ಮೂಡುಬಿದಿರೆಯ ಸ್ಕ್‌ಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ಡಾ. ಸರ್ವಪಲ್ಲಿ ರಾಧಕೃಷ್ಣನ್ ಜನ್ಮಜಯಂತಿ ಮತ್ತು ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮವನ್ನು ಶಾಸಕ ಉಮನಾಥ ಕೋಟ್ಯಾನ್ ಉದ್ಘಾಟಿಸಿ ಶಿಕ್ಷಕರ ಸ್ಥಾನ ಬುದ್ದಿಗೆ ಸೀಮಿತ ಅಲ್ಲ ಅದು ಜವಬ್ದಾರಿ. ಸಮಾಜಕ್ಕೆ ಉತ್ತಮ ವಿದ್ಯಾರ್ಥಿಗಳನ್ನು ನೀಡಲು ಶಿಕ್ಷಕರು ಪ್ರಯತ್ನಿಸಬೇಕು. ಮಕ್ಕಳಲ್ಲಿರುವ ಪ್ರತಿಭೆಯನ್ನು ಹುಡುಕಿ ತೆಗೆಯಬೇಕು. ಅವರಿಗೆ ಪ್ರಪಂಚದ ಜ್ಞಾನ ನೀಡಬೇಕು ಎಂದು ಹೇಳಿದರು.
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮಾತನಾಡಿ ಪ್ರಾಮಾಣಿಕ ಶಿಕ್ಷಕಿಗೆ ಗೌರವ ಕಡಿಮೆಯಾಗಿಲ್ಲ. ಸರಕಾರ ಜಾರಿಗೊಳಿಸುತ್ತಿರುವ ರಾಷ್ಟ್ರೀಯ ಶಿಕ್ಷಣ ನೀತಿಗೆ ನಾವು ಬದಲಾಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, ಕೆಎಂಎಫ್ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.
ಕಾರ್ಕಳ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ ಕೋಟ್ಯಾನ್ ದಿಕ್ಸೂಚಿ ಭಾಷಣಗೈದರು.
ಶಿಕ್ಷಕ ದಿನಾಚರಣೆ ಸಮಿತಿಯ ಅಧ್ಯಕ್ಷ ಮೂಡುಬಿದಿರೆ ತಹಶೀಲ್ದಾರ್ ಸಚ್ಚಿದಾನಂದ ಎಸ್. ಕೆ., ಕ್ಷೇತ್ರ ಶಿಕ್ಷಣಾಧಿಕಾರಿ ವೈ. ಗಣೇಶ್, ಉದ್ಯಮಿ ಕೆ. ಶ್ರೀಪತಿ ಭಟ್, ಸರಕಾರಿ ನೌಕರರ ಸಂಘದ ಅಧ್ಯಕ್ಷೆ ನಾಗೇಶ್, ಶಿಕ್ಷಣ ಇಲಾಖೆಯ ಶಿವಾನಂದ ಕಾಯ್ಕಿಣಿ, ರಾಮಕೃಷ್ಣ ಶಿರೂರು, ಬಿ. ರಾಜಶ್ರೀ, ಸೌಮ್ಯ, ಡಯಟ್ ಉಪನ್ಯಾಸಕರಾದ ಶಂಕರಪ್ಪ, ವೇದಾವತಿ, ಆಲ್ವಿನ್ ವೇದಿಕೆಯಲ್ಲಿದ್ದರು.
ವಿಶ್ರಾಂತ ಶಿಕ್ಷಕಿ ಶ್ರೀಮತಿ ಪ್ರಫುಲ್ಲ ಬಿ.ಯವರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಕಳೆದ ವರ್ಷದ ಜಿಲ್ಲಾ ಪ್ರಶಸ್ತಿ ಪುರಸ್ಕೃತರಾದ ಶಂಕರ್ ನಾಯ್ಕ್, ರಾಜೀವ್ ಶೆಟ್ಟಿ, ಅರ್ಚನಾ, ನಿವೃತ್ತ ಶಿಕ್ಷಕರು, ಬೋಧಕೇತರ ಸಿಬ್ಬಂದಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರು, ಜಿಲ್ಲೆ, ರಾಜ್ಯ ಮಟ್ಟದಲ್ಲಿ ಪ್ರತಿಭಾ ಪ್ರದರ್ಶನ ನೀಡಿದ ಶಿಕ್ಷಕರು, ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಶೇ.100 ಸಾಧನೆ ಮಾಡಿದ ಶಾಲೆ ಮತ್ತು ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದ ಶಿಕ್ಷಕರ ಮಕ್ಕಳನ್ನು ಗೌರವಿಸಲಾಯಿತು.
1 Comments
ಕೆಎಂಎಫ್ ?? ದ.ಕ. ಹಾಲು ಉ.ಸ. ಒಕ್ಕೂಟ??
ReplyDeleteತಹಶೀಲ್ದಾರರು ಬಂದಿರಲಿಲ್ಲ
ಅಧ್ಯಕ್ಷ ನಾಗೇಶ್ ..
ಅಧ್ಯಕ್ಷೆ ಅಲ್ಲ
ವಿಶ್ರಾಂತ ಶಿಕ್ಷಕಿಗೆ ಮೊದಲೇ ಸಮ್ಮಾನ ಆಗಿದೆ
ಸಮಿತಿ ಜತೆಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವುದಕ್ಕೆ ವಿಶೇಷ ಸನ್ಮಾನ
ಡಾ. ರಾಜಶ್ರೀ ಬಿ.
ದಿಕ್ಸೂಚಿ ಭಾಷಣ ಒಂದೆರಡು ವಾಕ್ಯವಾದರೂ ಬೇಕಿತ್ತಲ್ಲ
ಸ್ವಾಗತ, ವಂದನೆ, ನಿರೂಪಣೆ ???