ಮೂಲ್ಕಿಯಲ್ಲಿ ಬಿಜೆಪಿ ಯುವಮೋರ್ಚಾದಿಂದ ಮಿಂಚಿನ ಅಭಿಯಾನ: ಮನೆಮನೆಗೆ ತೆರಳಿ ಸರ್ಕಾರದ ಸಾಧನೆ ತಿಳಿಸಿದ ಕಾರ್ಯಕರ್ತರು
ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ಪ್ರಚಾರದ ಭರಾಟೆಗಳು ಗರಿಗೆದರಿದೆ. ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ರವರ ಸೂಚನೆಯಂತೆ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ವಿಜಯ ಸಂಕಲ್ಪ ಅಭಿಯಾನ ನಡೆಯುತ್ತಿದೆ.
ಬಿಜೆಪಿ ಯುವಮೋರ್ಚಾ ಮೂಲ್ಕಿ ಮೂಡಬಿದಿರೆ ಮಂಡಲದ ವತಿಯಿಂದ ವಿಜಯ ಸಂಕಲ್ಪ ಅಭಿಯಾನದ ಅಂಗವಾಗಿ ಮೂಲ್ಕಿ ನಗರದಲ್ಲಿ ಬೃಹತ್ ಅಭಿಯಾನ ನಡೆಯಿತು. ಬಿಜೆಪಿ ಕಾರ್ಯಕರ್ತರು ಮನೆಮನೆಗೆ ತೆರಳಿ ಪಕ್ಷ ಹಾಗೂ ಸರ್ಕಾರದ ಸಾಧನೆಯನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಸುನಿಲ್ ಆಳ್ವ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಜಯ ಸಂಕಲ್ಪ ಅಭಿಯಾನದ ಜಿಲ್ಲಾ ಸಂಚಾಲಕರಾದ ಕಸ್ತೂರಿ ಪಂಜ, ಅಭಿಯಾನದ ಮಂಡಲ ಸಂಚಾಲಕರಾದ ಅಭಿಲಾಷ್ ಕಟೀಲು,ರಾಜ್ಯ ಮಾಧ್ಯಮ ವಿಭಾಗದ ಕಾಂತಿ ಶೆಟ್ಟಿ, ಯುವಮೋರ್ಚಾದ ಮಂಡಲ ಅಧ್ಯಕ್ಷರಾದ ಅಶ್ವಥ್ ಪಣಪಿಲ,ಮಂಡಲ ಪ್ರಧಾನ ಕಾರ್ಯದರ್ಶಿ ಕೇಶವ್ ಕರ್ಕೇರ, ನಗರ ಪಂಚಾಯತ್ ಸದಸ್ಯರಾದ ಶೈಲೇಶ್ ಕುಮಾರ್, ಯುವಮೋರ್ಚ ಪ್ರಧಾನ ಕಾರ್ಯದರ್ಶಿಗಳಾದ ಧನುಷ್ ಕುಲಾಲ್ ಹಾಗೂ ಚರಣ್ ಪೂಜಾರಿ, ಜಿಲ್ಲಾ SC ಮೋರ್ಚಾ ಕಾರ್ಯದರ್ಶಿ ವಿಠಲ್ N.M, ವೀರಣ್ಣ, ಉಮೇಶ್ ಮೂಲ್ಕಿ, ಶಶಿಕುಮಾರ್ ಹಾಗೂ ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.
0 Comments