ಈ ಬಾರಿಯೂ ಉಮಾನಾಥ ಕೋಟ್ಯಾನ್ ಅವರಿಗೆ ನಮ್ಮ ಮತ-ಇರುವೈಲು ಗ್ರಾಮಸ್ಥರು
ಮೂಡುಬಿದಿರೆ:ಚುನಾವಣೆ ಪ್ರಚಾರ ಇಂದು ಕೊನೆಯ ದಿನವಾಗಿದ್ದು, ಮೂಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಇರುವೈಲು ಗ್ರಾಮದ ಜನರು ಒಕ್ಕೊರಲಿನಿಂದ ಈ ಬಾರಿಯೂ ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಅವರು ಗೆಲ್ಲುತ್ತಾರೆಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 20 ವರ್ಷಗಳಲ್ಲಿ ಆಗದ ಕೆಲಸ ಕಾರ್ಯಗಳು ಕೇವಲ ೫ ವರ್ಷದಲ್ಲಿ ಬಹಳಷ್ಟು ಅಭಿವೃದ್ಧಿಯನ್ನು ಕಂಡಿದೆ. ಇರುವೈಲು ಗ್ರಾಮಕ್ಕೆ ಮೊಟ್ಟ ಮೊದಲ ಬಾರಿಗೆ ೭ ಕೋಟಿಗೂ ಅಧಿಕ ವೆಚ್ಚದ ಅನುದಾನ ಬಿಡುಗಡೆಗೊಂಡು ಉತ್ತಮ ರೀತಿಯಲ್ಲಿ ಅಭಿವೃದ್ದಿಗೊಂಡಿದೆ. ಮತ್ತೊಮ್ಮೆ ಉಮಾನಾಥ ಕೋಟ್ಯಾನ್ ಅವರು ಬಂದರೆ ಉನ್ನತ ರೀತಿಯಲ್ಲಿ ಅಭಿವೃದ್ಧಿಯಾಗಲು ಸಾಧ್ಯ.
20 ವರ್ಷದಲ್ಲಿ ಇದುವರೆಗೂ ಆಗದ ಪಂಚಾಯತ್ ಕಟ್ಟಡ ಇದೀಗ ಶಾಶ್ವತವಾಗಿ ಪಂಚಾಯತ್ ಕಟ್ಟಡ, ಇರುವೈಲು ದೇವಾಲಯದ ಅಭಿವೃದ್ಧಿ ಕಾಮಗಾರಿ ಹಾಗೂ ತಡೆಗೋಡೆ ರಚನೆಗೆ ಒಟ್ಟು 75ಲಕ್ಷ ರೂ. ಹಾಗೂ ಇರುವೈಲು ಶಾಲಾ ಕಟ್ಟಡ ರಚನೆ ಹಾಗೂ ತಡೆಗೋಡೆ ರಚನೆಗೆ ರೂ.51.70 ಲಕ್ಷ ಅನುದಾನವನ್ನು ಉಮಾನಾಥ ಕೋಟ್ಯಾನ್ ಅವರು ಬಿಡುಗಡೆಗೊಳಿಸಿ, ಇರುವೈಲು ಗ್ರಾಮವನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸಲು ಶ್ರಮಿಸಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಈ ಬಾರಿಯೂ ಇರುವೈಲು ಗ್ರಾಮದಲ್ಲಿ ಗ್ರಾಮಸ್ಥರೆಲ್ಲರೂ ಉಮಾನಾಥ ಕೋಟ್ಯಾನ್ ಅವರಿಗೆ ಮತನೀಡಿ ಬಹುಮತದಿಂದ ಗೆಲ್ಲಿಸುವುದಾಗಿ ಗ್ರಾಮಸ್ಥರ ಪರವಾಗಿ ಸತೀಶ್ ತಂಗಿಲ ತಿಳಿಸಿದರು.
ಪಂಚಾಯತ್ ಸದಸ್ಯರುಗಳು, ಬಿಜೆಪಿ ಕಾರ್ಯಕರ್ತರು, ಈ ಸಂದರ್ಭದಲ್ಲಿದ್ದರು.
0 Comments