*ಧರ್ಮಶಾಲೆ ಸುಮ್ಮಗುತ್ತು ಬಂಡಸಾಲೆ ಬಜಗೋಳಿ ಯಲ್ಲಿ ಪಂಚಕಲ್ಯಾಣ ಮಹೋತ್ಸವ ಹಾಗೂ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಪ್ರತಿಷ್ಠಾ ಮಹಾಮಸ್ತಕಾಭಿಷೇಕ ಮಹೋತ್ಸವ: ಮಕ್ಕಿಮನೆ ಕಲಾವೃಂದ ಮಂಗಳೂರು ಬಳಗದಿಂದ ಸಾಂಸ್ಕ್ರತಿಕ ವೈಭವ*
ಬಜಗೋಳಿ ಧರ್ಮಶಾಲೆ ಸುಮ್ಮಗುತ್ತು ಬಂಡಸಾಲೆ ಭಗವಾನ್ 1008 ಶ್ರೀ ಮುನಿಸುವ್ರತ ತೀರ್ಥಂಕರರ ನೂತನ ಜಿನ ಮಂದಿರದ ಪಂಚಕಲ್ಯಾಣ ಮಹೋತ್ಸವ ಹಾಗೂ ಭಗವಾನ್ 1008 ಶ್ರೀ ಬಾಹುಬಲಿ ಸ್ವಾಮಿಯ ಪ್ರತಿಷ್ಠಾ ಮಹಾಮಸ್ತಕಾಭಿಷೇಕ ಮಹೋತ್ಸವ ಪರಮಪೂಜ್ಯ ಮುನಿಶ್ರೀ 108 ದಿವ್ಯಸಾಗರ ಮುನಿಮಹಾರಾಜರ ಪಾವನ ಸಾನಿಧ್ಯದಲ್ಲಿ ಮತ್ತು ಮೂಡುಬಿದಿರೆ ಜೈನಮಠದ ಪರಮಪೂಜ್ಯ ಸ್ವಸ್ತಿಶ್ರೀ ಡಾ. ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರ ಮಾರ್ಗದರ್ಶ , ನೇತೃತ್ವದಲ್ಲಿ ವೈಭವದಿಂದ (23-1-2023. ರಿಂದ 29-1-2023 ರವರಗೆ) ನಡೆಯುತ್ತಿದೆ.
ಬುಧವಾರ (25-1-2023) ಸುದೇಶ್ ಜೈನ್ ಮಕ್ಕಿಮನೆ ನೇತೃತ್ವದ ಮಕ್ಕಿಮನೆ ಕಲಾವೃಂದ ಮಂಗಳೂರು ಬಳಗದ ಸದಸ್ಯರಿಂದ ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು. ಎಲ್ಲರ ಮೆಚ್ಚುಗೆ ಪಡೆಯಿತು.
ಈ ಸಂದರ್ಭದಲ್ಲಿ ಪರಮಪೂಜ್ಯ ಸ್ವಸ್ತಿಶ್ರೀ ಡಾ. ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಜೀ, ಶ್ರೀ ಬಾಗ್ ಚಂದ ಕಾಸ್ಸಿವಾಲ್ ಕೊಲ್ಕತ್ತಾ, ರಮ್ಯಾ ಜೈನ್, ಶ್ವೇತಾ ಜೈನ್ ಮೂಡುಬಿದಿರೆ, ಅಶ್ವತ್ ಕುಮಾರ್ ಜೈನ್ ಶ್ರೀಲಂಕ , ಭರತ್ ರಾಜ್ ಜೈನ್ ಮುಡಾರು, ಸನತ್ ಕುಮಾರ್ ಮಂಗಳೂರು, ಸುದೇಶ್ ಜೈನ್ ಮಕ್ಕಿಮನೆ ಹಾಗೂ ಬೇರೆ -ಬೇರೆ ರಾಜ್ಯದ ಮತ್ತು ವಿವಿಧ ಜಿಲ್ಲೆಗಳ ಶ್ರಾವಕ- ಶ್ರಾವಕಿಯರು ಉಪಸ್ಥಿತರಿದ್ದರು.
ಅನನ್ಯ ಬೆಳ್ತಂಗಡಿ ಕಾರ್ಯಕ್ರಮ ನಿರೂಪಿಸಿದರು.
0 Comments