ಮೂಡುಬಿದಿರೆ: ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡಂದಲೆ ಜೋಡುಕಟ್ಟೆ ರಸ್ತೆಯ ತೊಂದಡ್ಪು ನಿತ್ಯಾನಂದ ಸ್ವಾಮಿ ಮಂದಿರದ ಸಮೀಪ ಬೃಹತ್ ಗಾತ್ರದ ಹೆಬ್ಬಲಸಿನ ಮರ

ಮೂಡುಬಿದಿರೆ: ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡಂದಲೆ ಜೋಡುಕಟ್ಟೆ ರಸ್ತೆಯ ತೊಂದಡ್ಪು ನಿತ್ಯಾನಂದ ಸ್ವಾಮಿ ಮಂದಿರದ ಸಮೀಪ ಬೃಹತ್ ಗಾತ್ರದ ಹೆಬ್ಬಲಸಿನ ಮರ
 ಹಾಗೂ ತೆಂಗಿನ ಮರ ಧರೆಗುರುಳಿದ ಪರಿಣಾಮ ಸುಮಾರು ಏಳು ವಿದ್ಯುತ್ ಕಂಬಗಳು ಮುರಿದು ಬಿದ್ದು ಭಾರೀ ಹಾನಿ ಸಂಭವಿಸಿದೆ.

ಹೆಬ್ಬಲಸಿನ ಮರವು ಸಮೀಪದ ತೆಂಗಿನ ಮರದೊಂದಿಗೆ ವಿದ್ಯುತ್ ತಂತಿಗಳ ಮೇಲೆ ಮುರಿದು ಬಿದ್ದಿದ್ದು, ಮರದ ಭಾರಕ್ಕೆ ಸಿಲುಕಿ ಲೈನ್‌ನಲ್ಲಿದ್ದ ಏಳು ವಿದ್ಯುತ್ ಕಂಬಗಳು ಸಂಪೂರ್ಣ ಜಖಂಗೊಂಡು ರಸ್ತೆಗೆ ಉರುಳಿವೆ. ಘಟನೆಯಿಂದ ಈ ಭಾಗದಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.

Post a Comment

0 Comments

Advertisement