ಮೂಡುಬಿದಿರೆ ಕಡಲಕೆರೆಯಲ್ಲಿ ಪ್ರಾಯೋಗಿಕ ಕಂಬಳ : ಸಾತ್ವಿಕ್ ಶೆಟ್ಟಿ, ಚೈತೇಶ್ ಪೂಜಾರಿ, ಸುಜಿತ್ ಕೋಟ್ಯಾನ್, ಸುರೇಂದ್ರ ಎಸ್. ಶೆಟ್ಟಿಗೆ ಬಹುಮಾನ
ಮೂಡುಬಿದಿರೆ : ಕಂಬಳ ಅಕಾಡೆಮಿಯ ವತಿಯಿಂದ 42 ಮಂದಿ ಯುವ ಓಟಗಾರರಿಗೆ ಏಳನೇ ವರ್ಷದ ತರಬೇತಿಯ ಪ್ರಯುಕ್ತ ಗುರುವಾರ ಒಂಟಿಕಟ್ಟೆಯ ಕೋಟಿ ಚೆನ್ನಯ ಜೋಡುಕರೆಯಲ್ಲಿ ನಡೆದ ಪ್ರಾಯೋಗಿಕ ಕಂಬಳದಲ್ಲಿ ನೇಗಿಲು ಕಿರಿಯ ವಿಭಾಗದಲ್ಲಿ ವೇಣೂರು ಪೆಮು೯ಡ ಸನತ್ ಸಂಪತ್ ಅಂಚನ್ ಅವರ ಕೋಣಗಳನ್ನು ಓಡಿಸಿರುವ ಶಿಬಿರಾಥಿ೯ ತಲಪಾಡಿ ಸಾಂತ್ಯ ಮೇಗಿನಮನೆಯ ಸಾತ್ವಿಕ್ ಶೆಟ್ಟಿ ಪ್ರಥಮ ಬಹುಮಾನ, ಕಡಂದಲೆ ಮುಡಾಯಿಬೆಟ್ಟು ವಿಶ್ವನಾಥ ನಿವಾಸದ ಕೀತ೯ನ್ ಮೋಹಿತ್ ಪಾಣರ ಅವರ ಕೋಣಗಳನ್ನು ಓಡಿಸಿರುವ ಮಣೇಲ್ ಚೈತೇಶ್ ಪೂಜಾರಿ ದ್ವಿತೀಯ ಬಹುಮಾನವನ್ನು ಪಡೆದುಕೊಂಡಿದ್ದಾರೆ.
ಸಬ್ ಜ್ಯೂನಿಯರ್ ವಿಭಾಗದಲ್ಲಿ ಬೋಳ ಹೊಸಮನೆ ಕೌಶಿಕ್ ಕೋಟ್ಯಾನ್ ಅವರ ಕೋಣಗಳನ್ನು ಓಡಿಸಿರುವ ಬೋಳ ಹೊಸಮನೆ ಸುಜಿತ್ ಕೋಟ್ಯಾನ್ ಪ್ರಥಮ ಬಹುಮಾನ, ಪಡು ಸಾಂತೂರು ಕಲ್ಯಾಣಿ ನಿವಾಸದ ಅಶೋಕ್ ಪೂಜಾರಿ -ಎ ಕೋಣಗಳನ್ನು ಓಡಿಸಿರುವ ಮಾಣಿ ಶಂಭುಗ ಸುರೇಂದ್ರ ಎಸ್. ಶೆಟ್ಟಿ ದ್ವಿತೀಯ ಬಹುಮಾನವನ್ನು ಪಡೆದುಕೊಂಡಿದ್ದಾರೆ.
ನೇಗಿಲು ಕಿರಿಯ ವಿಭಾಗದಲ್ಲಿ ಪಣಪಿಲ ಕಲ್ಲೇರಿ ಯುವ ಬಾಂಧವರು ಕೋಣಗಳನ್ನು ಓಡಿಸಿರುವ ಮಾನಾ೯ಡ್ ಫಹಾದ್ ತೃತೀಯ, ಕುಕ್ಕುಂದೂರು ನಕ್ರೆ ವಾಣಿ ಮನೋಜ್ ಪೂಜಾರಿ ಅವರ ಕೋಣಗಳನ್ನು ಓಡಿಸಿರುವ ಬಳ್ಳಮಂಜ ಪ್ರೇಮನಾಥ್ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಸಬ್ ಜ್ಯೂನಿಯರ್ ವಿಭಾಗದಲ್ಲಿ ಕಾಂತಾವರ ಬಾಂದೊಟ್ಟು ನಿಖಿಲ್ ಮೋಕ್ಷಿ ಪೂಜಾರಿ ಅವರ ಕೋಣಗಳನ್ನು ಓಡಿಸಿರುವ ಮಿಜಾರು ಅಶ್ವತ್ಥಪುರ ಲಕ್ಷ್ಮಣ್ ಗೌಡ ತೃತೀಯ ಹಾಗೂ ಉಡುಪಿ ಕೊಡವೂರು ಅಣ್ಣಪ್ಪ ಶೆಟ್ಟಿ ಕೋಣಗಳನ್ನು ಓಡಿಸಿರುವ ಎಕ್ಕೂರು ಸುಮನ್ ನಾಲ್ಕನೇ ಬಹುಮಾನವನ್ನು ಪಡೆದುಕೊಂಡಿದ್ದಾರೆ.
ಗೌರವ : ವಿಜೇತ ಕಂಬಳದ ಓಟಗಾರರಿಗೆ ಚಿನ್ನದ ಪದಕವನ್ನು ಪ್ರಾಯೋಜಿಸಿರುವ ಮತ್ತು 3 ಲಕ್ಷ ವೆಚ್ಚದಲ್ಲಿ 'ಗುಣಪಾಲ ಕಡಂನ ದೊಂಪದಡಿ' ಹೆಸರಿನಲ್ಲಿ ಕೊಟ್ಟಿಗೆಯನ್ನು ನಿಮಿ೯ಸಿರುವ ದೋಟ ಹರಿಮೀನಾಕ್ಷಿ ಸುರೇಶ್ ಶೆಟ್ಟಿ ಅವರನ್ನು ಮತ್ತು ಹರಿಯಪ್ಪ ಶೆಟ್ಟಿ' ಅವರನ್ನು ಅಕಾಡೆಮಿಯ ವತಿಯಿಂದ ಗೌರವಿಸಲಾಯಿತು.
ಕಂಬಳದ ನೇಗಿಲು ಕಿರಿಯ ವಿಭಾಗದಲ್ಲಿ ಒಟ್ಟು 24 ಜೊತೆ ಹಾಗೂ ಸಬ್ ಜ್ಯೂನಿಯರ್ ವಿಭಾಗದಲ್ಲಿ 37 ಜೊತೆ ಕೋಣಗಳು ಭಾಗವಹಿಸಿದ್ದವು.
ಬಹುಮಾನ ವಿತರಣಾ ಕಾಯ೯ಕ್ರಮದಲ್ಲಿ ಕಂಬಳ ಅಕಾಡೆಮಿಯ ಸಂಚಾಲಕ ಗುಣಪಾಲ ಕಡಂಬ, ಕಂಬಳದ ಪ್ರೋತ್ಸಾಹಕ ದೋಟ ಹರಿಮೀನಾಕ್ಷಿ ಸುರೇಶ್ ಶೆಟ್ಟಿ, ಐಕಳ ಬಾವ ಕಂಬಳ ಸಮಿತಿಯ ಅಧ್ಯಕ್ಷ ಚಿತ್ತರಂಜನ್ ಶೆಟ್ಟಿ, ಹೊಕ್ಕಾಡಿಗೋಳಿ ಕಂಬಳ ಸಂಘಟಕ ರಶ್ಮಿತ್ ಶೆಟ್ಟಿ ಕೈತ್ರೋಡಿ, ಅಕಾಡೆಮಿಯ ಸದಸ್ಯ ಸುರೇಶ್ ಕೆ. ಪೂಜಾರಿ, ಶಿಬಿರಾಧಿಕಾರಿ ಜಾನ್ ಸಿರಿಲ್ ಡಿ'ಸೋಜ, ಹಿರಿಯ ಕಂಬಳ ಓಟಗಾರ ಆದಿರಾಜ್ ಜೈನ್, ಕಂಬಳ ಕೋಣಗಳ ಯಜಮಾನ ಮಾಳ ದಿನೇಶ್ ಶೆಟ್ಟಿ, ಸಮಿತಿಯ ಸದಸ್ಯ ಜ್ವಾಲ ಪ್ರಸಾದ್, ನವೀನ್ ಅಂಬೂರಿ, ರವೀಂದ್ರ ಶೆಟ್ಟಿ ಕುಕ್ಕುಂದೂರು, ನವೀನ್ ಸಾಂತ್ ಪಾಲ್, ಅಬ್ದುಲ್ ಸತ್ತಾರ್ ಒಂಟಿಕಟ್ಟೆ ಹಾಗೂ ರಘು ಪೆಲಕುಂಜ ಈ ಸಂದಭ೯ದಲ್ಲಿದ್ದರು.

0 Comments