ಮೂಡುಬಿದಿರೆಯಲ್ಲಿ ಮಾರುತಿ ಸಿಯಾಜ್ ಕಾರಿಗೆ ಬೆಂಕಿ : ಕಾರಿನಲ್ಲಿದ್ದವರು ಪಾರು

ಜಾಹೀರಾತು/Advertisment
ಜಾಹೀರಾತು/Advertisment
ಮೂಡುಬಿದಿರೆಯಲ್ಲಿ ಮಾರುತಿ ಸಿಯಾಜ್ ಕಾರಿಗೆ ಬೆಂಕಿ : ಕಾರಿನಲ್ಲಿದ್ದವರು ಪಾರು
ಮೂಡುಬಿದಿರೆ : ಫಾಗ್ ಲೈಟ್ ನಲ್ಲಿ ಬೆಂಕಿ ಕಾಣಿಸಿಕೊಂಡು ಕಾರೊಂದು ಸುಟ್ಟ ಘಟನೆ ಮೂಡುಬಿದಿರೆ ಪೇಟೆಯಲ್ಲಿ ಸೋಮವಾರ ಸಂಜೆ ನಡೆದಿದ್ದು ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.
  ಕೋಟೆಬಾಗಿಲಿನ ಮಸೂದು ಅವರು ಇಂದೇ ನಾಲ್ಕು ಗಂಟೆಯ ವೇಳೆಗೆ ಮೂಡುಮಾನಾ೯ಡಿನ ಅವಿನಾಶ್ ಎಂಬವರಿಂದ ಮಾರುತಿ ಸಿಯಾಜ್ ಕಾರನ್ನು ಖರೀದಿಸಿ ತಮ್ಮ ಕುಟುಂಬದೊಂದಿಗೆ ಮೂಡುಬಿದಿರೆಗೆ ಬರುತ್ತಿದ್ದ ಸಂದಭ೯ ಪುರಸಭೆಯ ಹಳೆ ಕಟ್ಟಡದ ಬಳಿ ಕಾರಿನಲ್ಲಿ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ಕಾರನ್ನು ನಿಲ್ಲಿಸಿ ಒಳಗಿದ್ದ ಪುಟ್ಟ ಮಕ್ಕಳು ಮತ್ತು ಮಹಿಳೆಯರನ್ನು ಕೆಳಗಿಸಿದ್ದಾರೆ ಇದೇ ಸಂದಭ೯ದಲ್ಲಿ ಜೋರಾಗಿ ಬೆಂಕಿ ಉರಿಯಲು ಆರಂಭಿಸಿದೆ. 
 ಅಗ್ನಿಶಾಮಕ ದಳವು ಆಗಮಿಸಿ ಸಾವ೯ಜನಿಕರ ಸಹಕಾರದೊಂದಿಗೆ ಬೆಂಕಿಯನ್ನು ನಂದಿಸಿದ್ದಾರೆ. 
 ಮೂಡುಬಿದಿರೆ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ.

Post a Comment

0 Comments