ಮೂಡುಬಿದಿರೆ ಪ್ರೆಸ್ ಕ್ಲಬ್ ನ ಮಾಜಿ ಅಧ್ಯಕ್ಷ ವೇಣುಗೋಪಾಲ್ ನಿಧನ
ಮೂಡುಬಿದಿರೆ: ವಕೀಲ, ಪತ್ರಕರ್ತ, ಮೂಡುಬಿದಿರೆ ಪ್ರೆಸ್ ಕ್ಲಬ್ ನ ಮಾಜಿ ಅಧ್ಯಕ್ಷ ವೇಣುಗೋಪಾಲ ಕೋಟ್ಯಾನ್ (30ವ) ಹೃದಯಾಘಾತದಿಂದ ಸೋಮವಾರ ನಿಧನರಾಗಿದ್ದಾರೆ.
ಸಚ್ಚರಿಪೇಟೆ ಪೆರೂರು ನಿವಾಸಿ ಆನಂದ- ವನಜಾ ದಂಪತಿಯ ಪುತ್ರ ವೇಣುಗೋಪಾಲ್ ಅವರು ಕಳೆದ 11 ವರ್ಷಗಳಿಂದ ಜಯಕಿರಣ ಪತ್ರಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಜತೆಗೆ ವಕೀಲ ವೃತ್ತಿಯನ್ನು ಮಾಡುತ್ತಿದ್ದರು.
ಮೂರು ಬಾರಿ ಮೂಡುಬಿದಿರೆ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದ ಅವರು ಮೂಡುಬಿದಿರೆ ಪತ್ರಿಕಾ ಭವನದ ನಿವೇಶನಕ್ಕೆ ಶ್ರಮಿಸಿದ್ದರು.
ವಿವಿಧ ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ ಹಾಗೂ ಪದಾಧಿಕಾರಿಯಾಗಿ ಸಕ್ರೀಯರಾಗಿದ್ದರು.
0 Comments