ಸೌಜನ್ಯ ಅತ್ಯಾಚಾರ ಪ್ರಕರಣ:ಅಣ್ಣಪ್ಪ‌ ಬೆಟ್ಟಕ್ಕೆ ತೆರಳಿ ಪ್ರಮಾಣ ಮಾಡಿದ ರಾಕೇಶ್ ಶೆಟ್ಟಿ

ಜಾಹೀರಾತು/Advertisment
ಜಾಹೀರಾತು/Advertisment

 ಸೌಜನ್ಯ ಅತ್ಯಾಚಾರ ಪ್ರಕರಣ:ಅಣ್ಣಪ್ಪ‌ ಬೆಟ್ಟಕ್ಕೆ ತೆರಳಿ ಪ್ರಮಾಣ ಮಾಡಿದ ರಾಕೇಶ್ ಶೆಟ್ಟಿ



ಧರ್ಮಸ್ಥಳದ ಪಾಂಗಳ ನಿವಾಸಿ ಕುಮಾರಿ ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಿನಕ್ಕೊಂದು ಆಯಾಮವನ್ನು ಪಡೆಯುತ್ತಿದೆ.


ಮಹೇಶ್ ಶೆಟ್ಟಿ ತಿಮರೋಡಿ ಮತ್ತು ತಂಡಸ ಧರ್ಮಸ್ಥಳಕ್ಕೆ ಮುತ್ತಿಗೆ ಹಾಕುತ್ತೇವೆ ಎಂಬ ಕರೆಗೆ ವಿರುದ್ಧವಾಗಿ ನಡೆಯುತ್ತಿರುವ ಧರ್ಮ ರಕ್ಷಣಾ ಯಾತ್ರೆಯೂ ಜೋರಾಗಿ ನಡೆಯುತ್ತಿದೆ.


ಈ ನಡುವೆ ಪವರ್ ಟಿವಿ ಎಂ.ಡಿ. ರಾಕೇಶ್ ಶೆಟ್ಟಿ ಒಂದು ಹೆಜ್ಜೆ ಮುಂದೆ ಹೋಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಕಾರಣಿಕ ದೈವ ಅಣ್ಣಪ್ಪ ಸ್ವಾಮಿ ಬೆಟ್ಟದಲ್ಲಿ ನಿಂತು ಪ್ರಮಾಣ ಮಾಡಿದ್ದಾರೆ.


"ತಾನು ಯಾವುದೇ ಸುಳ್ಳು ಪ್ರಚಾರವನ್ನು ಮಾಡಿಲ್ಲ. ತಾನು ತನ್ನ ಮಾಧ್ಯಮದಲ್ಲಿ ಬಿತ್ತರಿಸಿದ ಸುದ್ದಿಗಳೆಲ್ಲಾ ಸತ್ಯ. ತಿಮರೋಡಿ ಮತ್ತು ತಂಡ ಮಾಡುತ್ತಿರುವ ಆರೋಪಗಳು ಸುಳ್ಳು.  ಅವರ ಆರೋಪದಂತೆ ಸೌಜನ್ಯಳ ಪ್ರಕರಣದಲ್ಲಿ ಆ ನಾಲ್ಕು ಹುಡುಗರು ಇರುವುದೂ ಸುಳ್ಳು. ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಮಾಡಿದ ಆರೋಪಿ ಸಂತೋಷ್ ರಾವ್" ಎಂದು ಅಣ್ಣಪ್ಪ ಸ್ವಾಮಿ ಗುಡಿಯ ಮುಂದೆ ಪ್ರಮಾಣ ಮಾಡಿದ್ದಾರೆ.

Post a Comment

0 Comments