು. 



ಸ್ವಚ್ಚತಾ ವಾಹನದಲ್ಲಿ ಧ್ವನಿ ವರ್ಧಕದ ಮೂಲಕ ಗ್ರಾಮದ ಪ್ರತಿ‌ ವಾರ್ಡಿನಲ್ಲಿ ಜನರನ್ನು ಒಟ್ಟುಗೂಡಿಸಿ ಮಾಹಿತಿ ನೀಡುವ ಮೂಲಕ ಪ್ರಚಾರ  ಕೈಗೊಳ್ಳಲಾಯಿತು. 



ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಸತೀಶ್ ಕರ್ಕೇರಾ, ಕುಸುಮ, ರಜನಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಗ್ಗಪ್ಪ ಮೂಲ್ಯ, ತಾಲೂಕು ಐಇಸಿ ಸಂಯೋಜಕಿ ಅನ್ವಯ, ಗ್ರಾಮ ಪಂಚಾಯತಿ ಸಿಬ್ಬಂದಿಗಳಾದ ರಾಜು, ಪ್ರಕಾಶ್ ಹಾಗೂ ಸ್ವಚ್ಚತಾ ವಾಹನ‌ ಚಾಲಕಿ ಶ್ವೇತಾ,ಆಶಾಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆ,ಅಂಗನವಾಡಿ ಸಹಾಯಕಿಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

Post a Comment

0 Comments