ತೆಂಕಮಿಜಾರು :ನೂತನ ಅಂಗನವಾಡಿ ಕೇಂದ್ರಗಳ ಉದ್ಘಾಟನೆ
ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಹಾಗೂ ತೆಂಕಮಿಜಾರು ಗ್ರಾಮ ಪಂಚಾಯತ್ ಇವುಗಳ ಸಹಯೋಗದಲ್ಲಿ ತೆಂಕಮಿಜಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಗಮಿಜಾರು ಗ್ರಾಮದ ಮೈಂದೇರಿ ಹಾಗೂ ಹಾಗೂ ಕರಿಕುಮೇರಿನ ಅಣ್ಣಪ್ಪ ನಗರಕ್ಕೆ ನೂತನವಾಗಿ ಮಂಜೂರಾಗಿರುವ ಅಂಗನವಾಡಿ ಕೇಂದ್ರಗಳನ್ನು ಶಾಸಕ ಉಮಾನಾಥ ಎ. ಕೋಟ್ಯಾನ್ ಸೋಮವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಕೋಟ್ಯಾನ್, ತೆಂಕಮಿಜಾರಿನಲ್ಲಿ ಮೈಂದೇರಿ ಭಾಗದ ಜನರ ಬೇಡಿಕೆಯ ಮೇರೆಗೆ ಮಂಜೂರಾಗಿರುವ ಅಂಗನವಾಡಿ ಕೇಂದ್ರವನ್ನು ಇದೀಗ ತಾತ್ಕಾಲಿಕವಾಗಿ ಶೆಡ್ಡಿನಲ್ಲಿ ಆರಂಭಿಸಲು ಇಲಾಖೆಯಿಂದ ಆದೇಶ ಬಂದಿದೆ. ಅಂಗನವಾಡಿ ನಿರ್ಮಿಸಲು ಸ್ಥಳ ಈಗಾಗಲೇ ನಿಗದಿಯಾಗಿದ್ದು, ಅಂಗನವಾಡಿ ಕೇಂದ್ರ ನಿರ್ಮಿಸಲು ಬೇಕಾಗಿರುವ ಅನುದಾನವನ್ನು ಒದಗಿಸುವ ಪ್ರಯತ್ನವನ್ನು ಮಾಡಿ ಆದಷ್ಟು ಬೇಗ ಅಂಗನವಾಡಿ ಕೇಂದ್ರವನ್ನು ಸ್ವಂತ ಕಟ್ಟಡದಲ್ಲಿ ಮಾಡಿಕೊಡಲಾಗುವುದು. ಕರಿಕುಮೇರು ವ್ಯಾಪ್ತಿಗೆ ಬೇಕಾಗಿರುವ ಸ್ವಂತ ಆರೋಗ್ಯ ಕೇಂದ್ರವನ್ನು ಅಶ್ವಥಪುರದ ಸಂತೆಕಟ್ಟೆಯಲ್ಲಿ ಆರಂಭಿಸಲು ಸಿಎಚ್‌ಒ ಗೆ ಆದೇಶವನ್ನು ನೀಡಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯಿಂದ ನೀಡಿರುವ ಕಿಟ್‌ಗಳನ್ನು ಸಾಂಕೇತಿಕವಾಗಿ ಕಾರ್ಮಿಕರಿಗೆ ವಿತರಿಸಲಾಯಿತು.
ತೆಂಕಮಿಜಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ರುಕ್ಮಿಣಿ, ಉಪಾಧ್ಯಕ್ಷೆ ಸಮಿತಾ ಶೆಟ್ಟಿ, ಸದಸ್ಯರುಗಳಾದ ನೇಮಿರಾಜ್ ಶೆಟ್ಟಿ, ಲಿಂಗಪ್ಪ ಗೌಡ, ಕರುಣಾಕರ ಶೆಟ್ಟಿ, ದಿನೇಶ್ ಕುಮಾರ್ ಬಿ.ಎಲ್, ಶಾಲಿನಿ ಸಾಲ್ಯಾನ್, ವಿದ್ಯಾನಂದ ಶೆಟ್ಟಿ ಹಾಗೂ ಮಹೇಶ್ ಗೌಡ, ಅಂಗನವಾಡಿ ಕೇಂದ್ರಗಳಿಗೆ ತಾತ್ಕಾಲಿಕವಾಗಿ ಸ್ಥಳಾವಕಾಶ ನೀಡಿರುವ ಮೋಹನ್ ಗೌಡ ಮತ್ತು ಶಂಕರ್, ಅಂಗನವಾಡಿ ಕಾರ್ಯಕರ್ತೆಯರಾದ ಪ್ರಮೀಳಾ, ಸುಮತಿ, ನಳಿನಾಕ್ಷಿ,ಸಹಾಯಕಿ ದಯಾವತಿ, ಹಿರಿಯರಾದ ಕೃಷ್ಣ ಶೆಟ್ಟಿ, ಆಶಾ ಕಾರ್ಯಕರ್ತೆಯರು, ಪಕ್ಷದ ಕಾರ್ಯಕರ್ತರು, ಗ್ರಾಮಸ್ಥರು ಈ ಸಂದರ್ಭದಲ್ಲಿದ್ದರು.
ಮೇಲ್ವೀಚಾರಕಿ ಕಾತ್ಯಾಯಿನಿ ಕಾರ್ಯಕ್ರಮ ನಿರೂಪಿಸಿದರು.
0 Comments