ಅಕಾಡೆಮಿಯಿಂದ ತರಬೇತಿ ಪಡೆದ ಕಂಬಳದ ಭವಿಷ್ಯದ ಓಟಗಾರರು
ಕಂಬಳದ ಭೀಷ್ಮ ಎಂದೇ ಗುರುತಿಸಿಕೊಂಡಿರುವ ಗುಣಪಾಲ ಕಡಂಬರ ನೇತೃತ್ವದ ಕಂಬಳ ಸಂರಕ್ಷಣೆ, ನಿವ೯ಹಣೆ ಮತ್ತು ತರಬೇತಿ ಅಕಾಡೆಮಿಯಿಂದ ಕಡಲಕೆರೆಯಲ್ಲಿ ನಡೆಯುತ್ತಿರುವ 7ನೇ ವಷ೯ದ ಶಿಬಿರದಲ್ಲಿ 42 ಮಂದಿ ಯುವಕರು ತರಬೇತಿ ಪಡೆದಿದ್ದು ಕಂಬಳದ ಭವಿಷ್ಯದ ಓಟಗಾರರಾಗಿ ಮೂಡಿ ಬರಲಿದ್ದಾರೆ.
ಈ ಬಾರಿಯ ಕಂಬಳ ಓಟದ ತರಬೇತಿ ಶಿಬಿರದಲ್ಲಿ ಭಾಗವಹಿಸಿರುವ ಶಿಬಿರಾಥಿ೯ಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆದವರೂ ಕಂಬಳದ ಕೋಣಗಳನ್ನು ಓಡಿಸಲು ತಯಾರಾಗಿದ್ದಾರೆ.
ಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯುತ್ತಿರುವ ಮಂಜೇಶ್ವರ ವಕಾ೯ಡಿಯ ರಕ್ಷಿತ್ ಆರ್ ಶೆಟ್ಟಿ ಕೂಡಾ ಅಕಾಡೆಮಿ ಶಿಬಿರದಲ್ಲಿ ಶಿಬಿರಾಥಿ೯ಯಾಗಿ ಪಾಲ್ಗೊಂಡು ತರಬೇತಿಯನ್ನು ಪಡೆದುಕೊಂಡಿದ್ದಾರೆ. ಸಣ್ಣ ವಯಸ್ಸಿನಲ್ಲಿ ಕಂಬಳದ ಬಗ್ಗೆ ಆಸಕ್ತಿಯನ್ನು ಹೊಂದಿರದ ಅವರು ಬಂಟ್ವಾಳ ಕಕ್ಯಪದವಿನಲ್ಲಿ ನಡೆದ ಕಂಬಳವನ್ನು ಮೊದ ಬಾರಿಗೆ ನೋಡಿ ಕಂಬಳದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಬೆಳೆಸಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ. ರಕ್ಷಿತ್ ಶೆಟ್ಟಿ ಸ್ನಾತಕೋತ್ತರ ಪದವಿ
ಮೈಕ್ರೋಕೋಚ್ ಡಿಪ್ಲೋಮ ಮಾಡಿರುವ ಮಿಜಾರು ಅಶ್ವತ್ಥಪುರದ ಲಕ್ಷ್ಮಣ್ ಅವರು ಕೋಣದ ಓಟಗಾರನಾಗಿ ಹೆಸರು ಮಾಡಬೇಕೆಂಬ ಕನಸ್ಸನ್ನು ಕಂಡು ಶಿಬಿರದಲ್ಲಿ ತರಬೇತಿಯನ್ನು ಪಡೆಡಿದ್ದಾರೆ.
ಕಂಬಳ ಅಕಾಡೆಮಿಯ ಶಿಬಿರದಲ್ಲಿ ಭಾಗವಹಿಸಿರುವುದರಿಂದ ಶಿಸ್ತು, ಸಮಯ ಪ್ರಜ್ಞೆ, ಯೋಗ, ನಾಯಕತ್ವದ ಗುಣ ಆಹಾರ ಪದ್ಧತಿಯನ್ನು ತಿಳಿಯಲು ಸಹಕಾರಿಯಾಯಿತು.ಕಂಬಳದ ಬಗ್ಗೆ ಆಸಕ್ತಿ ಬೆಳೆಯಲು ಶ್ರೀನಿವಾಸ ಗೌಡ ಸ್ಪೂತಿ೯.
ಅಕಾಡೆಮಿಯ ಸಂಚಾಲಕ ಗುಣಪಾಲ ಕಡಂಬರನ್ನು ಕಂಬಳದಲ್ಲಿ ಎಂಸಿ ಮಾಡುವುದನ್ನು ನಾವು ದೂರದಿಂದ ನೋಡಿದ್ದೇವೆ ಆದರೆ ಈಗ ಹತ್ತಿರದಿಂದ ನೋಡಿದ್ದೇವೆ. ಕಡಂಬರು ಲೈಬ್ರೆರಿ ಇದ್ದಂತೆ ಅವರಿಂದ ನಾವು ಕಂಬಳದ ಬಗ್ಗೆ 35 ವಷ೯ಗಳ ಹಿಂದಿನ ಮಾಹಿತಿಯನ್ನು ತಿಳಿದುಕೊಂಡಿದ್ದೇವೆ ಎಂದಿದ್ದಾರೆ ಲಕ್ಷ್ಮಣ್.
ಪಣಪಿಲದ ಶೈಲೇಶ್ ಅವರೂ ಶಿಬಿರಾಥಿ೯ಯಾಗಿ ಅಯ್ಕೆಯಾಗಿ ತರಬೇತಿಯನ್ನು ಪಡೆದುಕೊಂಡಿದ್ದಾರೆ. ತಮ್ಮ ಮನೆಯಲ್ಲಿ ಕೋಣಗಳು ಇದ್ದಿದರಿಂದ ಅವುಗಳ ಲಾಲನೆ ಪಾಲನೆಯ ಬಗ್ಗೆ ತಿಳಿದುಕೊಂಡಿದ್ದೆ ಅಲ್ಲದೆ ಈಗಾಗಲೇ ಸಣ್ಣ ಕೋಣಗಳನ್ನು ಓಡಿಸಿದ ಅನುಭವವಿದೆ. ಶಿಕ್ಷಣದ ಜತೆಗೆ ಆಸಕ್ತಿಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದಿರುವ ಅವರು ಪಣಪಿಲ ಪ್ರವೀಣ್ ಕೋಟ್ಯಾನ್ ತನಗೆ ಸ್ಪೂತಿ೯ ಎಂದಿದ್ದಾರೆ.
ಪವನ್ ರಾಜ್. ಪಣಪಿಲ
ಇನ್ನೋವ೯ ಶಿಬಿರಾಥಿ೯ ಪಣಪಿಲದ ಪವನ್ ರಾಜ್ ಅವರು ತರಬೇತಿಯನ್ನು ಪಡೆದುಕೊಂಡಿದ್ದಾರೆ. ಕಂಬಳದ ಅಕಾಡೆಮಿಯಿಂದ ತರಬೇತಿ ಪಡೆದರೆ ಮುಂದೆ ತಮಗೆ ಸಹಾಯವಾಗುತ್ತದೆ ಆದ್ದರಿಂದ ತರಬೇತಿಗಾಗಿ ಅಕಾಡೆಮಿಯನ್ನು ಆಯ್ಕೆ ಮಾಡಿಕೊಂಡೆ. ಆಹಾರ ಪದ್ಧತಿ, ಕೋಣಗಳ ಸಾಕಣೆ, ಕೋಣಗಳನ್ನು ಓಡಿಸುವುದು, ನೊಗ ಕಟ್ಟುವುದು, ಮರಕ್ಕೆ ಹಗ್ಗ ಬಿಗಿಯುವುದು, ಬೆತ್ತ ನೇಯುವುದು, ಹಗ್ಗ ನೇಯ್ಗೆ, ಕಚ್ಚೆ ಹಾಕುವುದು, ಮುಂಡಾಸು ಕಟ್ಟುವುದನ್ನು ಎಲ್ಲಾ ಶಿಬಿರಾಥಿ೯ಗಳು ತಿಳಿದುಕೊಂಡಿದ್ದೇವೆ ಎಂದ ಅವರು ಕ್ರೀಡಾರತ್ನ ಪ್ರಶಸ್ತಿ ವಿಜೇತ ಓಟಗಾರ ಪ್ರವೀಣ್ ಕೋಟ್ಯಾನ್ ಸಹಕಾರ ನೀಡಿದ್ದಾರೆ ಎಂದಿದ್ದಾರೆ.
ಮೊದಲಿಗೆ ಕಂಬಳ ತರಬೇತಿಯ ಬಗ್ಗೆ ಆಸಕ್ತಿ ಇರಲಿಲ್ಲ ಆದರೆ ತರಬೇತಿ ಪಡೆದ ನಂತರ ಕಂಬಳದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಬೆಳೆಸಿಕೊಂಡಿದ್ದೇನೆ, ಗುಣಪಾಲ ಕಡಂಬರು ನಮ್ಮನ್ನು ಮಕ್ಕಳಂತೆ ನೋಡಿಕೊಂಡಿದ್ದಾರೆ. ತರಬೇತಿಯ ಸಂದಭ೯ದಲ್ಲೂ ರಾತ್ರಿ ಹಗಲೆನ್ನದೆ ನಮ್ಮ ಜತೆಯಲ್ಲಿಯೇ ಇದ್ದರು ಅವರು ನಮ್ಮ ಮೇಲಿಟ್ಟುರುವ ನಂಬಿಕೆಯನ್ನು ಸದಾ ಕಾಪಾಡುತ್ತೇವೆ ಎಂದು ಶಿಬಿರಾಥಿ೯ಗಳು ತಿಳಿಸಿದ್ದಾರೆ.
ಒಟ್ಟು 42 ಶಿಬಿರಾಥಿ೯ಗಳು ಈ ಶಿಬಿರದಲ್ಲಿ ಪಾಲ್ಗೊಂಡಿದ್ದರು.

0 Comments