ಮೂಡುಬಿದಿರೆ ತಾಲೂಕಿನಲ್ಲಿ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ ತಾಲೂಕಿನಲ್ಲಿ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ 


ಮೂಡುಬಿದಿರೆ: ತಾಲೂಕಿನ ನೆಲ್ಲಿಕಾರು, ಹೊಸಬೆಟ್ಟು ಹಾಗೂ ಬೆಳುವಾಯಿ ಗ್ರಾ.ಪಂ.ಗಳ 2ನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಶನಿವಾರ ನಡೆಯಿತು.

ನೆಲ್ಲಿಕಾರು



  ನೆಲ್ಲಿಕಾರು ಗ್ರಾಮ ಪಂಚಾಯತ್ ನಲ್ಲಿ ಅಧ್ಯಕ್ಷರಾಗಿ  ಬಿಜೆಪಿ ಬೆಂಬಲಿತ ಸದಸ್ಯರಾಗಿ ಉದಯ ಪೂಜಾರಿ

 ಉಪಾಧ್ಯಕ್ಷರಾಗಿ ನಿಟಕಪೂರ್ವ ಅಧ್ಯಕ್ಷೆ ಸುಶೀಲಾ ಆಯ್ಕೆಯಾಗಿದ್ದಾರೆ.

ಬೆಳುವಾಯಿ



ಬೆಳುವಾಯಿಯಲ್ಲಿ ಬಿಜೆಪಿಯ ಸದಸ್ಯದ್ವಯರ ಅಡ್ಡ ಮತದಾನದ ಪರಿಣಾಮವಾಗಿ  ಕಾಂಗ್ರೆಸ್ ನ  ಹಿರಿಯ ಸದಸ್ಯ ಸುರೇಶ್ ಗೋಲಾರ ಅಧ್ಯಕ್ಷರಾಗಿ, ಬಿಜೆಪಿ ಬೆಂಬಲಿತ ಜಯಂತಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

 ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ  ಪ್ರವೀಣ್ ಮಸ್ಕರೇನ್ಹಸ್ ಹಾಗೂ ಉಪಾಧ್ಯಕ್ಷ ಗಾದಿಗೆ ಸ್ಪರ್ಧೆ ನೀಡಿದ್ದ ಕಾಂಗ್ರೆಸ್ ಬೆಂಬಲಿತ ಶೌಕತ್ ಬಾನು ಸೋಲನ್ನನುಭವಿಸಿದ್ದಾರೆ. 

ಹೊಸಬೆಟ್ಟು



  ಹೊಸಬೆಟ್ಟು ಪಂಚಾಯತ್ ನಲ್ಲಿ ಸೌಮ್ಯ ಸದಾನಂದ ಪೂಜಾರಿ ಅಧ್ಯಕ್ಷೆಯಾಗಿ ಹಾಗೂ ಬೇಬಿ ಅವರು ಉಪಾಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Post a Comment

0 Comments