ಮೂಡುಬಿದಿರೆ: ಮಂಗಳೂರು ತೋಟಗಾರಿಕಾ ಇಲಾಖೆ ಹಾಗೂ ಮೂಡುಬಿದಿರೆ ನಬಾರ್ಡ್ ಕರ್ನಾಟಕದ ಪ್ರಾಯೋಜಕತ್ವ ರೈತ ಜನ್ಯ' ರೈತ ಉತ್ಪಾದಕ ಕಂಪೆನಿ ನಿಯಮಿತ, ಇವರ ಸಹಯೋಗದಲ್ಲಿ ಮಾಡ ಹಾಗಲಕಾಯಿ ಬೇಸಾಯ ಕಾರ್ಯಾಗಾರ ಹಾಗೂ ಮಾಡಹಾಗಲಕಾಯಿ ಗಿಡ ವಿತರಣೆ ಕಾರ್ಯಕ್ರಮವು ಗುರುವಾರ ಸಮಾಜ ಮಂದಿರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ರಶ್ಮಿ ಮಾತನಾಡಿ, ರೈತರಿಗೆ ಬೇಸಾಯ ಪದ್ಧತಿಯ ಬಗ್ಗೆ ಮಾಹಿತಿಯನ್ನು ನೀಡಿದರು.
ತೋಟಗಾರಿಕಾ ಅಧಿಕಾರಿ ಯೋಗೇಂದ್ರ, ಇದರ ಸ್ಥಾಪನೆ ಉದ್ದೇಶ ಹಾಗೂ ಪ್ರಯೋಜನಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ರೈತ ಜನ್ಯ ಎಫ್.ಪಿ.ಒ ಮೂಡಬಿದ್ರೆ ನಿರ್ದೇಶಕರಾದ ಲಿಯೋ ನಝರತ್ ,ದೀಪಕ್ ಕೊಳಕೆ, ಡೇವಿಡ್ ಡಿಮೆಲ್ಲೊ ,ನಾಗರಾಜ್ ಶೆಟ್ಟಿ ,ಜಿನೇಂದ್ರ ಹೆಗಡೆ, ಸಿಇಒ ಸಂದೀಪ್ ಉಪಸ್ಥಿತರಿದ್ದರು.


0 Comments