ವಿದೇಶಿ ಜೈಲಿನಲ್ಲಿ ಕರಾವಳಿ ಯುವಕ: ಮನೆಗೆ ಭೇಟಿ ನೀಡಿ ಸಹಕಾರದ ಭರವಸೆ ನೀಡಿದ ಬಿಜೆಪಿ ನಿಯೋಗ

ಜಾಹೀರಾತು/Advertisment
ಜಾಹೀರಾತು/Advertisment

 ವಿದೇಶಿ ಜೈಲಿನಲ್ಲಿ ಕರಾವಳಿ ಯುವಕ: ಮನೆಗೆ ಭೇಟಿ ನೀಡಿ ಸಹಕಾರದ ಭರವಸೆ ನೀಡಿದ ಬಿಜೆಪಿ ನಿಯೋಗ:ಸಂಸದರಿಂದ ದೂರವಾಣಿ ಮೂಲಕ ಮಾತುಕತೆ





ಹ್ಯಾಕರ್ ವಂಚನೆಗೆ ಸಿಲುಕಿ ಸೌದಿ ಅರೇಬಿಯದ ಜೈಲಿನಲ್ಲಿರುವ ಕಡಬ ತಾಲೂಕಿನ ಐತೂರು ಗ್ರಾಮದ ಮೂಜುರು ಚಂದ್ರಶೇಖರ ರವರ ಮನೆಗೆ ಭಾರತೀಯ ಜನತಾ ಪಾರ್ಟಿಯ ನಿಯೋಗ ಇಂದು ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವಾನ ಹೇಳಿದೆ. ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ  ಚಂದ್ರಶೇಖರ ಅವರನ್ನು ಬಿಡುಗಡೆಗೊಳಿಸಲು ಸೂಕ್ತ ನೆರವು ನೀಡುವ ಭರವಸೆ ನೀಡಿದರು. 


ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ, ಜಿಲ್ಲಾ  ಬಿಜೆಪಿ ಪ್ರಶಿಕ್ಷಣ ಪ್ರಕೋಷ್ಠ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ. ಸುಳ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾದ ರಮೇಶ್ ಕಲ್ಪುರೆ. ಎಪಿಎಂಸಿ ಮಾಜಿ  ಸದಸ್ಯ, ಶಕ್ತಿ ಕೇಂದ್ರದ ಪ್ರಮುಖರಾದ ಮೇದಪ್ಪ ಗೌಡ. ಬಿಜೆಪಿ ಮಂಡಲ ಕಾರ್ಯದರ್ಶಿ ಪ್ರಕಾಶ್ ಎನ್ ಕೆ.  ಬಿಜೆಪಿ ಪ್ರಮುಖರಾದ ಸಂಕಪ್ಪ ಕೊಂಡೆ, ಗಣೇಶ್ ಮೂಜುರು, ಕೊಯಿಲ ಬಿಜೆಪಿ ಮಹಾ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಸುರೇಶ್ ದೇಂತಾರು, ಉಪಸ್ಥಿತರಿದ್ದರು.

Post a Comment

0 Comments