ತಮ್ಮ ಭಾಷಣದ ಮಧ್ಯೆ ಗುತ್ತಿಗೆದಾರರ ಕಾರ್ಯದಕ್ಷತೆಯನ್ನು ಗುರುತಿಸಿದ ನ್ಯಾಯಮೂರ್ತಿಗಳು "ಭವನದ ಕಾಮಗಾರಿಯನ್ನು ಅತ್ಯಂತ ಸುಂದರವಾಗಿಯೂ ಮತ್ತು ಅಚ್ಚಕಟ್ಟಾಗಿಯೂ ನಿರ್ಮಿಸಿದ್ದೀರಿ. ನಿಮಗೆ ಅಭಿನಂದನೆಗಳು. ಒಳ್ಳೆಯ ಕೆಲಸ ಮಾಡಿದ್ದೀರಿ" ಎಂದು ಹಾಡಿ ಹೊಗಳಿದ್ದಾರೆ. ಮಾತ್ರವಲ್ಲದೆ ಖುದ್ದು ತಾವೇ ಅವರನ್ನು ವೇದಿಕೆಗೆ ಆಹ್ವಾನಿಸಿ ಸ್ಮರಣಿಕೆ ನೀಡಿ ಗೌರವಿಸಿದ್ದಾರೆ.
ಎರಡು ತಿಂಗಳ ಹಿಂದೆ ಭವನದ ಕಾಮಗಾರಿ ವೀಕ್ಷಣೆಗೆ ಆಗಮಿಸಿದ್ದ ನ್ಯಾ.ನಜೀರ್ ರವರು ಗುತ್ತಿಗೆದಾರ ಕಳಪೆ ಕಾಮಗಾರಿ ಮಾಡಿದ್ದಾನೆ, ಆತನ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಹೇಳಿದ್ದಾರೆ ಎಂಬ ಸುದ್ಧಿಗಳು ಸಾಮಾಜಿಕ ಜಾಲತಾಣ ಹಾಗೂ ಕೆಲ ಮಾಧ್ಯಮಗಳಲ್ಲಿ ಬಿತ್ತರವಾಗಿತ್ತು. ಗುತ್ತಿಗೆದಾರ ಪ್ರವೀಣ್ ಅವರ ಬಗ್ಗೆ ವೈಯಕ್ತಿಕ ದ್ವೇಷ ಇಟ್ಟುಕೊಂಡವರ ಕೃತ್ಯ ಎಂದು ಮೇಲ್ನೋಟಕ್ಕೆ ಕಂಡು ಬಂದಿದ್ದು ಈ ಬಗ್ಗೆ ವೈಭವ ವಾಹಿನಿ ನಿಖರ ಸುದ್ಧಿ ಪ್ರಕಟಿಸಿತ್ತು. ಇಂತಹಾ ಯಾವುದೇ ಘಟನೆಗಳು ನಡೆದಿಲ್ಲ, ನ್ಯಾಯಮೂರ್ತಿಗಳು ಇಂಜಿನಿಯರ್ ಮೂಲಕ ಗುತ್ತಿಗೆದಾರರಿಗೆ ಸಲಹೆ ನೀಡಿದ್ದಾರೆ ಅಷ್ಟೇ ಎಂಬ ವರದಿಯನ್ನು ವೈಭವ ವಾಹಿನಿ ಬಿತ್ತರಿಸಿತ್ತು.
ಇದೀಗ ಸ್ವತಃ ನ್ಯಾಯಮೂರ್ತಿಗಳೇ ಉದ್ಘಾಟನ ಸಮಾರಂಭದಲ್ಲಿ ಬಹಿರಂಗವಾಗಿ ಗುತ್ತಿಗೆದಾರರ ಕಾರ್ಯದಕ್ಷತೆಯನ್ನು ಮೆಚ್ಚಿ ಕೊಂಡಾಡಿದ್ದು ಎಲ್ಲಾ ಊಹಾಪೋಹಗಳು ಹಾಗೂ ಗೊಂದಲಗಳಿಗೆ ತೆರೆ ಎಳೆದಂತಾಗಿದೆ.
0 Comments