ವಿಶ್ವ ಛಾಯಾಗ್ರಹಣ ದಿನ

ಜಾಹೀರಾತು/Advertisment
ಜಾಹೀರಾತು/Advertisment

 ವಿಶ್ವ ಛಾಯಾಗ್ರಹಣ ದಿನ

ಮೂಡುಬಿದಿರೆಯಲ್ಲಿ ಹಿರಿಯ ಛಾಯಾಗ್ರಾಹಕರಿಗೆ ಸನ್ಮಾನ



ಮೂಡುಬಿದಿರೆ: ವಿಶ್ವ ಛಾಯಾಗ್ರಹಣದ ಪ್ರಯುಕ್ತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ರಿ.),‌ ಮೂಡುಬಿದಿರೆ ವಲಯದ ವತಿಯಿಂದ ಸಮಾಜ ಮಂದಿರದಲ್ಲಿ ಹಿರಿಯ ಛಾಯಾಗ್ರಾಹಕರಿಗೆ ಸನ್ಮಾನ ಕಾರ್ಯಕ್ರಮ ಶನಿವಾರ ನಡೆಯಿತು. 

ಫೋಟೋಗ್ರಾಫರ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಸುನಿಲ್ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ  ಹಿರಿಯ ಛಾಯಾಗ್ರಾಹಕರಾದ ಎಂ.ಎಸ್. ವಸಂತ್ ಇವರನ್ನು ಸನ್ಮಾನಿಸಲಾಯಿತು.  



ಸನ್ಮಾನ ಸ್ವೀಕರಿಸಿದ ಎಂ. ಎಸ್. ವಸಂತ್ ರವರು ತಮ್ಮ 25 ವರ್ಷಗಳ ವೃತ್ತಿ ಜೀವನದ ಅನುಭವವನ್ನು ಹಂಚಿಕೊಂಡರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ನಿತಿನ್ ಬೆಳುವಾಯಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಸುನಿಲ್ ಕೋಟ್ಯಾನ್ ಇವರು ವಿಶ್ವ ಛಾಯಾಗ್ರಹಣ ದಿನದ ಪ್ರಯುಕ್ತ ಎಲ್ಲ ಛಾಯಾಗ್ರಾಹಕರಿಗೆ ಶುಭ ಹಾರೈಸಿದರು.

ಉಡುಪಿ ವಲಯದವರು ಏರ್ಪಡಿಸಿದ ಫೋಟೋ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ಹರೀಶ್ ಪ್ರತಿರೂಪ ಹಾಗೂ ರೋಟರಿ ಕ್ಲಬ್ ನಿಂದ ಸನ್ಮಾನಿತರಾದ ರಾಮ ಕೋಟ್ಯಾನ್ ಇವರನ್ನು ಅಭಿನಂದಿಸಲಾಯಿತು.


ಕೋಶಾಧಿಕಾರಿ ಸತೀಶ್ ಸಾಲಿಯಾನ್ ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿಯಾದ ಎಂ. ಇಕ್ಬಾಲ್ ಶೇಕ್ ಕಾರ್ಯಕ್ರಮ ನಿರೂಪಿಸಿದರು.


ಇತ್ತೀಚೆಗೆ  ಅಗಲಿದ ಹಿರಿಯ ಛಾಯಾಗ್ರಾಹಕ ಸುಬ್ಬು ಇವರ ಮನೆಗೆ ತೆರಳಿ ಮರಣೋತ್ತರ ಗೌರವ ಸಲ್ಲಿಸಲಾಯಿತು.* ಸದಸ್ಯರಾದ ಸುರೇಶ್ ಅಂಚನ್ ಇವರು ಪ್ರಾಸ್ತಾವಿಕ ಮಾತನಾಡಿದರು. ಮೃತರ ಕುಟುಂಬದವರಿಗೆ ಸಹಾಯಧನ ವಿತರಿಸಲಾಯಿತು.

ಸುನಿಲ್ ಕೋಟ್ಯಾನ್, ಎಂ. ಇಕ್ಬಾಲ್ ಶೇಕ್, ಸತೀಶ್ ಸಾಲಿಯಾನ್, ರಾಜೇಶ್ ಕೆಲ್ಲಪುತ್ತಿಗೆ, ಫೋಟೋಗ್ರಾಫರ್ಸ್ ಅಸೋಸಿಯೇಷನ್ ನ ಸದಸ್ಯರು ಈ ಸಂದರ್ಭದಲ್ಲಿದ್ದರು.

Post a Comment

0 Comments