ಪಣಪಿಲದಲ್ಲಿ ಬಿಜೆಪಿ ಅಭ್ಯರ್ಥಿ ಪರ ಮಿಂಚಿನ ಮತ ಪ್ರಚಾರ: ಮಂಡಲ ಅಧ್ಯಕ್ಷರಿಂದ ಮನೆಮನೆ ಭೇಟಿ
ಮೂಲ್ಕಿ ಮೂಡುಬಿದಿರೆಯ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಉಮನಾಥ್ ಕೋಟ್ಯಾನ್ ರವರ ಪರವಾಗಿ ಶಿರ್ತಾಡಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಪಣಪಿಲ ಗ್ರಾಮದಲ್ಲಿ ಮಿಂಚಿನ ಮತ ಪ್ರಚಾರ ನಡೆದಿದ್ದು 50ಕ್ಕೂ ಮಿಕ್ಕ ಕಾರ್ಯಕರ್ತರಿಂದ ಮನೆಮನೆ ಭೇಟಿ ನಡೆದಿದೆ.
ಈ ಸಂದರ್ಭದಲ್ಲಿ ಮಂಡಲ ಬಿಜೆಪಿ ಅಧ್ಯಕ್ಷರಾದ ಸುನಿಲ್ ಆಳ್ವಾ, ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲ್ ಶೆಟ್ಟಿಗಾರ್,ಕೇಶವ ಕರ್ಕೇರ ಮಂಡಲದ ಕಾರ್ಯದರ್ಶಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ದಿವ್ಯ ವರ್ಮ ಬಲ್ಲಾಳ್ ಹಾಗೂ ಮಂಡಲ, ಗ್ರಾಮ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.
0 Comments