ವಾಲ್ಪಾಡಿ ಗ್ರಾಮದ 60 ಫಲಾನುಭವಿಗಳಿಗೆ ಶಾಸಕ ಉಮಾನಾಥ ಕೋಟ್ಯಾನ್ 94 ಸಿ ಹಕ್ಕುಪತ್ರಗಳನ್ನು ನೀಡಿದರು. ವಾಲ್ಪಾಡಿ ಗ್ರಾಮಪಂಚಾಯತ್ ನಲ್ಲಿ
ನಡೆದ ಸಮಾರಂಭದಲ್ಲಿ ಹಕ್ಕು ಪತ್ರ ನೀಡಿ ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಲ್ಲಿ ಬರುವ ಶೇ 80 ಕುಟುಂಬಕ್ಕೆ ಈಗ ಹಕ್ಕು ಪತ್ರ ನೀಡಿರುವುದಾಗಿ ತಿಳಿಸಿದರು. ಪಂಚಾಯತ್ ಅಧ್ಯಕ್ಷ ಪ್ರದೀಪ್ ಕುಮಾರ್, ಉಪಾಧ್ಯಕ್ಷೆ ಸುಶೀಲ, ತಾ.ಪಂ ಕಾರ್ಯನಿರ್ವಾಹನಧಿಕಾರಿ ದಯಾವತಿ, ಅಭಿವೃದ್ಧಿ ಅಧಿಕಾರಿ ರಮೇಶ್ ರಾಥೋಡ್,ಕಾರ್ಯದರ್ಶಿ ಶೇಖರ್, ಸದಸ್ಯರು, ಗ್ರಾಮಕರಣಿಕ ನಿಶ್ಮಿತಾ ಉಪಸ್ಥಿತರಿದ್ದರು.
0 Comments