ಪೆ.17 ರಿಂದ 25ರವರೆಗೆ ತೋಡಾರು ಉರೂಸ್

ಜಾಹೀರಾತು/Advertisment
ಜಾಹೀರಾತು/Advertisment

 ಪೆ.17 ರಿಂದ 25ರವರೆಗೆ ತೋಡಾರು ಉರೂಸ್ 



ಮೂಡುಬಿದಿರೆ: ತೋಡಾರು ಬದ್ರಿಯಾ ಸುನ್ನೀ ಜುಮ್ಮಾ ಮಸೀದಿಯ ಆವರಣದಲ್ಲಿ ಸಯ್ಯಿದ್ ವಲಿಯುಲ್ಲಾಹಿ (ಖ.ಸಿ) ರವರ ಹೆಸರಿನಲ್ಲಿ ಪ್ರತೀ ಎರಡು ವರ್ಷಗಳಿಗೊಮ್ಮೆ ಆಚರಿಸಿಕೊಂಡು ಬರುತ್ತಿರುವ ಉರೂಸ್ ಸಮಾರಂಭವು ಪೆ.17 ರಿಂದ 25 ರವರೆಗೆ ನಡೆಯಲಿದೆ ಎಂದು ಉರೂಸ್ ಸಮಿತಿ ಅಧ್ಯಕ್ಷ ಮುನೀರ್ ಇಸ್ಮಾಯಿಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಫೆ.17ರಂದು ಜುಮ್ಮಾ ನಮಾಝ್ ಬಳಿಕ ಅಬ್ದುಲ್ಲಾ ರಹ್ಮಾನಿ ಬಾಂಬಿಲ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ತೋಡಾರು ಬದ್ರಿಯಾ ಜುಮ್ಮಾ ಮಸೀದಿಯ ಅಧ್ಯಕ್ಷ ಎಂ.ಎ.ಎಸ್. ಆಸಿಫ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಸಾಯಂಕಾಲ ಸ್ವಲಾತ್ ಹಾಗೂ ಮಜ್ಲಿಸುನ್ನೂರ್ ವಾರ್ಷಿಕ ನಡೆಯಲಿದ್ದು, ದ.ಕ.ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್,ಶೈಖುನಾ ಉಸ್ಮಾನುಲ್ ಫೈಝಿ ತೋಡಾರು ಹಾಗೂ ಸಯ್ಯಿದ್ ಜಲಾಲುದ್ದೀನ್ ತಂಙಳ್ ಕುನ್ನುಂಗೈ ಭಾಗವಹಿಸಲಿದ್ದಾರೆ.


18ರಂದು ಇರ್ಷಾದ್ ದಾರಿಮಿ ಮಿತ್ತಬೈಲ್, ಅಶ್ರಫ್ ಫೈಝಿ ಮಿತ್ತಬೈಲ್ ಅವರು ಭಾಗವಹಿಸಲಿರುವರು. 19ರಂದು ಸಯ್ಯಿದ್ ಅಕ್ರಮ್ ಆಲಿ ತಂಙಳ್ ಅಂಗರಕರ್ಯ ಹಾಗೂ ಸ್ವದಕತುಲ್ಲಾ ಫೈಝಿ ಅಡ್ಡೂರು ಅವರು ಭಾಗವಹಿಸಿ ಧಾರ್ಮಿಕ ಪ್ರವಚನ ನೀಡಲಿದ್ದಾರೆ. ಫೆ.20ರಂದು ಉಸ್ತಾದ್ ವಲಿಯುದ್ದೀನ್ ಫೈಝಿ ವಾಯಕ್ಕಾಡ್ ಅವರ ನೇತೃತ್ವದಲ್ಲಿ ನೂರೇ ಅಜ್ಮೀರ್ ನಡೆಯಲಿದ್ದು ಹುಸೈನ್ ದಾರಿಮಿ ರೆಂಜಲಾಡಿ ಅವರು ಪ್ರಾಸ್ತಾವಿಕ ಭಾಷಣ ಮಾಡಲಿರುವರು.


ಫೆ.21ರಂದು ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ಕುನ್ನುಂಗೈ ಅವರು ದುವಾ ನೇತೃತ್ವ ವಹಿಸಲಿದ್ದು, ಅಸ್ಲಮ್ ಅಝ್ಹರಿ ಪೊಯ್ಕಂಕಡವು ಮುಖ್ಯ ಪ್ರಭಾಷಣಗಾರರಾಗಿರುವರು. 22ರಂದು ಶೈಖುನಾ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ನೇತೃತ್ವದಲ್ಲಿ ದುವಾ ನೆರವೇರಲಿದ್ದು,ಆಶಿಕ್ ದಾರಿಮಿ ಅಲಪುಝ ಮುಖ್ಯ ಪ್ರಭಾಷಣಗಾರರಾಗಿರುವರು. 23 ರಂದು ಸಯ್ಯಿದ್ ಬಾಅಲವಿ ತಂಙಳ್ ಕುಕ್ಕಾಜೆ ಅದುವಾ ನೇತೃತ್ವ ವಹಿಸಲಿದ್ದು, ಅಬ್ದುಲ್ಲಾ ರಹ್ಮಾನಿ ಬಾಂಬಿಲ ಮುಖ್ಯ ಪ್ರಭಾಷಣಗಾರರಾಗಿ ಭಾಗವಹಿಸಲಿದ್ದಾರೆ. 24ರಂದು ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ಬೆಳ್ತಂಗಡಿ ನೇತೃತ್ವದಲ್ಲಿ ದುವಾ ನೆರವೇರಲಿದ್ದು, ಕಾಸರಗೋಡಿನ ಖಲೀಲ್ ಹುದವಿ ಅಲ್ ಮಾಲಿಕಿ ಅವರು ಮುಖ್ಯ ಪ್ರಭಾಷಣಗಾರರಾಗಿದ್ದರು. ಅಸರ್ ನಮಾಝ್ ಬಳಿಕ ಊರವರಿಂದ ಸಂದಲ್ ಮೆರವಣಿಗೆ ನಡೆಯಲಿದೆ.


ಫೆ.25 ರಂದು ಉರೂಸ್ ಸಮಾರೋಪ ಸಮಾರಂಭದಲ್ಲಿ ಅಸರ್ ನಮಾಝ್ ಬಳಿಕ ಖತಮುಲ್ ಖುಆðನ್ ಹಾಗೂ ಮೌಲಿದ್ ಪಾರಾಯಣ ನಡೆಯಲಿದ್ದು,ಇಶಾ ನಮಾಝ್ ಬಳಿಕ ಸಯ್ಯಿದ್ ಸಫ್ವಾನ್ ತಂಙಳ್ ಏಝಮುಲ ಕೇರಳ ಅವರು ದುವಾ ಆಶೀರ್ವಚನ ನೀಡಲಿದ್ದಾರೆ. ಎಸ್.ಕೆ.ಎಸ್.ಎಸ್.ಎಫ್ ರಾಜ್ಯಾಧ್ಯಕ್ಷ ರಫೀಕ್ ಅಹ್ಮದ್ ಹುದವಿ ಕೋಲಾರ ಅವರು ಪ್ರಸ್ತಾವನೆಗೈಯಲಿದ್ದಾರೆ. ಅಬ್ದುಲ್ಲಾ ಸಲೀಮ್ ವಾಫೀ ಅವರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಸಾಯಂಕಾಲ ನಡೆಯಲಿರುವ ಸರ್ವಧರ್ಮೀಯ ಸ್ನೇಹಕೂಟದಲ್ಲಿ ವಿವಿಧ ಕ್ಷೇತ್ರಗಳ ಮುಖಂಡರು ಭಾಗವಹಿಸಲಿದ್ದಾರೆ ಎಂದು ಕಾರ್ಯದರ್ಶಿ ಮುಹಮ್ಮದ್ ಯೂಸುಫ್ ಅವರು ಮಾಹಿತಿ ನೀಡಿದರು.


ಜಮಾತ್ ಕಮಿಟಿಯ ಅಧ್ಯಕ್ಷ ಎಂ.ಎ.ಎಸ್. ಆಸಿಫ್, ಉರೂಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಬಾವಾ ಮುಹಿಯುದ್ದೀನ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Post a Comment

0 Comments