ಇರುವೈಲು ದೇಗುಲದ 73 ನೇ ವರ್ಷದ, ಭಜನಾ ಮಂಗಲೋತ್ಸವ ಸಂಪನ್ನ

ಜಾಹೀರಾತು/Advertisment
ಜಾಹೀರಾತು/Advertisment

  

ಮೂಡುಬಿದಿರೆ: ತಾಲೂಕಿನ ಇರುವೈಲು  ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿಯ 73 ನೇ ವರ್ಷದ ಭಜನಾ ಮಂಗಲೋತ್ಸವವು ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಸನ್ನಿಧಿಯಲ್ಲಿ  ಸೂರ್ಯೋದಕ್ಕೆ  ಸಂಪನ್ನಗೊಂಡಿತು.

 ಗಣಪತಿ ಹೋಮ, ಅಪ್ಪದ ಪೂಜೆ, ಶ್ರೀದೇವಿ ಅಮ್ಮನವರಿಗೆ ನವಕ, ಸರ್ವಾಲಂಕಾರ ಪೂಜೆ, ಮಹಾಪೂಜೆ, ಮತ್ತು ನಾಗದೇವರು, ನಾಗಬ್ರಹ್ಮ, ಮಾಡ್ಲಾಯಿ ಹೊಸಮರಾಯ ದೈವಗಳಿಗೆ ತಂಬಿಲ ಸೇವೆಯ ನಂತರ ಮಧ್ಯಾಹ್ನ 1 ರ ನಂತರ ಹಾಗೂ ರಾತ್ರಿ ಮಹಾಪೂಜೆಯ ಬಳಿಕ  ಮಹಾಅನ್ನಸಂತರ್ಪಣೆ ನಡೆಯಿತು. 

 ದೇವಾಲಯದ ಅರ್ಚಕ ರಾಘವೇಂದ್ರ ಆಸ್ರಣ್ಣ ದೀಪ ಬೆಳಗಿಸುವ ಮೂಲಕ ಭಜನಾ ಸಂಕೀರ್ತನೆಗೆ ಚಾಲನೆ ನೀಡಿದರು. ದೇವಸ್ಥಾನದ ವ್ಯವಸ್ಥಾಪಣಾ ಸಮಿತಿಯ ಅಧ್ಯಕ್ಷ ಐ. ಕುಮಾರ್ ಶೆಟ್ಟಿ ಇರುವೈಲು, ಸರ್ವ ಸದಸ್ಯರು, ಭಜನಾ ಮಂಡಳಿಯ ಅಧ್ಯಕ್ಷ ಬಾಲಚಂದ್ರ ಶೆಟ್ಟಿ, ಮಂಡಳಿಯ ಪದಾಧಿಕಾರಿಗಳು, ಸದಸ್ಯರುಗಳು, ದೇವಸ್ಥಾನದ ಸಿಬ್ಬಂದಿ ವರ್ಗ, ಗುತ್ತು ಬಾಳಿಕೆ ಮನೆತನದ ಪ್ರಮುಖರು, ಭಕ್ತಾದಿಗಳು ಪಾಲ್ಗೊಂಡಿದ್ದರು. ವಿವಿಧ ಭಜನಾ ತಂಡಗಳು ಭಜನಾ ಸಂಕೀರ್ತನೆಯಲ್ಲಿ ಭಾಗವಹಿಸಿದ್ದವು.

Post a Comment

0 Comments