ಉದ್ಯೋಗ ಖಾತರಿ ಯೋಜನೆ ವತಿಯಿಂದ 74ನೇ ಗಣರಾಜ್ಯೋತ್ಸವ ಆಚರಣೆ

 ಉದ್ಯೋಗ ಖಾತರಿ ಯೋಜನೆ ವತಿಯಿಂದ 74ನೇ ಗಣರಾಜ್ಯೋತ್ಸವ  ಆಚರಣೆ



74 ನೇ ಗಣರಾಜ್ಯೋತ್ಸವದ ಅಂಗವಾಗಿ    ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅಮೃತ ಸರೋವರ ಯೋಜನೆಯಡಿ ಮೂಡುಬಿದಿರೆ ತಾಲೂಕಿನ ವಾಲ್ಪಾಡಿ ಗ್ರಾಮ ಪಂಚಾಯತ್ ನ ಎಂದ್ರಟ್ಟ ಕೆರೆಯ ದಂಡೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಧ್ವಜಾರೋಹಣ ನೆರವೇರಿಸಿದರು.


ಬಳಿಕ ಮನರೇಗಾ ಯೋಜನೆಯಡಿ 100 ದಿನಗಳನ್ನು ಪೂರ್ಣಗೊಳಿಸಿದ ಫಲಾನುಭವಿಗಳಿಗೆ ಟಿ-ಶರ್ಟ್ ಮತ್ತು ಕ್ಯಾಪ್ ಸಾಂಕೇತಿಕವಾಗಿ ನೀಡಲಾಯಿತು. 


ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ಶ್ರೀಧರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ರಮೇಶ್ ರಾಥೋಡ್, ಪಂಚಾಯತ್ ಕಾರ್ಯದರ್ಶಿ ಶೇಖರ್, ತಾಲೂಕು ಐಇಸಿ ಸಂಯೋಜಕರು ಅನ್ವಯ, ಪಂಚಾಯತ್ ಸಿಬ್ಬಂದಿಗಳಾದ ಮಂಜುಶ್ರೀ, ಪ್ರಿಯಾ,ಸಂದೀಪ್ , ವಸಂತ್,  ಸೌಮ್ಯ ಹಾಗೂ ಗ್ರಾಮಸ್ಥರು‌ ಉಪಸ್ಥಿತರಿದ್ದರು.

Post a Comment

0 Comments

Advertisement