ಮೂಡುಬಿದಿರೆ: ಬನ್ನಡ್ಕದ ಭಕ್ತಾರುಗಳು ತಮ್ಮ ಸಮಸ್ಯೆಯ ಕುರಿತು ಜನಪ್ರತಿನಿಧಿಗಳಲ್ಲಿ ತಮ್ಮ ಸಮಸ್ಯೆಯನ್ನು ಎಷ್ಟು ಬಾರಿ ದೂರು ನೀಡಿದರೂ ಬಗೆಹರಿದಿಲ್ಲ. ನೂರು ವರ್ಷಗಳಿಂದ ನಿಮ್ಮನ್ನೆ ನಂಬಿಕೊಂಡು ನೆಮ್ಮದಿ ಜೀವನ ನಡೆಸುತ್ತಾ ಬಂದ ನಮಗೆ, ಇದೀಗ ಜೀವರಕ್ಷಣೆಯಂತಹ ಹಾಗೂ ಪ್ರಾಣ ಉಳಿಸುವಂತಹ ಕಷ್ಟಗಳು ನಮಗೆ ಎದುರಾಗಿದೆ. ಕಾರಣ ನಮ್ಮ ಮನೆಯ ಪಕ್ಕದಲ್ಲಿ ಎಸ್.ಕೆ.ಎಫ್, ಎಂಬ ಬೃಹತ್ ಕಂಪೆನಿ ಕಾರ್ಯನಿರ್ವಹಿಸುತ್ತಿದ್ದು, ಸುಮಾರು 3 ವರ್ಷಗಳಿಂದ ಕಂಪೆನಿಯು ಬಣ್ಣ ಬಳಿಯುವ ಕಾರ್ಯ ಮಾಡುತ್ತಿದ್ದು, ಅದರಿಂದ ಹೊರ ಸೂಸುವ ವಿಪರೀತವಾದ ಘಾಟು ವಾಸನೆ(ವಿಷ ಅನಿಲ)ಯಿಂದ ನಿನ್ನ ನಂಬಿರುವ ನಾವು ತೀವ್ರ ತರಹದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದೇವೆ. ಎಂದು ದೇವರಿಗೆ ಪತ್ರದ ಮೂಲಕ ಸಮಸ್ಯೆಯನ್ನು ತೋಡಿಕೊಂಡ ಘಟನೆ ಮೂಡುಬಿದಿರೆಯ ಬನ್ನಡ್ಕದಲ್ಲಿ ನಡೆದಿದೆ.
ಇದಕ್ಕೆ ಸಂಬಂಧಪಟ್ಟ ಈ ಘಟಕವನ್ನು ಮುಚ್ಚುವಂತೆ ಪರಿಸರ ಇಲಾಖೆಯ ಆದೇಶ ಬಂದಿದ್ದರೂ ಪಂಚಾಯತ್, ಜನಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಗಳು ಯಾವುದೇ ಕ್ರಮ ಜರುಗಿಸದೇ, ಪಟ್ಟ ಭದ್ರ ಹಿತಾಸಕ್ತಿಗಳ ಹಾಗೂ ಬಂಡವಾಳಶಾಹಿಗಳ ಹಣ ಮತ್ತು ಅಧಿಕಾರದಿಂದ ನಿಮ್ಮ ಭಕ್ತರ ಬದುಕಿಗೆ ನ್ಯಾಯ ಸಿಗದೆ ನಮ್ಮ ಗೋಳು ಅರಣ್ಯರೋಧನವಾಯಿತು ಇದರಿಂದಾಗಿ ಈಗಾಗಲೇ ನಮ್ಮ ನೆರೆಕೆರೆಯ 2 ಹಿರಿಯ ಜೀವಗಳನ್ನು ಕಳಕೊಂಡಿದ್ದೇವೆ. ಇನ್ನೂ ಅನೇಕ ಹಿರಿಯರು ಕೂಡ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅಲ್ಲದೇ ಈ ಕಂಪೆನಿಯ ಮಾಲಿನ್ಯದಿಂದ ಪ್ರತಿಯೊಂದು ಮನೆಯಲ್ಲಿರುವವರಿಗೂ, ಹೃದ್ರೋಗ, ಕ್ಷಮಾ, ಬಿ.ಪಿ., ಶುಗರ್, ಪಾಶ್ವವಾಯು, ಕ್ಯಾನ್ಸರ್, ತಲೆನೋವು, ತೊದಲುವಿಕೆ ಅಲರ್ಜಿ ಮುಂತಾದ ಶಾಲೆಗಳು ನಿಮ್ಮ ಭಕ್ತರ ಪ್ರಾಣಕ್ಕೆ ಕುತ್ತು ತರುತ್ತಿದೆ. ಪ್ರತಿನಿತ್ಯ ಜೀವನ್ಮರಣದ ನಡುವೆ ಬದುಕು ಸಾಗಿಸುವಂತಹ ಪರಿಸ್ಥಿತಿಯಲ್ಲಿ ಇದ್ದೆವೆ. ನಮ್ಮ ಜೀವಕ್ಕೆ ಬೆಲೆಯೆ ಇಲ್ಲದಂತಾಗಿದೆ. ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಬೇಕಾದ, ನಮ್ಮ ನಾಡಿನ ಪ್ರಜಾಪ್ರಭುತ್ವ ಸರಕಾರ ಎಂಬುದು ನಮ್ಮ ಪಾಲಿಗೆ ಮರೀಚಿಕೆಯಾಗಿದೆ. ಈ ಎಲ್ಲಾ ವಿಷಯಗಳು ನಿಮ್ಮ ಮಾಯಾಶಕ್ತಿಗೆ ತಿಳಿದಿರಬಹುದು.
ನಮ್ಮ ಮುಂದಿನ ಪೀಳಿಗೆಯನ್ನು ಉಳಿಸುವ ಸಲುವಾಗಿ ಬೇರೆ ದಾರಿ ಕಾಣದೆ ನಾವೆಲ್ಲರೂ ಕೊನೆಯದಾಗಿ ನಿನ್ನ ಪಾದದಡಿಗೆ ಬಂದು ಬೇಡಿಕೊಳ್ಳುತ್ತಿದ್ದೇವೆ. ಹಣ ಅಧಿಕಾರದ ಮದದಲ್ಲಿ ಮೆರೆಯುತ್ತಿರುವ ಅಪಾಯಕಾರಿ ಕಂಪೆನಿಯ ಮಾಲೀಕರಿಗೆ ಹಾಗೂ ಅವರೊಂದಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕೈ ತೋರಿಸಿರುವ ವ್ಯಕ್ತಿಗಳಿಗೆ ನೀವೇ ನಿಮ್ಮ ಮಾಯಾ ಶಕ್ತಿಯಿಂದ "ಶಿಕ್ಷೆಯನ್ನು ನೀಡಿ ನಿಮ್ಮ ಭಕ್ತರ ಪ್ರಾಣವನ್ನು ಕಾಪಾಡಬೇಕೆಂದು ನಾವೆಲ್ಲರೂ ನಿನ್ನ ಪಾದದಡಿಗೆ ಬಂದು ದುಃಖದಲ್ಲಿ ಮೊರೆ ಇಡುತ್ತಿದ್ದೇವೆ.
ಬನ್ನಡ್ಕ ತಾಯೇ ನಾವು ನಮ್ಮ ಪ್ರಾಣವನ್ನು ಉಳಿಸುವ ಶಕ್ತಿಯನ್ನು ಕಳೆದುಕೊಂಡಿದ್ದೇವೆ. ನಮ್ಮನ್ನು ಉಳಿಸಿ ಬೆಳೆಸುವ ಬನ್ನಡ್ಕ ಮಣ್ಣಿನ ಮಾಯಾಶಕ್ತಿಯಾದ ನಿಮ್ಮ ಕೈಯಲ್ಲಿದೆ. ಪ್ರಕೃತಿಗೆ ವಿರುದ್ಧವಾಗಿ ನಡೆಯುತ್ತಿರುವ ಎಸ್‌ಕೆ ಎಫ್ ಬಾಯ್ಲರ್ ಅಂಡ್ ಡ್ರೈಯರ್ಸ್ ಪ್ರೈ.ಲಿ. ಇದರ ಪೇಯಿಂಟ್ ಘಟಕವನ್ನು ಮಟ್ಟ ಹಾಕಿ ಬಂದು ಭಕ್ತರಾದ ನಮ್ಮೆಲ್ಲರ ಕಷ್ಟ ಕಾರ್ಪಣ್ಯಗಳನ್ನು ದೂರಮಾಡಿ, ನಮ್ಮೆಲ್ಲರಿಗೂ ಆರೋಗ್ಯ ಭಾಗ್ಯ ಸೇರಿ ನಮ್ಮಮ್ಮ ರಕ್ಷಿಸಬೇಕಾಗಿ ನಿಮ್ಮ ಭಕ್ತಿಯಿಂದ ಪ್ರಾರ್ಥಿಸುತ್ತೇವೆ. ಎಂದು ದೇವರ ಬಳಿ ದೂರು ನೀಡಿದ ಘಟನೆ ನಡೆದಿದೆ.
0 Comments