ಮೂಡುಬಿದಿರೆ ತಾಲೂಕು ಮಟ್ಟದ ಕ್ರೀಡಾಕೂಟ
ಪ್ರಾರಂಭವಾಯಿತು.
ಮೂಡುಬಿದಿರೆ : ಶಿಕ್ಷಣ ಇಲಾಖೆ ಹಾಗೂ
ಸ.ಪ್ರೌಢ ಶಾಲೆ ಹೊಸಬೆಟ್ಟು ಇವುಗಳ
ಸಂಯುಕ್ತ ಆಶ್ರಯದಲ್ಲಿ ಎರಡು ದಿನ ಸ್ವರಾಜ್ಯ ಮೈದಾನ್ ಸಿಂಥೆಟಿಕ್ ಟ್ರ್ಯಾಕ್ ನಲ್ಲಿ ನಡೆಯುವ
ಮೂಡುಬಿದಿರೆ ತಾಲೂಕು ಮಟ್ಟದ 14 ಮತ್ತು 17ರ ವಯೋಮಾನದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟವು ಸೋಮವಾರ ಪ್ರಾರಂಭವಾಯಿತು.
ದ.ಕ. ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕಕೆ.ಪಿ. ಸುಚರಿತ ಶೆಟ್ಟಿ ದೀಪ ಬೆಳಗಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಹೊಸಬೆಟ್ಟು ಹೈಸ್ಕೂಲ್ ಎಸ್ ಡಿ ಎಂಸಿ ಅಧ್ಯಕ್ಷ ಸಚೇಂದ್ರ ಕಲ್ಯಾಡೆ ಅವರ ಅಧ್ಯಕ್ಷತೆಯಲ್ಲಿ ನಡೆದ
ಸಮಾರಂಭದಲ್ಲಿ
ಮಾಜಿ ಸಚಿವ ಕೆ.ಅಭಯಚಂದ್ರ ಧ್ವಜಾರೋಹಣಗೈದರು.
ಸನ್ಮಾನ : ಸಕಲೇಶಪುರ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಯಾಗಿ ಬಡ್ತಿ ಹೊಂದಿರುವ ನವೀನ್ ಪುತ್ರನ್, ನಿವೃತ್ತ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಗಳಾದ ವಿನಯ ಕುಮಾರ್, ಶಿವಾನಂದ ಕಾಯ್ಕಿಣಿ ಇವರನ್ನು ಸನ್ಮಾನಿಸಲಾಯಿತು.
ಆಹ್ವಾನಿತರಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ,
ಮುಖ್ಯ ಅತಿಥಿಗಳಾಗಿ ನಿವೃತ್ತ ಟಿ.ಪಿ.ಓ. ವಿನಯ ಕುಮಾರ್, ತಾಲೂಕಿನ ವಿವಿಧ ಶಿಕ್ಷಕರ ಸಂಘಟನೆಗಳ ಅಧ್ಯಕ್ಷರಾದ ನವೀನ್ ಚಂದ್ರ ಅಂಬೂರಿ ( ದೈ.ಶಿ. ಶಿಕ್ಷಕರ ಸಂಘ ಗ್ರೇಡ್1), ಸುಧೀರ್ ಕುಮಾರ್ (ದೈ.ಶಿ.ಶಿಕ್ಷಕರ ಸಂಘ), ನಿನ್ನಿ ಫ್ರೆಡ್ ಗ್ರೇಸಿ ಪಿಂಟೊ (ಪ್ರಾ.ಶಾ. ದೈ.ಶಿ. ಶಿಕ್ಷಕರ ಸಂಘ), ಮಹೇಶ್ವರಿ (ಪ್ರಾ.ಶಾ.ಶಿಕ್ಷಕರ ಸಂಘ), ಜಾನ್ ರೊನಾಲ್ಡ್ ಡಿ'ಸೋಜ (ಬಡ್ತಿ ಶಿಕ್ಷಕರ ಸಂಘ), ನಾಗರತ್ನ ಶಿರೂರು (ಶಿಕ್ಷಣ ಇಲಾಖೆ ನೌಕರರ ಸಂಘ),ರಾಜೇಶ್ ಕುಮಾರ್ ಕೆ.ಜೆ. ( ಲಿಪಿಕ ನೌಕರರ ಸಂಘ) ಭಾಗವಹಿಸಿದ್ದರು.
ಆತಿಥೇಯ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಇ. ಸ್ವಾಗತಿಸಿ, ಅಧ್ಯಾಪಕ ಮಹಾದೇವ ಮೂಡುಕೊಣಾಜೆ ನಿರೂಪಿಸಿ, ತಾ. ದೈ.ಶಿಕ್ಷಣ ಪರಿವೀಕ್ಷಣಾಧಿಕಾರಿ ರಿತೇಶ್ ಶೆಟ್ಟಿ ಪ್ರಸ್ತಾವನೆಗೈದರು
ಶಾಲಾ ದೈ.ಶಿ. ಶಿಕ್ಷಕಿ
ಶಾಲಿನಿ ಕುಮಾರಿ ಎಂ. ವಂದಿಸಿದರು. 500 ಮಂದಿ ಕ್ರೀಡಾಳುಗಳು ಕೂಟದಲ್ಲಿದ್ದಾರೆ.

0 Comments