ಕೃಷಿ ವಿಚಾರ ವಿನಿಮಯ ಕೇಂದ್ರದ ಮಾಸಿಕ ಸಭೆ

ಜಾಹೀರಾತು/Advertisment
ಜಾಹೀರಾತು/Advertisment

 ಕೃಷಿ ವಿಚಾರ ವಿನಿಮಯ ಕೇಂದ್ರದ ಮಾಸಿಕ ಸಭೆ: 

ಪ್ರಗತಿಪರ ಕೃಷಿಕ ದಿನೇಶ್ ಆನಡ್ಕಗೆ ಸನ್ಮಾನ





ಮೂಡುಬಿದಿರೆ: ಇಲ್ಲಿನ ಕೃಷಿ ವಿಚಾರ ವಿನಿಮಯ ಕೇಂದ್ರದ ಆಗಸ್ಟ್ ತಿಂಗಳ ಮಾಸಿಕ ಸಭೆಯು ಶನಿವಾರ ಸಮಾಜ ಮಂದಿರದ ಸ್ವರ್ಣ ಮಂದಿರದಲ್ಲಿ ನಡೆಯಿತು.



ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಕೆ.ಶ್ರೀಪತಿ ಭಟ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ,  ಕೆ.ಎನ್. ಭಟ್ ಶಿರಾಡಿಪಾಲ್ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ "ಶತನಮನ- ಶತಸನ್ಮಾನ" ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕ ದಿನೇಶ್ ಆನಡ್ಕ ಅವರನ್ನು ಸನ್ಮಾನಿಸಿದರು.

ನಂತರ ಮಾತನಾಡಿದ ಅವರು ಕೃಷಿಕ ದೇಶದ ಬೆನ್ನೆಲುಬು. ಕೃಷಿ ಸಮೃದ್ಧವಾಗಿದ್ದರೆ ದೇಶ ಸಮೃದ್ಧವಾಗಿರುತ್ತದೆ. ಕೃಷಿಯಲ್ಲಿ ಸಾಧನೆ ಮಾಡಿದವರಿಗೆ ಉತ್ತಮ ಭವಿಷ್ಯವಿದೆ.  ಕೆ.ಎನ್.ಭಟ್ ಶಿರಾಡಿಪಾಲ್ ಅವರು ಒಬ್ಬ ಅತ್ಯುತ್ತಮ ವ್ಯಕ್ತಿ. ಅವರ ಮಾಡಿದ ಸಾಧನೆಯನ್ನು ನಾವೆಲ್ಲರೂ ತಿಳಿದುಕೊಳ್ಳಬೇಕಾಗಿದೆ. ಪತ್ರಕರ್ತ ಕೃಷ್ಣ ಕುಮಾರ್ ಅವರು ಒಂದು ಉತ್ತಮವಾದ ಕಾರ್ಯವನ್ನು ಕೈಗೊಂಡಿರುವುದು ಶ್ಲಾಘನೀಯ.

 ಕೃ.ವಿ.ವಿ.ಕೇಂದ್ರದ ಅಧ್ಯಕ್ಷ ಗುಣಪಾಲ ಮುದ್ಯ ಅಧ್ಯಕ್ಷತೆ ವಹಿಸಿದ್ದರು.


ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಡಾ. ಮಲ್ಲಿಕಾರ್ಜುನ್ ಮಣ್ಣಿನ ಆರೋಗ್ಯದ ಬಗ್ಗೆ, ಭತ್ತ ಬೇಸಾಯ ವಿಜ್ಞಾನಿ ಹರೀಶ್ ಶೆಣೈ ಭತ್ತ ಬೇಸಾಯ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಶತನಮನ ಶತಸನ್ಮಾನ ಕಾರ್ಯಕ್ರಮದ ಗೌರವ ಸಲಹೆಗಾರರೂ ಆಗಿರುವ ಹಿರಿಯ ಉದ್ಯಮಿ ಕೆ. ಶ್ರೀಪತಿ ಭಟ್ ಅವರು ಸನ್ಮಾನಿತರಿಗೆ ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆ, ಸನ್ಮಾನ ಪತ್ರ ಹಾಗೂ ಕೆ. ಎನ್. ಭಟ್ ಶಿರಾಡಿಪಾಲರ ಸಾಧನಾ ಪತ್ರ ನೀಡಿ ಗೌರವಿಸಿದರು.


  ಚೌಟರ ಅರಮನೆಯ ಕುಲದೀಪ್ ಎಂ., ಕೃ.ವಿ.ವಿ.ಕೇಂದ್ರ ಮೂಡುಬಿದಿರೆಯ ಕೋಶಾಧಿಕಾರಿ ಪಿ.ಜಯರಾಜ್ ಕಾಂಬ್ಳಿ, ರೈತ ಸಂಘ ಮತ್ತು ತುಳು ಕೂಟ ಬೆದ್ರದ ಅಧ್ಯಕ್ಷ ಧನಕೀರ್ತಿ ಬಲಿಪ, ವಕೀಲೆ ಶ್ವೇತಾ, ಕೃ.ವಿ.ವಿ.ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.

  ಕೃ.ವಿ.ವಿ.ಕೇಂದ್ರದ ಮಾಜಿ ಅಧ್ಯಕ್ಷ ರಾಜವರ್ಮ ಬೈಲಂಗಡಿ ಸ್ವಾಗತಿಸಿದರು. ಶತನಮನ-ಶತಸನ್ಮಾನ ಕಾರ್ಯಕ್ರಮದ ಸಂಘಟಕ ಕೃಷ್ಣಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಇಂದು ನಡೆದ ಸನ್ಮಾನವು ನಾಲ್ಕನೇಯ ಸನ್ಮಾನವಾಗಿದ್ದು 100 ಜನರಿಗೆ ಸನ್ಮಾನಿಸುವ ಇರಾದೆಯನ್ನು ಸಮಿತಿಯು ಹೊಂದಿದೆ ಎಂದರು.

ಸಾಹಿತಿ ಸದಾನಂದ ನಾರಾವಿ ಕಾರ್ಯಕ್ರಮವನ್ನು ನಿರೂಪಿಸಿದರು. ಕೇಂದ್ರದ ಕಾರ್ಯದರ್ಶಿ ಬಿ.ಅಭಯಕುಮಾರ್ ವಂದಿಸಿದರು.

Post a Comment

0 Comments