ರೂ.5.37 ಕೋ ವೆಚ್ಚದ ಕಿಂಡಿ ಅಣೆಕಟ್ಟು ಸಹಿತ ಮಿಜಾರು ಗರಡಿ ರಸ್ತೆ ಲೋಕಾರ್ಪಣೆ
ಮೂಡುಬಿದಿರೆ: ತೆಂಕಮಿಜಾರು ಗ್ರಾ.ಪಂ. ವ್ಯಾಪ್ತಿಯಲ್ಲಿ ರೂ 5.37 ಕೋ.ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಮಿಜಾರು ಉಳಾಯಂಗಡಿಯಿಂದ ಮಿಜಾರು ಗರಡಿ ಹಾಗೂ ತೆಂಕಮಿಜಾರು ಗ್ರಾಮದ ಪಡೀಲ್ ಪರಿಶಿಷ್ಟ ಕಾಲನಿಗೆ ಕಿಂಡಿ ಅಣೆಕಟ್ಟು ಸಹಿತ ಸಂಪರ್ಕಿಸುವ ಕಾಂಕ್ರೀಟ್ ರಸ್ತೆಯನ್ನು ಶಾಸಕ ಉಮಾನಾಥ ಎ.ಕೋಟ್ಯಾನ್ ಸೋಮವಾರ ಲೋಕಾರ್ಪಣೆಗೊಳಿಸಿದರು.
ನಂತರ ಮಿಜಾರು ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಆವರಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಶಾಸಕನಾಗಿ ಬಂದ ಮೇಲೆ ತಾನು ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಕರ್ತವ್ಯವನ್ನು ನಿರ್ವಹಿಸಿದ್ದೇನೆ. ಮುಂದಿನ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಇನ್ನೊಂದು ಬಾರಿ ಸ್ಪರ್ಧಿಸುವುದಿಲ್ಲವೆಂದು ನಿರ್ಧರಿಸಿದ್ದೆ ಆದರೆ ಜನರ, ಕಾರ್ಯಕರ್ತರ ಪ್ರೀತಿ, ಅಭಿಮಾನ ನೋಡಿ ಮತ್ತೊಮ್ಮೆ ಜನರಿಗಾಗಿ, ಊರಿನ ಅಭಿವೃದ್ಧಿಗಾಗಿ ಮೂಡುಬಿದಿರೆ ಸ್ಪರ್ಧಿಸುವುದಾಗಿ ಅಧಿಕೃತವಾಗಿ ಘೋಷಿಸಿದರು.
ರಸ್ತೆ ನಿರ್ಮಾಣವಾಗಲು ಕಾರಣೀಕರ್ತರಾಗಿರುವ, ಕೆಎಂಎಫ್ ಅಧ್ಯಕ್ಷ, ಜಿ.ಪಂ.ಸದಸ್ಯ ಕೆ.ಪಿ.ಸುಚರಿತ ಶೆಟ್ಟಿ, ತೆಂಕಮಿಜಾರು ಗ್ರಾ.ಪಂ.ನ ಮಾಜಿ ಅಧ್ಯಕ್ಷರುಗಳಾದ ಮರಿಯಡ್ಕ ರಮೇಶ್ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ, ಲಕ್ಷ್ಮೀಶ ಶೆಟ್ಟಿ, ಅಜಯ್ ರೈ, ಎಂಜಿನಿಯರ್ ಪ್ರಭಾಕರ್, ನೀರಾವರಿ ವಿಭಾಗ್ ಎಂಜಿನಿಯರ್ ರಾಕೇಶ್ , ಮುಗ್ರೋಡಿ ಕನ್ಟ್ರಕ್ಷನ್ಸ್ ನ ಪ್ರತಿನಿಧಿ ಸುಬ್ಬು, ಮಹಾಲಿಂಗ ಕನ್ಟ್ರಕ್ಷನ್ಸ್ ನ ಗೋಕುಲ್ ಶೆಟ್ಟಿ, ಪದ್ಮನಾಭ ಗುಂಡೀರು ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ತೆಂಕಮಿಜಾರು ಗ್ರಾ.ಪಂ.ಅಧ್ಯಕ್ಷ ರುಕ್ಮಿಣಿ, ಉಪಾಧ್ಯಕ್ಷೆ ಶಮಿತಾ ಶೆಟ್ಟಿ, ಸದಸ್ಯರಾದ ನೇಮಿರಾಜ್ ಶೆಟ್ಟಿ, ನಿಶಾ ಅಪ್ಪು ಶೆಟ್ಟಿ, ಕರುಣಾಕರ ಶೆಟ್ಟಿ, ಬಿ.ಎಲ್.ದಿನೇಶ್ ಕುಮಾರ್, ಮುಖ್ಯ ಅತಿಥಿಗಳಾದ ತಲ್ಲೂರು ರಾಜೇಶ್ ಶೆಟ್ಟಿ, ಮಿಜಾರು ಗುತ್ತು ನಾಗೇಶ್ ಹೆಗ್ಡೆ, ಶಂಕರ ರೈ,ಮಾಜಿ ಮೇಯರ್ ಮಿಜಾರುಗುತ್ತು ಶಶಿಧರ ಹೆಗ್ಡೆ,ವರದರಾಜ್ ಹೆಗ್ಡೆ, ತೋಟದ ಮನೆ ಸುರೇಶ್ ಶೆಟ್ಟಿ, ದೈವಸ್ಥಾನದ ಪ್ರಧಾನ ಅರ್ಚಕ ಪೂಮಾವರ ದಿನೇಶ್ ಪೆಜತ್ತಾಯ ಭಾಗವಹಿಸಿದ್ದರು.
ರಾಮಚಂದ್ರ ಮಿಜಾರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ನಾಗರಾಜ್ ವಂದಿಸಿದರು.
0 Comments