ಮೂಡುಬಿದಿರೆಯ ಗಣೇಶ ಚತುರ್ಥಿಯಲ್ಲಿ ಹುಲಿಗಳ ಅಬ್ಬರ

ಜಾಹೀರಾತು/Advertisment
ಜಾಹೀರಾತು/Advertisment

  


ಕರಾವಳಿ ಭಾಗದಲ್ಲಿ ಹಬ್ಬಗಳು ಆರಂಭವಾಯಿತೆಂದರೆ ಮೊದಲು ಎಲ್ಲಾರ ಕಣ್ಮಣ ಸೆಳೆಯುವುದೇ ಹುಲಿವೇಷ. ಈ ಹುಲಿವೇಷ ನೋಡಲೆಂದೇ ಮುಗಿ ಬೀಳುವ ಪ್ರೇಕ್ಷಕರೇ ಹೆಚ್ಚು. ಈ ಹುಲಿವೇಷ ಕುಣಿತವು ಮೂಡುಬಿದಿರೆಯ ಸಮಾಜಮಂದಿರದ ಗಣೇಶ ವಿಸರ್ಜನೆಯ ದಿನದಂದು ಮೂಡುಬಿದಿರೆ ಪರಿಸರದಲ್ಲೆಲ್ಲಾ ಹುಲಿಗಳದ್ದೇ ಹವಾ... ಮೂಡುಬಿದಿರೆಯ ಹುಲಿವೇಷದಲ್ಲಿ ಸುಮಾರು ಹದಿನಾಲ್ಕು ವರುಷದಿಂದ ಹುಲಿವೇಷ ಪ್ರದರ್ಶನವನ್ನು ಮುಂದುವರಿಸಿಕೊಂಡು ಬಂದಿರುವ ತಂಡವೇ ಸರ್ವೋದಯ ಫ್ರೆಂಡ್ಸ್ ಬೆದ್ರ. ಈ ತಂಡದ ಹುಲಿವೇಷ ಕುಣಿತದ ಝಳಕ್ ಇಲ್ಲಿದೆ ನೋಡಿ.

 ಸರ್ವೋದಯ ಫ್ರೆಂಡ್ಸ್ ಈ ತಂಡವು ಮೊದಲು ಬರೀ ೩ ಸದಸ್ಯರನ್ನೊಳಗೊಂಡು ಹುಲಿವೇಷ ಪ್ರದರ್ಶನವನ್ನು ಆರಂಭಿಸಿದ್ದು, ವರುಷಗಳು ಉರುಳಿದಂತೆ ತಂಡದಲ್ಲಿ ಸದಸ್ಯರ ಸಂಖ್ಯೆಯು ಹೆಚ್ಚುತ್ತಾ ಇದೀಗ 800 ಕ್ಕೂ ಅಧಿಕ ಸದಸ್ಯರನ್ನೊಳಗೊಂಡ ತಂಡವು ರೂಪುಗೊಂಡಿದ್ದು, ತಂಡದಲ್ಲಿ ಒಟ್ಟು 800 ಸದಸ್ಯರು ಇದ್ದಾರೆ. ಈ ಬಾರಿ ಹುಲಿವೇಷ ಕುಣಿತ ಪ್ರದರ್ಶನದಲ್ಲಿ  80ಹುಲಿಗಳು ಬಣ್ಣ ಹಚ್ಚಲಿದೆ. 

ಈ ಹುಲಿ ಕುಣಿತ ವೇಷವು ಪ್ರದರ್ಶನವು ಆರಂಭದಲ್ಲಿ ಊದು ಪೂಜೆಯನ್ನು ಸಲ್ಲಿಸಿ ತದ ನಂತರ ಮೂಡುಬಿದಿರೆಯ ಶಕ್ತಿಶಾಲಿ 

ಹನುಮಾನ್ ದೇವಾಲಯದಲ್ಲಿ ಪೂಜೆಯನ್ನು ಸಲ್ಲಿಸಿ ನಂತರ ಸಮಾಜ ಮಂದಿರದಲ್ಲಿ ಸಾರ್ವಜನಿಕ ಗಣೇಶೋತ್ಸವದಲ್ಲಿ ಗಣಪನ ಆಶೀರ್ವಾದವನ್ನು ಪಡೆದು  ಮೂಡುಬಿದಿರೆ ಪರಿಸರದಲ್ಲಿ ಆಯ್ದ ಸ್ಥಳಗಳಲ್ಲಿ ಹುಲಿ ಕುಣಿತ ಪ್ರದರ್ಶನವನ್ನು  ಮಾಡಲಾಗುತ್ತದೆ. 

ಹುಲಿವೇಷ ಪ್ರದರ್ಶನವು  ವೈಭವದ ಮೆರವಣಿಗೆಗೆ ಹೊಳಪನ್ನು ನೀಡುವುದಂತೂ ಸುಳ್ಳಾಲ್ಲ. ಈ ತಂಡ ಇಷ್ಟು ಮುಂದುವರಿದು ಬಲಿಷ್ಠವಾಗಲು ಕಾರಣವೇ ಪ್ರಾಯೋಜಕರು,ಜನರು ಹಾಗೂ ತಂಡದ ಎಲ್ಲಾ ಸದಸ್ಯರು ಈ ಉತ್ತಮ‌ ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡು ಉತ್ತಮವಾದ ಸಮಾಜಮುಖಿ ಕೆಲಸಗಳನ್ನು ಈ ತಂಡದಿಂದ ಮಾಡಲಾಗುತ್ತಿದೆ ಎನ್ನುತ್ತಾರೆ ತಂಡದ ಸದಸ್ಯರಾದ  ಅಕ್ಷಯ್ ಜೈನ್.

ಬೈಟ್:  ಅಕ್ಷಯ್ ಜೈನ್

ಅಷ್ಟೇ ಅಲ್ಲದೇ ಹುಲಿವೇಷ ಕುಣಿತ ಪ್ರದರ್ಶನದ ಜೊತೆಗೆ ಈ ಬಾರಿ ಹನುಮಂತನ ಸ್ತಬ್ಧ್ಯ ಚಿತ್ರವನ್ನು ಪ್ರದರ್ಶನ ಮಾಡುತ್ತಿದ್ದು, ಪ್ರತೀ ವರುಷ ಬೇರೆ-ಬೇರೆ ಸ್ತಭ್ಯ ಚಿತ್ರಗಳನ್ನು  ಪ್ರದರ್ಶನ ಮಾಡುತ್ತಾ ಬಂದಿದೆ. ಈ ತಂಡವು ಇಂದು ಬಲಿಷ್ಠ ವಾಗಿ ಬೆಳೆದು ಮೂಡುಬಿದಿರೆ ಗಣೇಶೋತ್ಸವದ ಶೋಭಾಯಾತ್ರೆಗೆ ಉತ್ತಮ ಮೆರಗನ್ನು ನೀಡಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

Post a Comment

0 Comments