ಬನ್ನಡ್ಕ : ಪಾಡ್ಯಾರು ಬಳಿ ಯುವಕರಿಂದ ಶ್ರಮದಾನ

ಬನ್ನಡ್ಕ : ಪಾಡ್ಯಾರು ಬಳಿ ಯುವಕರಿಂದ ಶ್ರಮದಾನ
ಮೂಡುಬಿದಿರೆ : ಬನ್ನಡ್ಕ ಪಾಡ್ಯರ್ ರಸ್ತೆಯ ಇಕ್ಕೆಲಗಳಲ್ಲಿ ಗಿಡ ಗಂಟಿ, ಮುಳ್ಳಿನ ಗಿಡಗಳಿಂದ ಅವರಿಸಿಕೊಂಡು ವಾಹನ ಸವಾರರು ತೊಂದರೆಯನ್ನು ಅನುಭವಿಸುತ್ತಿರುವುದನ್ನು ಕಂಡು ಬನ್ನಡ್ಕ ಪಾಡ್ಯಾರ್ ನ ಯುವಕರು ಭಾನುವಾರ ಶ್ರಮದಾನದ ಮೂಲಕ ಸ್ವಚ್ಛಗೊಳಿಸಿ ಸಂಚಾರಕ್ಕೆ ಸುಗಮಗೊಳಿಸಿದರು.
     ಸ್ಥಳೀಯರಾದ ಪದ್ಮನಾಭ ಪೂಜಾರಿ, ಪ್ರದೀಪ್ ಆಚಾರ್ಯ, ಪ್ರತಾಪ್ ಪೂಜಾರಿ, ಪ್ರದೀಪ್ ಪೂಜಾರಿ,ಅಶೋಕ್ ದೇವಾಡಿಗ, ಪುನೀತ್ ದೇವಾಡಿಗ,ಪ್ರವೀಣ್, ವಿನೀತ್ ಪೂಜಾರಿ,ಪ್ರಸಾದ್ ಆಚಾರ್ಯ ಹಾಗು ಶಿಶುಪಾಲ್ ಅವರು ಹುಲ್ಲು ಕತ್ತರಿಸುವ ಯಂತ್ರವನ್ನು ಉಚಿತವಾಗಿ ನೀಡುವ ಮೂಲಕ ಶ್ರಮದಾನಕ್ಕೆ ಸಹಕರಿಸಿದರು.

Post a Comment

0 Comments

Advertisement