ಅಪ್ರಾಪ್ತ ಬಾಲಕರಿಬ್ಬರಿಂದ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌಜ೯ನ್ಯ, ಜೀವ ಬೆದರಿಕೆ : ಪೊಲೀಸರಿಗೆ ದೂರು

ಜಾಹೀರಾತು/Advertisment
ಜಾಹೀರಾತು/Advertisment

 ಅಪ್ರಾಪ್ತ ಬಾಲಕರಿಬ್ಬರಿಂದ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌಜ೯ನ್ಯ, ಜೀವ ಬೆದರಿಕೆ : ಪೊಲೀಸರಿಗೆ ದೂರು

ಮೂಡುಬಿದಿರೆ : ಅಪ್ರಾಪ್ತ ಪ್ರಾಯದ ಮಗಳ ಮೇಲೆ ಇಬ್ಬರು ಅಪ್ರಾಪ್ತ ಬಾಲಕರು ಲೈಂಗಿಕ ದೌರ್ಜನ್ಯ ಹಾಗೂ ಬೆದರಿಕೆ ಹಾಕಿರುವ ಬಗ್ಗೆ ಫಿಯಾ೯ದಿದಾರರು ಬೆಳ್ತಂಗಡಿ ತಾಲೂಕಿನ ವೇಣೂರು ಠಾಣೆಗೆ ಜೂ. 23ರಂದು ದೂರು ನೀಡಿರುತ್ತಾರೆ.

ಮಗಳ ಮೇಲೆ ನಡೆದಿರುವ ಲೈಂಗಿಕ ದೌಜ೯ನ್ಯದ ಬಗ್ಗೆ ದೂರುದಾರರಿಗೆ ಇತ್ತೀಚೆಗೆ ಮಾಹಿತಿ ಸಿಕ್ಕಿರುತ್ತದೆ. ಈ ಹಿನ್ನೆಲೆಯಲ್ಲಿ ಪಿರ್ಯಾದಿರವರು ತನ್ನ ಮಗಳನ್ನು ವಿಚಾರಿಸಿದಾಗ, ಫಿರ್ಯಾದಿದಾರರ ಸಂಬಂಧಿಕನಾದ ಕಾನೂನು ಸಂಘರ್ಷಕ್ಕೊಳಗಾದ ಬಾಲಕ (ಅಪ್ರಾಪ್ತ) ಹಾಗೂ ಆತನ ಸ್ನೇಹಿತನಾದ ಮತ್ತೋರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕ (ಅಪ್ರಾಪ್ತ) ಇಬ್ಬರೂ ಸೇರಿ 2023 ರಲ್ಲಿ, ಬೆಳ್ತಂಗಡಿಯಲ್ಲಿರುವ ಡ್ಯಾಂ ಒಂದರ ಬಳಿಯಿರುವ ಕಟ್ಟಡಕ್ಕೆ  ಸದ್ರಿ ಬಾಲಕಿಯನ್ನು ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿರುವುದು ಹಾಗೂ ಬಾಲಕಿಗೆ ಜೀವಬೆದರಿಕೆ ಒಡ್ಡಿರುವುದು ತಿಳಿದುಬಂದಿರುತ್ತದೆ  ಪೊಲೀಸ್  ಠಾಣೆಯಲ್ಲಿ ಕಲಂ: 376, 376AB, 376DB, 506 ಜೊತೆಗೆ 34 ಐ.ಪಿ.ಸಿ ಮತ್ತು ಕಲಂ: 6 ಪೋಕ್ಸೋ ಕಾಯಿದೆ- 2012, ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Post a Comment

0 Comments