ಯುವರಾಜ್ ಜೈನ್ ಅವರಿಗೆ
ಮೂಡುಬಿದಿರೆ ಸಮಾಜ ಮಂದಿರ ಪುರಸ್ಕಾರ
ಮೂಡುಬಿದಿರೆ : ಇಲ್ಲಿನ ಕಲ್ಲಬೆಟ್ಟು ಪರಿಸರದಲ್ಲಿ ಕಳೆದ ಎರಡು ದಶಕಗಳಿಂದ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸುತ್ತಿರುವ ಯುವರಾಜ್ ಜೈನ್ ಅವರಿಗೆ ಮೂಡುಬಿದಿರೆಯ ಸಮಾಜ ಮಂದಿರ ಸಭಾ(ರಿ.) ತನ್ನ 76ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವದ ಅಂಗವಾಗಿ ಮೂಡುಬಿದಿರೆಯ ಅಭಿವೃದ್ಧಿಗೆ ಕೊಡುಗೆ ನೀಡಿದ ಸಾಧಕರನ್ನು ಗುರುತಿಸಿ ನೀಡುವ 2023ನೇ ಸಾಲಿನ ಸಮಾಜ ಮಂದಿರ ಪುರಸ್ಕಾರವನ್ನು ಘೋಷಿಸಿದೆ.
ಮೌಲ್ಯಾಧಾರಿತ ಶಿಕ್ಷಣ ನೀಡುವ ಜ್ಞಾನ ಯಜ್ಞದಲ್ಲಿ ನಾಡಿನೆಲ್ಲೆಡೆ ಚಿರಪರಿಚಿತ ಯುವರಾಜ್ ಜೈನ್ ಹೈಸ್ಕೂಲ್, ವಿಜ್ಞಾನ, ವಾಣಿಜ್ಯ ವಿಭಾಗದ ಪದವಿಪೂರ್ವ ಶಿಕ್ಷಣವನ್ನು ಗುರುಕುಲ ಮಾದರಿಯಲ್ಲಿ ನೀಡುತ್ತಿರುವ ಸಾಧಕ.
ಕೋಚಿಂಗ್ ಸೆಂಟರ್ ಮೂಲಕ ವೃತ್ತಿ ಜೀವನದಲ್ಲಿ ಗುರುತಿಸಿಕೊಂಡು, ಉಪನ್ಯಾಸಕರಾಗಿ, ತರಬೇತು ದಾರರಾಗಿಯೂ ಬೆಳೆದವರು, ಕಲಿಕೆಯಲ್ಲಿ ಹಿಂದುಳಿದವರು, ಗ್ರಾಮೀಣ ಪ್ರತಿಭೆಗಳು ಹೀಗೆ ಎಲ್ಲರನ್ನೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತುಗೊಳಿಸುವಲ್ಲಿಯೂ ಯಶಸ್ಸು ಕಂಡವರು.
ಜೇಸಿ, ರೋಟರಿ ಸಂಸ್ಥೆಗಳ ಮೂಲಕ ಸಕ್ರಿಯ ಸೇವೆ, ಸಂಘಟನೆ, ಶಿಕ್ಷಣ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ರ೦ಗಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡು ಸಮಾಜಮುಖಿಯಾಗಿ ಬೆಳೆಯುತ್ತಿರುವವರು. ಸಾಧನೆಯ ಹಾದಿಯಲ್ಲಿ ರಾಷ್ಟ್ರೀಯ ಕಮಲಪತ್ರ, ರಾಜ್ಯ ಮಟ್ಟದ ಶಿಕ್ಷಣ ರತ್ನ, ಸಾಧನಶ್ರೀ ಗೌರವಗಳಿಗೆ ಭಾಜನರಾಗಿರುವ ಯುವರಾಜ್ ಜೈನ್ ಅವರಿಗೆ ಇದೀಗ 2023ನೇ ಸಾಲಿನ `ಸಮಾಜ ಮಂದಿರ ಪುರಸ್ಕಾರ'' ನೀಡಲು ನಿರ್ಧರಿಸಲಾಗಿದೆ ಎಂದು ಸಮಾಜ ಮಂದಿರ ಸಭಾದ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ತಿಳಿಸಿದ್ದಾರೆ.
ಅ15ರಿಂದ 19ರ ವರೆಗೆ ಸಮಾಜ ಮಂದಿರದಲ್ಲಿ ಜರಗುವ ಮೂಡುಬಿದಿರೆ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವ ಜರಗಲಿದ್ದು ಅ15 ರಂದು ಸಂಜೆ ಉದ್ಘಾಟನಾ ಸಮಾರಂಭದಲ್ಲಿ ಈ ಪುರಸ್ಕಾರ ಪ್ರದಾನ ನಡೆಯಲಿದೆ.
ಐದು ದಿನಗಳ ಉತ್ಸವದ ಅವಧಿಯಲ್ಲಿ ಮೂಡುಬಿದಿರೆಯ ವಿವಿಧ ರಂಗಗಳಲ್ಲಿ ಕೊಡುಗೆ ಸಲ್ಲಿಸುತ್ತಿರುವ ಆಯ್ದ 15 ಮಂದಿ ಸಾಧಕರುಗಳಿಗೆ ಸಮಾಜ ಮಂದಿರ ಗೌರವ ಪ್ರದಾನ ನಡೆಯಲಿದೆ.
ಸಮಾಜ ಮಂದಿರ ಗೌರವ 2023 ಪುರಸ್ಕೃತರು:
ರಾಮಕೃಷ್ಣ ಶಿರೂರು (ಶಿಕ್ಷಣ, ಸಂಘಟನೆ) ಸಿಸ್ಟರ್ ಪ್ರೆಸಿಲ್ಲಾ (ಅನಾಥರ ಸೇವೆ) - ಶ್ರೀಮತಿ ಸಂಧ್ಯಾ (ಪರಿಸರ, ಶೂನ್ಯ ತ್ಯಾಜ್ಯ ಕಾಳಜಿ),ಎಸ್. ಸುರೇಂದ್ರ ಪೈ ಪುತ್ತಿಗೆ (ಯಕ್ಷಗಾನ ಚಿಕ್ಕಮೇಳ) , ರತ್ನಾಕರ ಭಟ್ (ಧಾರ್ಮಿಕ, ಕಲೆ, ಸಂಸ್ಕೃತಿ),ಸುಧಾಕರ ಶೆಟ್ಟಿ (ರಂಗಭೂಮಿ, ಸಮಾಜ ಸೇವೆ) ಹರಿಕೃಷ್ಣ ಭಟ್ (ಸಮಾಜ ಸೇವೆ ) ಗೋಪಾಲ ಸಾಲ್ಯಾನ್ (ಸಾರ್ವಜನಿಕ ಸೇವೆ) , ಅರುಣ ಕುಮಾರ್ (ಸಂಸ್ಕೃತಿ, ಕಲಾ ಸೇವೆ)
ಅಬ್ದುಲ್ ರಹಿಮಾನ್ (ಸೌಹಾರ್ದ, ಸಮಾಜ ಸೇವೆ) ,ಎಂ.ಪಿ. ಅಶೋಕ್ ಕಾಮತ್ (ಧಾರ್ಮಿಕ, ಸಾಂಸ್ಕೃತಿಕ) ಕು. ಪ್ರೇಮಶ್ರೀ ಕಲ್ಲಬೆಟ್ಟು (ಪತ್ರಿಕೋದ್ಯಮ) ನವೀನ್‌ಚಂದ್ರ ಅಂಬೂರಿ (ದೈಹಿಕ ಶಿಕ್ಷಣ, ಕಂಬಳ) ಅಲೆಕ್ಸ್ ಪ್ರಿಸ್ಕಾ ರೋಡ್ರಿಗಸ್ (ಗ್ರಂಥಾಲಯ, ಪರಿಸರ ಕಾಳಜಿ) ಧೀರಜ್ ಕುಮಾರ್ ಕೊಳ್ಕೆ(ಸಮಾಜ ಸೇವೆ) -
0 Comments