ನಾನು ಕಾಂಗ್ರೆಸ್ಸಿನಲ್ಲಿದ್ದಾಗ ಸಮೀಕ್ಷೆಯೇ ಸುಳ್ಳಾಗಿತ್ತು:ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಸಚಿವ ಸುಧಾಕರ್.!

ಜಾಹೀರಾತು/Advertisment
ಜಾಹೀರಾತು/Advertisment

 ನಾನು ಕಾಂಗ್ರೆಸ್ಸಿನಲ್ಲಿದ್ದಾಗ ಸಮೀಕ್ಷೆಯೇ ಸುಳ್ಳಾಗಿತ್ತು:ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಸಚಿವ ಸುಧಾಕರ್.!



2018ರಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 125 ರಿಂದ 130 ಸ್ಥಾನಗಳನ್ನು ಗೆಲ್ಲಲಿದೆ ಎಂದು ಅಂದು ಕೆಲ ಏಜೆನ್ಸಿಗಳು ಸಮೀಕ್ಷೆ ಹೇಳಿದ್ದವು. ಕಾಂಗ್ರೆಸ್ ಪಕ್ಷವೇ ಅಂದು ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ವೇ ನಡೆಸಲು ಮುಂದಾಗಿದ್ದು ನಿರ್ಧಿಷ್ಠ ಸಂಸ್ಥೆಗೆ ವರದಿ ನೀಡುವಂತೆ ಕೇಳಿತ್ತು. 


ಅಂದು ಆ ಸಂಸ್ಥೆ ನೀಡಿದ ಅಮೀಕ್ಷೆಯ ಪ್ರಕಾರ ಅಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 125 ರಿಂದ 130 ಸ್ಥಾನಗಳು ಬರಬೇಕಿತ್ತು. ಆದರೆ ಅಂದು ನಮಗೆ (ಕಾಂಗ್ರೆಸ್) ಸಿಕ್ಕಿದ್ದು ಕೇವಲ 79 ಸ್ಥಾನಗಳು. ಇಂದೂ ಅದೇ ಸಂಸ್ಥೆಗಳನ್ನು ಇಟ್ಟುಕೊಂಡು ಕಾಂಗ್ರೆಸ್ ಪಕ್ಷದವರು ಸಮೀಕ್ಷೆಗಳನ್ನು ನಡೆಸುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಸಮೀಕ್ಷೆಗಳು ಸುಳ್ಳಾಗುತ್ತದೆ. ಭಾರತೀಯ ಜನತಾ ಪಾರ್ಟಿ ಬಹುಮತದಿಂದ ಗೆದ್ದು ಬರಲಿದೆ ಎಂದು ಸಚಿವ ಡಾ.ಸುಧಾಕರ್ ಹೇಳಿದ್ದಾರೆ.


ಸುವರ್ಣ ಸುದ್ಧಿ ವಾಹಿನಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಚಿವರು ಈ ಸ್ಪೋಟಕ ಮಾಹಿತಿಯನ್ನು ಬಿಚ್ಚಿಟ್ಟರು.

Post a Comment

0 Comments