ಮೂಡುಬಿದಿರೆ : ಇಲ್ಲಿನ ಪೊಣ್ಣೆಚ್ಚಾರಿ ಬಸ್ ತಂಗುದಾಣದಲ್ಲಿ ಅನಾಥ ವೃದ್ಧರೋವ೯ರ ಶವ ಗುರುವಾರ ಪತ್ತೆಯಾಗಿದೆ.
70 ಕೆಲವು ದಿನಗಳಿಂದ ಇವರು ಇದೇ ಬಸ್ ತಂಗುದಾನದಲ್ಲಿ ಹಗಲು, ರಾತ್ರಿ ತಂಗುತ್ತಿದ್ದರೆನ್ನಲಾಗಿದೆ. ಒಂದು ಚೀಲದಲ್ಲಿ ಬಟ್ಟೆ ಬರೆಗಳಿದ್ದು ಮನೆ ಬಿಟ್ಟು ಬಂದಿರಬಹುದು ಎಂದು ಅಂದಾಜಿಸಲಾಗಿದೆ.
ಮೂಡುಬಿದಿರೆ ಪೊಲೀಸರು ಸ್ಥಳಕ್ಕಾಗಮಿಸಿ ಶವವನ್ನು ಮೂಡುಬಿದಿರೆ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ವೃದ್ಧ ಯಾವ ಊರಿನವರೆಂದು ಇನ್ನೂ ಪತ್ತೆಯಾಗಿಲ್ಲ.


0 Comments