ಮೂಡುಬಿದಿರೆ : ಡಿಬಿಎಲ್ ಕಂಪನಿಯ ವಾಹನ ಡಿಕ್ಕಿ ಹೊಡೆದು ಓವ೯ ಸಾವು

ಮೂಡುಬಿದಿರೆ : ಡಿಬಿಎಲ್ ಕಂಪನಿಯ ವಾಹನ ಡಿಕ್ಕಿ ಹೊಡೆದು ಓವ೯ ಸಾವು

ಮೂಡುಬಿದಿರೆ : ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಿವ೯ಹಿಸಲು ಗುತ್ತಿಗೆ ಪಡೆದಿರುವ ಡಿಬಿಎಲ್ ಕಂಪನಿಯ ವಾಹನವೊಂದು ತನ್ನದೇ ಕಾಮಿ೯ಕನಿಗೆ ಹೊಡೆದ ಪರಿಣಾಮವಾಗಿ ಆತ ಮೃತಪಟ್ಟ  ಘಟನೆ ಪುತ್ತಿಗೆ  ನೆಲ್ಲಿಗುಡ್ಡೆಯಲ್ಲಿ  ಬುಧವಾರ ಸಂಜೆ ನಡೆದಿದೆ.
 
ರಾ. ಹೆ ಕಾಮಗಾರಿಯು ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಾದು ಹೋಗುವ  ನೆಲ್ಲಿಗುಡ್ಡೆಯಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ  ಕಾರ್ಮಿಕನಿಗೆ ವಾಹನ ಡಿಕ್ಕಿ ಹೊಡೆದಿದ್ದು 
ಅಪಘಾತದ ರಭಸಕ್ಕೆ ಕಾರ್ಮಿಕನ ಸೊಂಟ ಹಾಗೂ ಕಾಲಿನ ಭಾಗಗಳು ಸಂಪೂರ್ಣ ನುಜ್ಜುಗುಜ್ಜಾಗಿವೆ.

ಘಟನೆಯ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.

Post a Comment

0 Comments

Advertisement