ಅಭಿವೃದ್ಧಿಗೆ ಅಧಿಕಾರಿಗಳ ನಿರ್ಲಕ್ಷ್ಯ: ಶಿರ್ತಾಡಿ ಪಂಚಾಯತ್ ಗೆ ಸದಸ್ಯರಿಂದಲೇ ದಿಗ್ಬಂಧನ

ಜಾಹೀರಾತು/Advertisment
ಜಾಹೀರಾತು/Advertisment

 ಅಭಿವೃದ್ಧಿಗೆ ಅಧಿಕಾರಿಗಳ ನಿರ್ಲಕ್ಷ್ಯ: ಶಿರ್ತಾಡಿ ಪಂಚಾಯತ್ ಗೆ ಸದಸ್ಯರಿಂದಲೇ ದಿಗ್ಬಂಧನ



ಮೂಡುಬಿದಿರೆ : ಶಿರ್ತಾಡಿ ಗ್ರಾಮ ಪಂಚಾಯತ್ ನಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ, ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದನೆ ನೀಡುತ್ತಿಲ್ಲ ಹಾಗೂ ಪಿಡಿಒ ಅವರು  ಪಂಚಾಯತ್ ಗಮನಕ್ಕೆ ತರದೆ ರಜೆ ಮಾಡುವ ಮೂಲಕ ಆಡಳಿತ ವರ್ಗವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಆರೋಪಿಸಿ ಶಿರ್ತಾಡಿ ಪಂಚಾಯತ್ ಸದಸ್ಯರು ಪಂಚಾಯತನ್ನು ದಿಗ್ಬಂಧನ ಮಾಡಿದ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.      ಈ ಬಗ್ಗೆ ಮಾತನಾಡಿದ ಪಂಚಾಯತ್ ಉಪಾಧ್ಯಕ್ಷ ಸಂತೋಷ್ ಕೋಟ್ಯಾನ್ ಅವರು ಮಾತನಾಡಿ  ಪಿ.ಡಿ.ಒ.ಮಂಜುಳಾ ಹೊನಗುಂದ ಅವರು ಯಾರಿಗೂ ಹೇಳದೆ ಕರ್ತವ್ಯಕ್ಕೆ ರಜೆ ಮಾಡುತ್ತಾರೆ. 2023-24ಕ್ಕೆ ಮಾಡಿರುವ ಕ್ರೀಯಾ ಯೋಜನೆಯನ್ನು ಆನ್ ಲೈನ್ ಗೆ ಹಾಕಿಲ್ಲ. 9/11 ಆಗಿಲ್ಲ.  ತಂತ್ರಾಂಶ-2ರಲ್ಲಿ 99 ಮನೆಗಳು ಬಿಟ್ಟು ಹೋಗಿವೆ, ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡುತ್ತಿಲ್ಲ. ಡೋರ್ ನಂಬ್ರ ನೀಡುತ್ತಿಲ್ಲ. ಅಲ್ಲದೆ ಸಂಜೀವಿನಿ ಕಟ್ಟಡಕ್ಕೆ ಉದ್ಯೋಗ ಖಾತರಿಯಲ್ಲಿ ಬಜೆಟ್ ಇಡಲಾಗಿದ್ದು ಮೂರು ಸಲ ಟೆಂಡರ್ ಆಗಿದೆ ಆದರೆ ಎಸ್ ಒಗೆ ಈವರೆಗೆ ಎಪ್ರೋಲ್ ಹೋಗಿಲ್ಲ. ಘನತ್ಯಾಜ್ಯ ಘಟಕದ ವಾಹನಕ್ಕೆ ಹಣ ಇಡಲಾಗಿದೆ ಇದೂ ಕೂಡಾ ಅಪ್ರೋಲ್ ಗೆ ಹೋಗಿಲ್ಲ. ವಸತಿ ಯೋಜನೆಯಲ್ಲಿ 21 ಮನೆಗಳನ್ನು ನಿರ್ಮಿಸಲಾಗಿದ್ದು ಇದಕ್ಕೆ ಡೋರ್ ನಂಬ್ರ ನೀಡಿಲ್ಲವೆಂದು ಆರೋಪಿಸಿದರು.



ಸಾರ್ವಜನಿಕರು ತಮ್ಮ ಕೆಲಸ ಮಾಡಿ ಕೊಡಲು  ಜನಪ್ರತಿನಿಧಿಗಳಾಗಿ ನಮ್ಮನ್ನು ಆಯ್ಕೆ ಮಾಡಿ ಕಳಿಸಿದ್ದಾರೆ. ಅವರ ಸಮಸ್ಯೆಗಳನ್ನು ನಮ್ಮ ಬಳಿ ಹೇಳುತ್ತಾರೆ. ಜನರಿಗೆ ತೊಂದರೆ ಆದರೆ ನಾವು ವ್ಯವಸ್ಥೆಯನ್ನು ಸರಿ ಪಡಿಸಬೇಕು ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ಹಿಂದೆ ಬರಬೇಕು ಹಾಗಿದೆ ನಮ್ಮ ಪರಿಸ್ಥಿತಿ ಎಂದ ಅವರು ಇಬ್ಬರು ಸಿಬಂಧಿಗಳನ್ನು ಇಟ್ಟುಕೊಂಡು  'ಎ' ಗ್ರೇಡ್ ಪಂಚಾಯತ್ ನಲ್ಲಿ ಆಡಳಿತ ಮಾಡಲು ಕಷ್ಟ ಸಾಧ್ಯವಾಗಿದೆ ಆದ್ದರಿಂದ ಖಾಯಂ ಪಿಡಿಒ, ದ್ವಿತೀಯ ದರ್ಜೆಯ ಹಾಗೂ ಜವಾನ ಹುದ್ದೆಯನ್ನು ಭರ್ತಿಗೊಳಿಸಬೇಕು ಹಾಗೂ ನಿರ್ಲಕ್ಷ್ಯ ತೋರುವ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು. 

    ಪಂಚಾಯತ್ ಅಧ್ಯಕ್ಷೆ ಆಗ್ನೆಸ್ ಡಿಸೋಜ  ಅವರ ನೇತೃತ್ವದಲ್ಲಿ ನಡೆದ ಈ ಅಪರೂಪದ ಪ್ರತಿಭಟನೆಯಲ್ಲಿ ಪಂಚಾಯತ್ ಸದಸ್ಯರೇ ಸೇರಿ ಕಚೇರಿ ತೆರೆಯಲು ಬಿಡದೆ ದಿಗ್ಬಂಧನ ಹಾಕಿರುವುದು ಈ ಭಾಗದಲ್ಲಿ ಇದೇ ಮೊದಲ ಬಾರಿಯಾಗಿದೆ.

    ಇದೇ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕಾಧಿಕಾರಿ ಲೋಕೇಶ್ ಅವರನ್ನು  ಸಂಪರ್ಕಿಸಿ ಸಮಸ್ಯೆಗಳ ಬಗ್ಗೆ ವಿವರಿಸಲಾಯಿತು, ಇ.ಒ ಅವರು ಸ್ಥಳಕ್ಕೆ ಬಾರದೆ ದಿಗ್ಬಂಧನ ದಿಂದ ಹಿಂದೆ ಸರಿಯುವುದಿಲ್ಲವೆಂದು ಪಂಚಾಯತ್ ಸದಸ್ಯರು ಪಟ್ಟು ಹಿಡಿದಿದ್ದರು. 

 ಸದಸ್ಯರನ್ನು ಸಮಾಧಾನಿಸಿದ ಇ.ಒ ಅವರು ತಮ್ಮ ಸಮಸ್ಯೆಗಳ ಬಗ್ಗೆ ಗಮನಕ್ಕೆ ಬಂದಿದೆ ಈ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ ಎಂದ ಅವರು ಕಾರ್ಯದರ್ಶಿ ದಾಮೋಧರ್ ಅವರಿಗೆ ಪಿಡಿಒ ಚಾರ್ಜನ್ನು ನೀಡಿ ಆದೇಶಿಸಿದ್ದಾರೆ. ನಂತರ ಸದಸ್ಯರು ದಿಗ್ಬಂಧನದಿಂದ ಹಿಂದೆ ಸರಿದರು.

ಸದಸ್ಯರಾದ ಪ್ರವೀಣ್ ಕುಮಾರ್, ಶೀನ, ರಾಜೇಶ್ ಫೆರ್ನಾಂಡೀಸ್, ದೇವಕಿ, ಸ್ಥಳೀಯರಾದ ಸೂರಜ್ ಜೈನ್, ಹೇಮ ಮತ್ತಿತರರು ಉಪಸ್ಥಿತರಿದ್ದರು.

Post a Comment

0 Comments