ಅಳಿಯೂರಿನಲ್ಲಿ ಅಪಘಾತವಾಗಿ ಗಾಯಗೊಂಡಿದ್ದ ವ್ಯಕ್ತಿ ಸಾವು

ಜಾಹೀರಾತು/Advertisment
ಜಾಹೀರಾತು/Advertisment
ಅಳಿಯೂರಿನಲ್ಲಿ ಅಪಘಾತವಾಗಿ ಗಾಯಗೊಂಡಿದ್ದ ವ್ಯಕ್ತಿ ಸಾವು 
ಮೂಡುಬಿದಿರೆ : ಅಳಿಯೂರಿನಲ್ಲಿ ಕಳೆದ ಸೋಮವಾರ ರಾತ್ರಿ ಸಮೀಪ ನಡೆದ ಬೈಕ್- ಆಕ್ಟಿವಾ ಢಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮರೋಡಿಯ ಭಾಸ್ಕರ ಅವರು ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಿದ್ದಾರೆ.

ಮರೋಡಿಯವರಾಗಿರುವ ಭಾಸ್ಕರ್ ಕೆಲ್ಲಪುತ್ತಿಗೆ ಬಳಿ ಇರುವ ತನ್ನ ಹೆಂಡತಿಯ ಮನೆಗೆ ಹೋಗುವಾಗ ದ್ವಿಚಕ್ರ ವಾಹನಗಳೆರಡು ಮುಖಾಮುಖಿಯಾಗಿ ಢಿಕ್ಕಿಯಾಗಿದ್ದರಿಂದ ಭಾಸ್ಕರ ಅವರ ತಲೆಗೆ ಗಂಭೀರವಾದ ಗಾಯಗಳಾಗಿತ್ತು.
  ಅಳಿಯೂರು ಪರಿಸರದ ಯುವಕರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಾಗ
ಅದೇ ದಾರಿಯಾಗಿ ಬರುತ್ತಿದ್ದ ಮೂಡುಬಿದಿರೆ ಪುರಸಭಾ ಮಾಜಿ ಸದಸ್ಯ ರಾಜೇಶ್ ನಾಯ್ಕ್ ಹಾಗೂ ಬಾರ್ ಮಾಲಕ ಮನೋಹರ್ ಶೆಟ್ಟಿ ಅವರು ತಮ್ಮ ವಾಹನದಲ್ಲಿ ಆಳ್ವಾಸ್ ಗೆ ದಾಖಲಿಸಿದ್ದರು.
ಇನ್ನೊಬ್ಬ ಗಾಯಾಳು ಮಕ್ಕಿಯ ಚೇತನ್ ಅವರು ಚೇತರಿಸಿಕೊಂಡಿದ್ದಾರೆ.

ತೀರಾ ಬಡತನದಲ್ಲಿದ್ದ ಭಾಸ್ಕರ್ ಅವರಿಗೆ ಒಂದು ಮಗುವಿದ್ದು ಪತ್ನಿ ಇದೀಗ ಗರ್ಭವತಿಯಾಗಿದ್ದಾರೆ.

Post a Comment

0 Comments