ಮಂಗಳೂರು ಉತ್ತರ ವಲಯ ತಾಲೂಕು ಮಟ್ಟದ ಪ್ರಾಥಮಿಕ, ಪ್ರೌಢಶಾಲಾ ಅಥ್ಲೆಟಿಕ್ಸ್ ಗೆ ಚಾಲನೆ

ಮಂಗಳೂರು ಉತ್ತರ ವಲಯ ತಾಲೂಕು ಮಟ್ಟದ ಪ್ರಾಥಮಿಕ, ಪ್ರೌಢಶಾಲಾ ಅಥ್ಲೆಟಿಕ್ಸ್ ಗೆ ಚಾಲನೆ 
 
ಮೂಡುಬಿದಿರೆ: ದ.ಕ. ಜಿ.ಪಂ. ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕಿನ್ನಿಗೋಳಿ ರೋಟರಿ ಆಂಗ್ಲಮಾಧ್ಯಮ ಶಾಲೆಯ ಸಂಯುಕ್ತ ಆಶ್ರಯದಲ್ಲಿ  ಮಂಗಳೂರು ಉತ್ತರ ವಲಯ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಅಥ್ಲೆಟಿಕ್ಸ್ ಕ್ರೀಡಾಕೂಟವು ಶುಕ್ರವಾರ  ಸ್ವರಾಜ್ಯ ಮೈದಾನದಲ್ಲಿ ನಡೆಯಿತು. 

 ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಪಠ್ಯೇತರ ಚಟುವಟಿಕೆಗಳಿಗೆ ಒತ್ತು ನೀಡಬೇಕು. ಕ್ರೀಡೆಯು ಆರೋಗ್ಯ ವರ್ಧನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕ್ರೀಡೆಯಲ್ಲಿ ಕ್ರೀಡಾಸ್ಪೂರ್ತಿಯಿಂದ ಪಾಲ್ಗೊಳ್ಳಬೇಕು ಎಂದು  ಹೇಳಿದರು. 
  ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ಕಟೀಲು ಕ್ಷೇತ್ರದ ಅನುವಂಶಿಕ ಮೊಕ್ತೇಸರ ವೇ.ಮೂ. ವಾಸುದೇವ ಅಸ್ರಣ್ಣ ಆಶೀರ್ವಚನ ನೀಡಿದರು. ರೋಟರಿ ಜಿಲ್ಲಾ ರಾಜ್ಯಪಾಲ ಸತೀಶ್ ಬೋಳಾರ ಧ್ವಜಾರೋಹಣ ನೆರವೇರಿಸಿದರು. ಕೆಎಂಎಫ್ ನಿರ್ದೇಶಕ ಕೆ.ಪಿ ಸುಚರಿತ ಶೆಟ್ಟಿ ಕ್ರೀಡಾ ಪ್ರತಿಜ್ಞೆ ಬೋದಿಸಿದರು.
ಮಂಗಳೂರು ಉತ್ತರ ಮಲಯ ಕ್ಷೇತ್ರ ಶಿಕ್ಷಣಾಧಿಕಾರಿ ಜೇಮ್ಸ್ ಕುಟಿನ್ಹ ಪಥಸಂಚಲನದ ಗೌರವ ಸ್ವೀಕರಿಸಿದರು. ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ವೇದಾವತಿ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ರಿತೇಶ್ ಶೆಟ್ಟಿ, ರೋಟರಿ ಅಸಿಸ್ಟಂಟ್ ಗವರ್ನರ್ ಜೊಯಲ್ ಡಿಸೋಜ, ವಲಯ ಸೇನಾನಿ ವಿಜೇತ, ಕಿನ್ನಿಗೋಳಿ  ರೋಟರಿ ಕ್ಲಬ್ ಅಧ್ಯಕ್ಷ ಪ್ರವೀಣ್ ಸಾಲ್ಯಾನ್, ಮೂಡುಬಿದಿರೆ ರೋಟರಿ ಮಿಡ್ ಟೌನ್ ಅಧ್ಯಕ್ಷ ಪ್ರವೀಣ್ ಕೋಟ್ಯಾನ್ ಶಾಲಾ ಉಪಾಧ್ಯಕ್ಷ ಶೇಷರಾಯ ಮತ್ತಿತರರು ಉಪಸ್ಥಿತರಿದ್ದರು.  
ಪತ್ರಕರ್ತ ಶರತ್ ಶೆಟ್ಟಿ ಸ್ವಾಗತಿಸಿದರು. ಜೀವನ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯನಿ ಸುನಿತಾ ಗುರುರಾಜ್ ವಂದಿಸಿದರು. ಶಿಕ್ಷಕ ಪ್ರಸಾದ್ ಆಚಾರ್ಯ ಕಾರ್‍ಯಕ್ರಮ ನಿರ್ವಹಿಸಿದರು. 

--------------------------------
 ತನ್ನನ್ನು ನಿಲ೯ಕ್ಷ್ಯ ಮಾಡಿದ್ದಾರೆಂದು ಕ್ರೀಡಾಕೂಟದಿಂದ ಹೊರಟ ಶಾಸಕ ಕೋಟ್ಯಾನ್

ಕ್ರೀಡಾಕೂಟದಲ್ಲಿ ತನ್ನನ್ನು ನಿಲ೯ಕ್ಷ ಮಾಡಿದ್ದಾರೆಂದು ಎಂದು ಆಕ್ಷೇಪಿಸಿ ಶಾಸಕ ಉಮಾನಾಥ ಕೋಟ್ಯಾನ್ ಅವರು ಸಭಾ ಕಾಯ೯ಕ್ರಮದಿಂದ ಕೆಳಗಿಳಿದ ಘಟನೆ ನಡೆದಿದೆ. ಸಭೆಯ ಆರಂಭದಲ್ಲಿ ವಂದೇಮಾತರಂನ ಒಂದೇ ವಾಕ್ಯ ಹಾಡಿರುವುದು,  ನಿಯಮ ಪ್ರಕಾರ ಕ್ರೀಡಾ ಗೌರವ ರಕ್ಷೆಯ ಸ್ವೀಕಾರಕ್ಕೆ ಶಾಸಕರ ಬದಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅವಕಾಶ ಕಲ್ಪಿಸಿರುವುದರಿಂದ  ಕೋಟ್ಯಾನ್ ಸಿಟ್ಟುಗೊಂಡು ವೇದಿಕೆಯಲ್ಲಿಯೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅಧಿಕಾರಿಗಳು ಸಮಜಾಯಿಸಿ ನೀಡಲು ಮುಂದೆ ಬಂದರೂ ಲೆಕ್ಕಿಸದೆ ಹೊರನಡೆದರು.
ಕ್ರೀಡಾ ಕಾರ್‍ಯಕ್ರಮಗಳಲ್ಲಿ ವಂದೇ ಮಾತರಂ, ನಾಡಗೀತೆ ಹಾಡಬೇಕೆಂದಿಲ್ಲ. ಶಾಸಕರಿಗೆ ಗೌರವ ರಕ್ಷೆಯ ಅವಕಾಶ ನೀಡಬೇಕಿತ್ತು. ಅನಗತ್ಯ ಗೊಂದಲ ಸೃಷ್ಠಿಸಲಾಗಿದೆ ಎಂದು ವೇದಿಕೆಯಲ್ಲಿದ್ದ ಇತರ ಗಣ್ಯರು ಅನಿಸಿಕೆ ವ್ಯಕ್ತಪಡಿಸಿದರು. 
ಮೇಲಾಧಿಕಾರಿಗಳಿಗೆ ದೂರು
ಸರ್ಕಾರಿ ನಿಯಮ ಉಲ್ಲಂಘಿಸಿ ಶಾಸಕರನ್ನು ಕಡೆಗಣಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕ್ರೀಡಾ ಗೌರವ ಸ್ವೀಕರಿಸಲು ಅವಕಾಶ ನೀಡಿರುವುದರ ವಿರುದ್ಧ ಡಿಡಿಪಿಐ ಹಾಗೂ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸುವುದಾಗಿ ಶಾಸಕ ಉಮಾನಾಥ ಕೋಟ್ಯಾನ್ ಪತ್ರಕರ್ತರಿಗೆ ತಿಳಿಸಿದ್ದಾರೆ
------------------------

Post a Comment

0 Comments

Advertisement