ಮೂಡುಬಿದಿರೆ : ಶ್ರೀ ಹಿರೇ ಅಮ್ಮನವರ ಬಸದಿಯ ವಾರ್ಷಿಕ ರಥೋತ್ಸವದ ಸಂದರ್ಭದಲ್ಲಿ ಧಾರ್ಮಿಕ ಸಾಮಾಜಿಕ ರಾಜಕೀಯ ಮುಂತಾದ ಕ್ಷೇತ್ರಗಳಿಗೆ ಕೊಡುಗೆ ನೀಡಿದ ಕೆ. ಅಭಯಚಂದ್ರ ಜೈನ್ ಅವರನ್ನು ವಿಶಿಷ್ಟ ರೀತಿಯಲ್ಲಿ ಸನ್ಮಾನಿಸುವ ಕುರಿತಾಗಿ ಪೂರ್ವಭಾವಿ ಸಭೆಯು ಸೋಮವಾರ ಶ್ರೀಹಿರೇ ಅಮ್ಮನವರ ಬಸದಿಯಲ್ಲಿ ನಡೆಯಿತು.
ಮೂಡುಬಿದಿರೆ ಮಾತ್ರವಲ್ಲದೆ ಪರಿಸರದ ವಿವಿಧ ಊರುಗಳಿಂದ ಬಂದಿದ್ದ ಅಭಯ ಚಂದ್ರ ಜೈನ ರ ಅಭಿಮಾನಿಗಳು ಸನ್ಮಾನವನ್ನು ನಡೆಸುವ ಕುರಿತಾಗಿ ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.
ಬಸದಿಯ ಆಡಳಿತದಾರರ ಪ್ರತಿನಿಧಿಯಾಗಿ ಅನಂತ ಕೇಸರಿ ಕಟ್ಟೆಮರ್, ಪಟ್ನ ಶೆಟ್ಟಿ ಸುದೇಶ್ ಕುಮಾರ್, ಚೌಟರ ಅರಮನೆಯ ಕುಲದೀಪ ಎಂ., ರಾಜವರ್ಮ ಬೈಲಂಗಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀ ಮಹಾವೀರ ಜೈನ್ ಮೂಡು ಕೋಡಿ ಸ್ವಾಗತಿಸಿ ಡಾ. ಪ್ರಭಾತ್ ಬಲ್ನಾಡ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

0 Comments