ಮೂಡುಬಿದಿರೆಯಲ್ಲಿ ದುರ್ಗಾ ಮೆಡಿಕಲ್ಸ್ ಶುಭಾರಂಭ
ಮೂಡುಬಿದಿರೆ: ಬೆಳುವಾಯಿ ಗ್ರಾಮ ಪಂಚಾಯತ್ ಸದಸ್ಯ ಭರತ್ ಶೆಟ್ಟಿ ಅವರ ಪತ್ನಿ ಪ್ರಿಯಾಂಕ ಭರತ್ ಶೆಟ್ಟಿ ಮಾಲಕತ್ವದ ದುರ್ಗಾ ಮೆಡಿಕಲ್ಸ್ ಮೂಡುಬಿದಿರೆ ಕಲ್ಸಂಕದ ವಾಸುದೇವ ಕಾಂಪ್ಲೆಕ್ಸ್ ನಲ್ಲಿ ಭಾನುವಾರ ಶುಭಾರಂಭಗೊಂಡಿತು.
ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿ ಮಾತನಾಡಿ, ರೋಗ ರುಜಿನಗಳು ಯಾರಿವಗೂ ಬರಬಾರದು ಆದರೆ ಬಂದಾಗ ಮೆಡಿಕಲ್ಸ್ ಗಳ ಅಗತ್ಯವಿದೆ. ಜನರ ಅವಶ್ಯಕತೆಗಳಿಗೆ ಅನುಗುಣವಾಗಿ ಸ್ಪಂದಿಸಿ ಉತ್ತಮ ರೀತಿಯಲ್ಲಿ ಸೇವೆಯನ್ನು ನೀಡುವಂತಾಗಬೇಕು. ಈ ಮೆಡಿಕಲ್ ನಲ್ಲಿ ಮಾಜಿ ಸೈನಿಕರಿಗೆ ರಿಯಾಯಿತಿ ದರದಲ್ಲಿ ಔಷಧಿಯನ್ನು ಒದಗಿಸುವ ಸೇವೆ ಪ್ರಶಂಸನೀಯ. ದೇವರ ಅನುಗ್ರಹ, ತಂದೆ ತಾಯಿ ಆಶೀರ್ವಾದದೊಂದಿಗೆ ಮುನ್ನಡೆಯಿರಿ ಎಂದು ಶುಭ ಹಾರೈಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯಕರ್ಶಿ ಕಸ್ತೂರಿ ಪಂಜ, ಪುರಸಭೆ ಅಧ್ಯಕ್ಷ ಪ್ರಸಾದ್ ಕುಮಾರ್, ಸದಸ್ಯರಾದ ಸ್ವಾತಿ ಪ್ರಭು, ಸೌಮ್ಯ ಶೆಟ್ಟಿ, ಮೂಡ ಮಾಜಿ ಅಧ್ಯಕ್ಷ ಮೇಘನಾಥ್ ಶೆಟ್ಟಿ, ವಾಸುದೇವ ಕಾಂಪ್ಲೆಕ್ಸ್ ನ ಮಾಲಕ ಉದಯ ಶಂಕರ ಪ್ರಭು, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಶಾಖಾ ಪ್ರಬಂಧಕ ರಮೀಝ್ ಖಾನ್, ಬಿಜೆಪಿ ನಗರ ಶಕ್ತಿಕೇಂದ್ರದ ಅಧ್ಯಕ್ಷ ಲಕ್ಷ್ಮಣ್ ಪೂಜಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಭರತ್ ಶೆಟ್ಟಿ ಅವರ ತಂದೆ ಸದಾನಂದ ಶೆಟ್ಟಿ, ತಾಯಿ ಶೋಭಾ ಶೆಟ್ಟಿ, ಮಾವ ರಾಘವ ಶೆಟ್ಟಿ, ಅತ್ತೆ ಸಂಗೀತ ಶೆಟ್ಟಿ ಉಪಸ್ಥಿತರಿದ್ದರು.
ಪ್ರಶಾಂತ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.
0 Comments