ಮೂಡುಬಿದಿರೆ : ಇಲ್ಲಿಗೆ ಸಮೀಪದ ಹೊಸಂಗಡಿಯ ನಿವಾಸಿಯೊಬ್ಬರು ಚಲಿಸುತ್ತಿದ್ದ ರೈಲಿನಿಂದ ಬಿದ್ದು ದುಮ೯ರಣ ಹೊಂದಿದ ಘಟನೆ ಉಡುಪಿಯ ಇಂದ್ರಾಳಿ ರೈಲು ನಿಲ್ದಾಣದಲ್ಲಿ ಸೋಮವಾರ ನಡೆದಿದೆ.
ಮೂಡುಬಿದಿರೆ ಸಮೀಪದ ಹೊಸಂಗಡಿಯ ನಿವಾಸಿ, ನಿವೃತ್ತ ಸರಕಾರಿ ಉದ್ಯೋಗಿ ದಿನೇಶ್(63) ಮೃತಪಟ್ಟ ವ್ಯಕ್ತಿ.
ದೆಹಲಿ - ಎನಾ೯ಕುಲಂ ನಡುವೆ ಸಂಚರಿಸುವ ನಿಝಾಮುದ್ದೀನ್ ಎಕ್ಸ್ ಪ್ರೆಸ್ ಇಂದ್ರಾಳಿ ರೈಲು ನಿಲ್ದಾಣದ ಬಳಿ ನಿಧಾನಗತಿಯಲ್ಲಿ ಚಲಿಸುತ್ತಿದ್ದ ವೇಳೆ ಎರಡನೇ ಬೋಗಿಯಲ್ಲಿದ್ದ ದಿನೇಶ್ ಇಳಿಯುವ ರಭಸದಲ್ಲಿ ಆಕಸ್ಮಿಕವಾಗಿ ರೈಲಿನಿಂದ ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ.
ಘಟನೆಯ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ರೈಲ್ವೆ ಆರ್ ಪಿಎಫ್ ಸಿಬ್ಬಂದಿ ತಕ್ಷಣ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದ್ದು ತಕ್ಷಣ ಸ್ಥಳಕ್ಕೆ ಧಾವಿಸಿದ ಅವರು, ಗಂಭೀರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದರು. ಆದರೆ ಪರೀಕ್ಷಿಸಿದ ವೈದ್ಯರು ವ್ಯಕ್ತಿ ಮೃತಪಟ್ಟಿರುವುದಾಗಿ ದೃಢಪಡಿಸಿದ್ದರು.
ದಿನೇಶ್ ಅವರ ಕುಟುಂಬವು ಆಂಧ್ರದಲ್ಲಿ ನೆಲೆಸಿದ್ದು, ಪ್ರತಿವಷ೯ ನವರಾತ್ರಿ ಸಂದಭ೯ದಲ್ಲಿ ದೇವಿಯ ಆರಾಧನೆಗಾಗಿ ಹೊಸಂಗಡಿಯಲ್ಲಿರುವ ತಮ್ಮ ಮನೆಗೆ ಬರುತ್ತಿದ್ದರು ಆದರಂತೆ ಈ ಬಾರಿ ಬರುವ ಸಂದಭ೯ದಲ್ಲಿ ವಿಧಿಯಾಟಕ್ಕೆ ಬಲಿಯಾಗಿದ್ದಾರೆ.

0 Comments