*ಬಾಲಾಜಿ ವಿಶ್ವನಾಥ ಪ್ರಭು ಅವರಿಗೆ ಶಾರದಾನುಗ್ರಹ -2023 ಪ್ರಶಸ್ತಿ:ಅಶೋಕ್ ಕಾಮತ್*
ಮೂಡುಬಿದಿರೆ ಪೊನ್ನೆಚಾರಿ ಶಾರದಾ ಮಹೋತ್ಸವದ ಅಂಗವಾಗಿ ನೀಡುತ್ತಿರುವ ಶ್ರೀ ಶಾರದಾನುಗ್ರಹ ಪ್ರಶಸ್ತಿ-2023 ಗೆ ಮೂಡುಬಿದಿರೆಯ ಖ್ಯಾತ ಉದ್ಯಮಿ, ಧಾರ್ಮಿಕ ಮುಂದಾಳು, ಸಮಾಜ ಸೇವಕರಾದ ಬಾಲಾಜಿ ಸಮೂಹ ಸಂಸ್ಥೆಯ ಮುಖ್ಯಸ್ಥರಾದ
ಕೆ. ವಿಶ್ವನಾಥ ಪ್ರಭು ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪೊನ್ನೆಚಾರಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದ ಆಡಳಿತ ಮೊಕ್ತೇಸರು,
ಶಾರದಾ ಮಹೋತ್ಸವ ಸಮಿತಿ ಅಧ್ಯಕ್ಷ ಅಶೋಕ್ ಕಾಮತ್ ಅವರು ಪ್ರಕಟಿಸಿದ್ದಾರೆ.
500 ವರ್ಷಗಳ ಇತಿಹಾಸವನ್ನು ಹೊಂದಿರುವ ಹೊಂದಿರುವ
ಪೊನ್ನೆಚಾರಿ ಶ್ರೀಲಕ್ಷ್ಮೀ ವೆಂಕಟರಮಣ ದೇವಾಲಯದ ಸಾನಿಧ್ಯದಲ್ಲಿ ನಡೆಯುವ ಶಾರದಾ ಮಹೋತ್ಸವದ ಸಂದರ್ಭದಲ್ಲಿ ನೀಡುವ ಶಾರದಾನುಗ್ರಹ ಪ್ರಶಸ್ತಿ ಯನ್ನು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ಸಾಧಕರನ್ನು ಗುರುತಿಸಿ ಅಭಿನಂದಿಸುವ ಕಾರ್ಯವನ್ನು ನಡೆಸಿಕೊಂಡು ಬಂದಿದೆ.
ಅಕ್ಟೋಬರ್ 21 ರಂದು ನಡೆಯುವ ಶಾರದಾ ಮಹೋತ್ಸವ ಸಮಾರಂಭದಲ್ಲಿ ಶ್ರೀ ಶಾರದಾ ನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.
0 Comments