ಶಿಕ್ಷಕರಿಗೆ ಅಂಚೆ ಇಲಾಖೆಯ ಸೇವೆಗಳ ಪರಿಚಯ- ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಅಂಚೆ ಇಲಾಖೆ ಮಾಹಿತಿ ಕಾರ್ಯಗಾರ

ಜಾಹೀರಾತು/Advertisment
ಜಾಹೀರಾತು/Advertisment
ಶಿಕ್ಷಕರಿಗೆ ಅಂಚೆ ಇಲಾಖೆಯ ಸೇವೆಗಳ ಪರಿಚಯ- ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಅಂಚೆ ಇಲಾಖೆ ಮಾಹಿತಿ ಕಾರ್ಯಗಾರ
ಮೂಡುಬಿದಿರೆ : ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳು, ಕಲ್ಲಬೆಟ್ಟು, ಮೂಡುಬಿದಿರೆ ಇಲ್ಲಿ ಅಂಚೆ ಇಲಾಖೆಯ ಜನಸಂಪರ್ಕ ಅಭಿಯಾನದ ಅಂಗವಾಗಿ ಶಿಕ್ಷಕರಿಗೆ ಅಂಚೆ ಇಲಾಖೆಯ ವತಿಯಿಂದ ಮಾಹಿತಿ ಕಾರ್ಯಗಾರವು ನಡೆಯಿತು. 

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪುತ್ತೂರು ವಿಭಾಗದ ಕಾರ್ಯನಿರ್ವಾಹಕ ಅಧಿಕಾರಿ ಗುರುಪ್ರಸಾದ್ ಅವರು ಅಂಚೆ ಇಲಾಖೆಯ ವ್ಯಾಪಕ ಸೇವೆಗಳ ಕುರಿತು ವಿವರವಾಗಿ ಮಾಹಿತಿ ಹಂಚಿಕೊಂಡರು. ಅಂಚೆ ಇಲಾಖೆ ಕೇವಲ ಪತ್ರ ವಹಿವಾಟಿಗೆ ಸೀಮಿತವಾಗಿರುವ ಸಂಸ್ಥೆಯಲ್ಲ; ಇಂದಿನ ದಿನಗಳಲ್ಲಿ ಉಳಿತಾಯ ಯೋಜನೆಗಳು, ವಿಮಾ ಸೇವೆಗಳು, ಅಂಚೆ ಬ್ಯಾಂಕಿಂಗ್, ಗ್ರಾಮೀಣ ಜನರಿಗೆಆರ್ಥಿಕ ಸೇವೆಗಳ ವಿಸ್ತರಣೆ, ಪಾರ್ಸೆಲ್ ಸೇವೆಗಳು ಸೇರಿದಂತೆ ಅನೇಕ ಜನಪರ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆಎಂದುಅವರು ತಿಳಿಸಿದರು. 
 
ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ಅಂಚೆ ಇಲಾಖೆ ಜನಸಾಮಾನ್ಯರ ವಿಶ್ವಾಸಾರ್ಹ ಸಂಸ್ಥೆಯಾಗಿ ಬೆಳೆದಿದ್ದು, ಶಿಕ್ಷಕರು ವಿದ್ಯಾರ್ಥಿಗಳಿಗೂ ಪಾಲಕರಿಗೂ ಇದರ ಉಪಯುಕ್ತ ಮಾಹಿತಿಯನ್ನು ತಲುಪಿಸುವಲ್ಲಿ ಪಾತ್ರವಹಿಸಬೇಕು ಎಂದು ಅವರು ಹೇಳಿದರು.

ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಡಾ.ಬಿ.ಪಿ ಸಂಪತ್‌ಕುಮಾರ್ ಅಧ್ಯಕ್ಷತೆಯನ್ನು ವಹಿಸಿದ್ದರು. 

ಕಾರ್ಯಗಾರದಲ್ಲಿ ಮೂಡುಬಿದಿರೆಯ ಕೊಡಂಗಲ್ಲಿನ ಸಬ್ ಪೋಸ್ಟ್ ಮಾಸ್ಟರ್ ಉಮಾ ಮತ್ತು ಅಂಚೆ ಕಚೇರಿಯ ಸಿಬ್ಬಂದಿಗಳು ಸಿಬಿಎಸ್‌ಸಿ ಶಾಲೆಯ ಪ್ರಾಂಶುಪಾಲ ಪ್ರಸಾದ್ ಉಪಸ್ಥಿತರಿದ್ದರು.

 ಶಿಕ್ಷಕ ಪಾರ್ಶ್ವನಾಥ ಜೈನ್ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಕಾರ್ಯಗಾರದಲ್ಲಿ ಅಂಚೆ ಇಲಾಖೆಯ ವಿವಿಧ ಯೋಜನೆಗಳು, ಸೇವೆಗಳ ಉಪಯೋಗ, ಡಿಜಿಟಲ್ ಅಂಚೆ ಸೇವೆಗಳ ಮಹತ್ವ ಸಾರ್ವಜನಿಕರೊಂದಿಗೆ ಇಲಾಖೆಯ ನಂಟುಕುರಿತಾಗಿ ಶಿಕ್ಷಕರಿಗೆ ಸಮಗ್ರ ಮಾಹಿತಿ ನೀಡಲಾಯಿತು. 

ಅಂಚೆ ಇಲಾಖೆಯ ವಿವಿಧ ಸೇವೆಗಳು, ಜನಪರ ಯೋಜನೆಗಳು ಹಾಗೂ ಡಿಜಿಟಲ್ ಯುಗದಲ್ಲಿ ಅಂಚೆ ಇಲಾಖೆಯ ಬದಲಾಗುತ್ತಿರುವ ಕಾರ್ಯವೈಖರಿಯ ಕುರಿತು ಶಿಕ್ಷಕರಿಗೆ ಸಮಗ್ರ ಮಾಹಿತಿಯನ್ನು ನೀಡುವ ಉದ್ದೇಶದಿಂದ ಈ ಕಾರ್ಯಗಾರವು ಆಯೋಜಿಸಲಾಗಿತ್ತು.

Post a Comment

0 Comments