ಪ್ರಾಂತ್ಯದಲ್ಲಿ ಸ್ಕೌಟ್ಸ್ -ಗೈಡ್ಸ್ ದಳದ ವಾರ್ಷಿಕ ಶಿಬಿರ
ಮೂಡುಬಿದಿರೆ: ಸರ್ಕಾರಿ ಪ್ರೌಢಶಾಲೆ ಪ್ರಾಂತ್ಯ ಮೂಡುಬಿದಿರೆ ಇದರ ತ್ರಿಭುವನ್ ಸ್ಕೌಟ್ಸ್ ಮತ್ತು ರಾಣಿ ಅಬ್ಬಕ್ಕ ಗೈಡ್ಸ್ ದಳದ ವಾರ್ಷಿಕ ಶಿಬಿರವು ಶನಿವಾರ ಆರಂಭಗೊಂಡಿತು.
ಮೂರು ದಿನ ನಡೆಯುವ ಈ ಶಿಬಿರವನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಜಿತೇಶ್ ಅವರು ಉದ್ಘಾಟಿಸಿ ಶುಭ ಹಾರೈಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಮುಖ್ಯ ಶಿಕ್ಷಕ ರಾಮಚಂದ್ರ ಅವರು ಮಾತನಾಡಿ ವಿದ್ಯಾರ್ಥಿಗಳು ಸತ್ಪಜೆಗಳಾಗಿ ಬದುಕಲು ಬೇಕಾಗುವಂತಹ ಎಲ್ಲಾ ಮೌಲ್ಯಗಳನ್ನು ಹಾಗೂ ಕೌಶಲ್ಯಗಳನ್ನು ಬೆಳೆಸಲು ಈ ಶಿಬಿರವು ಸಹಕಾರಿಯಾಗಲಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಗೈಡ್ ಕ್ಯಾಪ್ಟನ್ ಸುಫಲಾ(ಎಲ್.ಟಿ.ಗೈಡ್), ಸೈಟ್ ಮಾಸ್ಟರ್ ಪ್ರಕಾಶ್ ಹೆಚ್. (ಹೆಚ್.ಡಬ್ಲ್ಯೂ.ಬಿ. ಸೌಟ್ ಅಳ್ವಾಸ್ ಶಾಲೆ, ಹಾಗೂ ಗೈಡ್ ಕ್ಯಾಪ್ಟನ್ ಪ್ಲೇವಿ ಡಿಸೋಜ (ಪ್ರೀ ಎ.ಎಲ್.ಟಿ)ಬಿ.ಐ.ಇ.ಆರ್.ಟಿ ಕ್ಷೇತ್ರ ಸಂಪನ್ಮೂಲ ಕೇಂದ್ರ ಮೂಡಬಿದಿರೆ ಅವರು ಉಪಸ್ಥಿತರಿದ್ದರು.
ಶಿಬಿರದ ನಾಯಕತ್ವ ವಹಿಸಿರುವ ಸ್ಕೌಟ್ ಮಾಸ್ಟರ್ ನವೀನ್ ಚಂದ್ರ ಅಂಬೂರಿ ಕಾರ್ಯಕ್ರಮವನ್ನು ನಿರೂಪಿಸಿದರು.
0 Comments