ಮಿಜಾರು : ಪಾದಾಚಾರಿಗೆ ವಾಹನ ಡಿಕ್ಕಿ : ಸಾವು

ಮಿಜಾರು : ಪಾದಾಚಾರಿಗೆ ವಾಹನ ಡಿಕ್ಕಿ : ಸಾವು

ಮೂಡುಬಿದಿರೆ: ಅಪರಿಚಿತ ವಾಹನವೊಂದು ಪಾದಾಚಾರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಮಿಜಾರು ಚೆಕ್‌ಪೋಸ್ಟ್ ಬಳಿ ಭಾನುವಾರ ರಾತ್ರಿ ನಡೆದಿದೆ. 


ಮೃತ ಪಾದಚಾರಿ ಸ್ಥಳೀಯ ನಿವಾಸಿ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಮೃತರ ಗುರುತು ಹಾಗೂ ಇತರ ವಿವರಗಳು ಇನ್ನಷ್ಟೇ ತಿಳಿದು ಬರಬೇಕಿದೆ.

ಡಿಕ್ಕಿ ಹೊಡೆದ ವಾಹನ ಪರಾರಿಯಾಗಿದೆ. 
ವಾಹನ ಡಿಕ್ಕಿಯಾಗಿ ಕೇವಲ ಐದು ನಿಮಿಷಗಳ ಅವಧಿಯಲ್ಲಿ ಸ್ಥಳೀಯರು ರಸ್ತೆಯ ಮಧ್ಯೆ ಜಮಾಯಿಸಿ ಆಕ್ರೋಶ ಹೊರ ಹಾಕಿದ್ದಾರೆ.

Post a Comment

0 Comments

Advertisement