ಮೂಡುಬಿದಿರೆ: ಆಳ್ವಾಸ್ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಪ್ರಯುಕ್ತ ರಾಜ್ಯ ಮಟ್ಟದ ಮಲ್ಲಕಂಬ ತರಬೇತಿ ಶಿಬಿರಕ್ಕೆ ಚಾಲನೆ ನೀಡಲಾಯಿತು
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ, `ಮಲ್ಲಕಂಬ ಗ್ರಾಮೀಣ ಕ್ರೀಡೆಯಾಗಿದ್ದು ಅದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲರೂ ಸಾಗಬೇಕು. ಆಳ್ವಾಸ್ ಸಂಸ್ಥೆ ಶಿಕ್ಷಣಕ್ಕೆ ಒತ್ತು ನೀಡುವ ಜತೆಗೆ ಗ್ರಾಮೀಣ ಕ್ರೀಡೆ, ಕಲೆ, ಸಂಸ್ಕೃತಿಗೂ ಕೂಡಾ ಹೆಚ್ಚಿನ ಮಹತ್ವ ಮತ್ತು ಬೃಹತ್ ವೇದಿಕೆಯನ್ನು ನೀಡಿ ಮಕ್ಕಳಲ್ಲಿನ ಕ್ರೀಡಾ ಕಲೆಯನ್ನು ಹೊರತೆಗೆಯುವಂತಹ ಕೆಲಸ ಮಾಡುತ್ತಿದೆ. ನಾವೆಲ್ಲರೂ ಒಗ್ಗಟ್ಟಿನಿಂದ ಈ ಐತಿಹಾಸಿಕ ಜಾಂಬೂರಿ ಕಾರ್ಯಕ್ರಮವನ್ನು ಇತಿಹಾಸದ ಪುಟಗಳಲ್ಲಿ ಸೇರಿಸೋಣ ಎಂದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಪ್ರಾಚಾರ್ಯರಾದ ಡಾ. ಕುರಿಯನ್. ಹಿರಿಯ ಮಲ್ಲಕಂಬ ತರಬೇತುದಾರ ಸಿ. ಕೆ. ಚೆನ್ನಾಳ್, ಬಸವರಾಜ್ ಉಪಸ್ಥಿತರಿದ್ದರು. ಶ್ರೀನಿಧಿ ಎಳಚಿತ್ತಾಯ ನಿರೂಪಿಸಿ, ವಂದಿಸಿದರು.
5 ದಿನಗಳ ತರಬೇತಿಯಲ್ಲಿ ಬಾಗಲಕೋಟೆ. ಬೆಳಗಾವಿ. ಧಾರವಾಡ, ವಿಜಯಪುರ ಸೇರಿದಂತೆ ವಿವಿಧ ಜಿಲ್ಲೆಗಳಿಂದ 250 ಮಲ್ಲಕಂಬ ವಿದ್ಯಾರ್ಥಿಗಳು, ಶಿಕ್ಷಕರು ಭಾಗವಹಿಸಲಿದ್ದಾರೆ.
ಮುತ್ತು ಡಿ, ಮೆಹಬೂಬ್ ಬಿ, ಚೇತನ್, ರವಿ ಕುಮಾರ್, ಮಾರುತಿ, ಅಕ್ಷತಾ , ಅನುಪಮ, ಲಕ್ಷ್ಮಣ ಅನ್ನಪೂರ್ಣ ತರಬೇತುದಾರರಾಗಿ ಭಾಗವಹಿಸಲಿದ್ದಾರೆ
ತರಬೇತಿ ಪಡೆದ ವಿದ್ಯಾರ್ಥಿಗಳು ಜಾಂಬೂರಿಯ ಸಂದರ್ಭ ವಿಶೇಷ ಮಲ್ಲಕಂಬ ಪ್ರದರ್ಶನ ನೀಡಲಿದ್ದಾರೆ.
0 Comments