ಕ್ಷತ್ರಿಯ ಪ್ರಾಧಿಕಾರ ನಿಗಮ ಮಂಡಳಿ ಸ್ಥಾಪಿಸಲು ಒತ್ತಾಯ : Dr. ಪ್ರಮೋದ್ ಆರ್ ನಾಯಕ್

ಜಾಹೀರಾತು/Advertisment
ಜಾಹೀರಾತು/Advertisment

 


ಮೂಡುಬಿದಿರೆ : ರಾಮಕ್ಷತ್ರಿಯ ಸೇವಾ ಸಂಘ(ರಿ.)ರಾಮಕ್ಷತ್ರಿಯ ಮಹಿಳಾ ವೃಂದ.ರಾಮಕ್ಷತ್ರಿಯ ಯುವ ವೃಂದ,ರಾಮಕೃತಿಯ ಭಜನಾ ಸಮಿತಿಗಳ ವಾರ್ಷಿಕೋತ್ಸವ  ಸಮಾರಂಭ   ಸಮಾಜ ಮಂದಿರ ಸಭಾದಲ್ಲಿ ನಡೆಯಿತು.

ಜಿಲ್ಲಾ ರಾಮಕ್ಷತ್ರಿಯ ಸಂಘಗಳ ಒಕ್ಕೂಟದ ಅಧ್ಯಕ್ಷ ಡಾ| ಪ್ರಮೋದ್ ಆರ್ ನಾಯಕ್

ಅವರು ಕಾರ್ಯಕ್ರಮ ಉದ್ಘಾಟಿಸಿ ಕ್ಷತ್ರಿಯ ರಾಜ್ಯ ಒಕ್ಕೂಟಗಳ ಸಮಾವೇಶದಲಿ ರಾಮಕ್ಷತ್ರಿಯರು ಭಾಗವಹಿಸಿ ಪ್ರಾಧಿಕಾರ ನಿಗಮ ಸ್ಥಾಪಿಸಲು ಸರಕಾರಕ್ಕೆ ಮನವಿ ಸಲ್ಲಿಸಬೇಕೆಂದು ಕರೆ  ನೀಡಿದರು. 

ಅಧ್ಯಕ್ಷತೆಯನ್ನು ರಾಮಕ್ಷತ್ರಿಯ ಸೇವಾ ಸಂಘದ ಸಂಘದ ಅಧ್ಯಕ್ಷರಾದ ಸುರೇಂದ್ರ ಅತ್ತಾವರ್ ವಹಿಸಿದರು.

ಕಲ್ಲಬೆಟ್ಟು ಶ್ರೀ ಮಹಾಮಾಯಿ ದೇವಸ್ಥಾನದ ಅರ್ಚಕರಾದ ಸೂರ್ಯ  ಆರ್ ರಾವ್ ರವರಿಗೆ ಸನ್ಮಾನಿಸಲಾಯಿತು.

ಮಂಜುನಾಥ್ ಹೆಬ್ಬಾಗಿಲು,ವೃ೦ದಾ ಸುಬ್ರಹ್ಮಣ್ಯ, ಮೂಡುಬಿದಿರೆ ಅಬಕಾರಿ ಇಲಾಖೆಯ ಉಪನಿರೀಕ್ಷಕರಾದ  ಹರೀಶ್ ಕುಮಾರ್ ಕೊಪ್ಪಲು,

ಜಿಲ್ಲಾ ಒಕ್ಕೂಟದ ಪದಾಧಿಕಾರಿಗಳಾದ  ಡಾ. ರವೀಂದ್ರ, ಧರ್ಮಪ್ರಕಾಶ್,  ರವೀಂದ್ರ ಕೆ., ಪ್ರೇಮ ಚಂದ್ರಶೇಖರ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸಂಘದ ಪದಾಧಿಕಾರಿಗಳಾದ ಶಿವಶಂಕರ, ರಾಮಚಂದ್ರ ರಾವ್, ಶಾಲಿನಿ ಎನ್.ಕೋಟೆ, ಮಮತಾ ಆನಂದ್ ರಾವ್,ಶಾರದಾ ಬಿ. ರಾವ್,ಅಮರ್ ಕೋಟೆ, ರಾಜೇಶ್ ಮಾರೂರು, ಶ್ರೀಕಾಂತ್ ರಾವ್, ಶಾಂತಿ ಗಣೇಶ್ ಉಪಸ್ಥಿತರಿದ್ದರು.

 ಶಕುಂತಳ ರಾಮಚಂದ್ರ, ಸೌಜನ್ಯ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು. ಪುರಸಭಾ ಸದಸ್ಯ ರಾಜೇಶ್ ಕೋಟೆಗಾರ್ ಅವರು ವಂದಿಸಿದರು.

Post a Comment

0 Comments