ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ಮುಂದಿನ ರಾಜ್ಯ ವಿಧಾನಸಭಾ ಚುನಾವಣಾ ದೃಷ್ಟಿಕೋನ ಇಟ್ಟುಕೊಂಡು "ಬೂತ್ ವಿಜಯ ಅಭಿಯಾನ" ಎಂಬ ವಿಶೇಷ ಅಭಿಯಾನ ಹಮ್ಮಿಕೊಂಡಿದ್ದು ಅದು ಈಗ ರಾಜ್ಯಾದ್ಯಂತ ಭರ್ಜರಿ ಯಶಸ್ಸು ಕಂಡಿದೆ.
ರಾಜ್ಯದ 51000ಕ್ಕೂ ಮಿಕ್ಕಿ ಬಿಜೆಪಿ ಸಂಘಟನಾತ್ಮಕ ಬೂತ್ ಅಧ್ಯಕ್ಷರ ಮನೆಯಲ್ಲಿ ಬಿಜೆಪಿ ನಾಯಕರು ತೆರಳಿ ಬಿಜೆಪಿ ಧ್ವಜಾರೋಹಣ ಮಾಡಿದ್ದು ತಳಮಟ್ಟದ ಕಾರ್ಯಕರ್ತರಿಗೆ ಸಂತಸ ತಂದಿದೆ.
ಈಗಾಗಲೇ ಸುಮಾರು 13 ಲಕ್ಷ ಕಾರ್ಯಕರ್ತರನ್ನು ಪೇಜ್ ಪ್ರಮುಖರಾಗಿ ನೇಮಿಸಲಾಗಿದೆ. ಬೂತ್ ಸಮಿತಿಯ ಅಧ್ಯಕ್ಷರು ಸೇರಿದಂತೆ ಒಟ್ಟು 37 ಲಕ್ಷಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರ ಮನೆಯಲ್ಲಿ ಬಿಜೆಪಿ ಧ್ವಜಾರೋಹಣ ಮಾಡಲಾಗಿದೆ. ಅಭಿಯಾನದಲ್ಲಿ ಒಂದಾಗಿರುವ ವಾಟ್ಸಾಪ್ ಗ್ರೂಪ್ ರಚನೆಯೂ ಯಶಸ್ಸು ಕಂಡಿದ್ದು ಒಟ್ಟು ಈವರೆಗೆ 50260 ವಾಟ್ಸಾಪ್ ಗ್ರೂಪ್ ರಚಿಸಲಾಗಿದೆ.
ಬಿಜೆಪಿ ವಿಕಾಸ ಯಾತ್ರೆ ಎಂಬ ಹೆಸರಿನಲ್ಲಿ ರಾಜ್ಯದಲ್ಲಿ ಈವರೆಗೆ ಒಟ್ಟು 65,320 ಸಭೆಗಳನ್ನು ನಡೆಸಲಾಗಿದೆ. ಮತ್ತು ಸಂಘಟನಾತ್ಮಕವಾಗಿ 615 ವೆಬೆಕ್ಸ್ ಮೀಟ್ ಸಭೆಗಳನ್ನು ನಡೆಸಲಾಗಿದ್ದು ಈ ಸಭೆಗಳಲ್ಲಿ ಖುದ್ದು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಸಂಘಟನಾ ಕಾರ್ಯದರ್ಶಿ ರಾಜೇಶ್, ಸಿಎಂ ಬಸವರಾಜ ಬೊಮ್ಮಾಯಿಯವರು ಪಾಲ್ಗೊಂಡಿದ್ದರು. ಮಾತ್ರವಲ್ಲದೆ ಎರಡು ಸಭೆಗಳಲ್ಲಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ರವರು ಭಾಗವಹಿಸಿದ್ದಾರೆ.
ರಾಜ್ಯದಾದ್ಯಂತ ಸುಮಾರು 15,93,848 ಬಿಜೆಪಿ ಕಾರ್ಯಕರ್ತರು ಪ್ರತ್ಯಕ್ಷವಾಗಿ ಈ ಬೂತ್ ವಿಜಯ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಈ ಮೂಲಕ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರ ವಿಶೇಷ ಯೋಚನೆಗೆ ರಾಜ್ಯದಲ್ಲಿ ಭರ್ಜರಿ ಯಶಸ್ಸು ಕಂಡಿದೆ.
0 Comments