ಸಮಾಜ ಸೇವಕ ಹುರ್ಲಾಡಿ ರಘುವೀರ್ ಶೆಟ್ಟಿಗೆ "ಸಮಾಜ ಸೇವಾ ರತ್ನ" ಪ್ರಶಸ್ತಿ ಪ್ರದಾನ

ಜಾಹೀರಾತು/Advertisment
ಜಾಹೀರಾತು/Advertisment

 ಸಮಾಜ ಸೇವಕ ಹುರ್ಲಾಡಿ ರಘುವೀರ್ ಶೆಟ್ಟಿಗೆ "ಸಮಾಜ ಸೇವಾ ರತ್ನ" ಪ್ರಶಸ್ತಿ ಪ್ರದಾನ 



ಮೂಡುಬಿದಿರೆ: ಕರಾವಳಿ ಕೇಸರಿ ಸೇವಾ ಟ್ರಸ್ಟ್(ರಿ) ಬೆದ್ರ ಹಾಗೂ ಕರಾವಳಿ ಕೇಸರಿ ಮಹಿಳಾ ಘಟಕ ದರೆಗುಡ್ಡೆ ಇವುಗಳ ಸಹಭಾಗಿತ್ವದಲ್ಲಿ  ಶನೀಶ್ವರ ಪೂಜೆ, ಧಾರ್ಮಿಕ ಸಭೆ ಮತ್ತು ಸಾಂಸ್ಕçತಿಕ ಕಾರ್ಯಕ್ರಮ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ಬಡ ಕುಟುಂಬಗಳಿಗೆ ಸಹಾಯಧನ ವಿತರಣಾ ಕಾರ್ಯಕ್ರಮವು ದರೆಗುಡ್ಡೆಯ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಶನಿವಾರ ನಡೆಯಿತು.


  ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸಮಾಜ ಸೇವಕ, ಕೊಡುಗೈ ದಾನಿ ಹುರ್ಲಾಡಿ ರಘವೀರ್ ಶೆಟ್ಟಿ ಅವರಿಗೆ "ಸಮಾಜ ಸೇವಾ ರತ್ನ" ಪ್ರಶಸ್ತಿ ಹಾಗೂ  ಸಾರಿಗೆ ಉದ್ಯಮಿ, ಜಗದೀಶ್ ಕೋಟ್ಯಾನ್ ಅವರಿಗೆ "ಉದ್ಯಮ ರತ್ನ" ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

  

ಗೌರವ : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ಅಂತರಾಷ್ಟ್ರೀಯ ಕರಾಟೆ ಪಟು ಭಾಸ್ಕರ ಪಾಲಡ್ಕ ಮತ್ತು ರಂಗಭೂಮಿ ಕಲಾವಿದ ಅಚ್ಯುತ ಮಾರ್ನಾಡ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಯುವವಾಗ್ಮಿ ಹಾರಿಕಾ ಮಂಜುನಾಥ್ ಅವರು ದಿಕ್ಸೂಚಿ ಭಾಷಣ ಮಾಡಿದರು.

ಶಾಸಕ ಉಮಾನಾಥ.ಎ ಕೋಟ್ಯಾನ್, ಉದ್ಯಮಿ ರವೀಂದ್ರ ಶೆಟ್ಟಿ ಬಜಗೋಳಿ, , ನ್ಯಾಯವಾದಿ ಶರತ್ ಶೆಟ್ಟಿ, ಮಂಗಳೂರು ಹಿಂ.ಜಾ.ವೇದಿಕೆಯ ಸಹಸಂಚಾಲಕ ಸತೀಶ್ ಮುಂಚೂರು, ಉದ್ಯಮಿ. ವೈ.ವಿ ಸತ್ಯಪ್ರಕಾಶ್ ಹೆಗ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕರಾವಳಿ ಕೇಸರಿಯ  ಅಧ್ಯಕ್ಷ ಸಂದೀಪ್ ಸುವರ್ಣ ಕೆಲ್ಲಪುತ್ತಿಗೆ, ಗೌರವಾಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು, ಮಹಿಳಾ ಘಟಕದ ಅಧ್ಯಕ್ಷೆ ಶಶಿಕಲಾ ಜೆ ಸಾಲ್ಯಾನ್ ಮತ್ತಿತರ ಪದಾಧಿಕಾರಿಗಳು, ಗ್ರಾಮಸ್ಥರು ಈ ಸಂದರ್ಭದಲ್ಲಿದ್ದರು. 

ಕರಾವಳಿ ಕೇಸರಿಯ ಸ್ಥಾಪಕಾಧ್ಯಕ್ಷ ಸಮಿತ್‌ರಾಜ್ ದರೆಗುಡ್ಡೆ ಸ್ವಾಗತಿಸಿದರು. ಗಣೇಶ್ ಬಿ.ಅಳಿಯೂರು ಮತ್ತು ರಾಮ್ ಕುಮಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Post a Comment

0 Comments