ಮೂಡಬಿದ್ರೆಯ ನೋಟರಿ ವಕೀಲೆ ಅಕ್ಷತಾ ಆದರ್ಶ್ ಅವರಿಗೆ ಬೆಂಗಳೂರಿನ ಅಲಯನ್ಸ್ ಯೂನಿವರ್ಸಿಟಿ ಘಟಿಕೋತ್ಸವದಲ್ಲಿ ಸಚಿವ ಸಿ.ಎನ್. ಅಶ್ವತ್ಥ ನಾರಾಯಣ್ ಅವರು ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು. ಕಾನೂನು ವಿಷಯದಲ್ಲಿ ಪಿ.ಎಚ್.ಡಿ ಅಧ್ಯಯನ ಮಾಡಿ ಮಂಡಿಸಿದ ಮಹಾಪ್ರಬಂಧ (A comparitive study of Right to privacy as a human right with special reference to India, United Kingdom and USA") ವನ್ನು ಪರಿಗಣಿಸಿ ಬೆಂಗಳೂರಿನ ಅಲಯನ್ಸ್ ವಿವಿಯು 'ಡಾಕ್ಟರ್ ಆಫ್ ಫಿಲಾಸಫಿ ಇನ್ ಲಾ ' ಪದವಿ ನೀಡಿ ಗೌರವಿಸಿದೆ.
ಘಟಿಕೋತ್ಸವದಲ್ಲಿ ಕರ್ನಾಟಕ ಕಾನೂನು ಆಯೋಗದ ಮುಖ್ಯಸ್ಥ, ಕೇರಳ ಉಚ್ಛನ್ಯಾಯಾಲಯದ ವಿಶ್ರಾಂತ ಮುಖ್ಯ ನ್ಯಾಯಮೂರ್ತಿ ಎಸ್.ಆರ್. ಬನ್ನೂರುಮಠ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ಬೈಂದೂರು ತಾಲೂಕು ಬೋಳಂಬಳ್ಳಿ ಧರ್ಮರಾಜ್ ಜೈನ್ ಹಾಗೂ ವನಿತಾ ಧರ್ಮರಾಜ್ ಅವರ ಪುತ್ರಿಯಾಗಿರುವ ಅಕ್ಷತಾ ಮೂಡಬಿದ್ರೆ ಚೌಟರ ಅರಮನೆ ಆದರ್ಶ ಎಂ. ಅವರ ಪತ್ನಿ.
0 Comments