*ಸ್ಯಾನಿಟರಿ ಪ್ಯಾಡ್, ನ್ಯಾಪ್ಕೀನ್ ಬಳಕೆ ಕಡಿಮೆಗೊಳಿಸಲು : ಜಿ. ಪಂ. ಉಪ ಕಾಯ೯ದಶಿ೯ ಜಯಲಕ್ಷ್ಮೀ ಸಲಹೆ
ಮೂಡುಬಿದಿರೆ : ಕರಾವಳಿ ನದಿಗಳ ಮೂಲಕ ಸಮುದ್ರ ಸೇರುವ ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯವನ್ನು ಮೂಲದಲ್ಲಿಯೇ ತಡೆಗಟ್ಟುವ ಉದ್ದೇಶದಿಂದ ರೂಪಿಸಲಾದ ಮಹತ್ವಾಕಾಂಕ್ಷೆಯ 'ಹಸಿರು ಸಂವಾದ' ಅಭಿಯಾನಕ್ಕೆ ವಿದ್ಯಾಗಿರಿಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕುವೆಂಪು ಸಭಾಭವನದಲ್ಲಿ ಭಾನುವಾರ ಚಾಲನೆ ನೀಡಲಾಯಿತು.
ಕಾಯ೯ಕ್ರಮವನ್ನು ಉದ್ದೇಶಿಸಿ ಮಾತನಾಡಿದ ದ. ಕ. ಜಿಲ್ಲಾ ಪಂಚಾಯತ್ ಉಪ ಕಾಯ೯ದಶಿ೯ ಜಯಲಕ್ಷ್ಮೀ ರಾಯ್ಕೋಡ್ ಅವರು ಕರಾವಳಿಯಲ್ಲಿ ಪರಿಸರ ಸುರಸ್ಥಿರತೆಯನ್ನು ಕಾಪಾಡುವ ನಿಟ್ಟಿನಲ್ಲಿ ತ್ಯಾಜ್ಯ ನಿವ೯ಹಣೆ ಅವಶ್ಯಕವಾಗಿದೆ. ಮೊದಲಿಗೆ ನಾವು ಮನೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಕಡಿಮೆ ಮಾಡಬೇಕು. ಜಿಲ್ಲೆಯಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಕೇವಲ ಶೇ. 50ರಷ್ಟು ತ್ಯಾಜ್ಯ ಕಲೆಕ್ಷನ್ ಆಗುತ್ತಿದೆ ಉಳಿದಂತೆ ಕಾಡು ಮತ್ತು ಸಮುದ್ರವನ್ನು ಸೇರುತ್ತಿದೆ.
ಮಕ್ಕಳಿಗೆ ಬಳಸುವ ನ್ಯಾಪ್ಕಿನ್ ಹಾಗೂ ಹೆಣ್ಣುಮಕ್ಕಳು ಬಳಸುವ ಸ್ಯಾನಿಟರಿ ಪ್ಯಾಡ್ ಗಳನ್ನು ವಿಲೇವಾರಿ ಮಾಡಲು ಸೂಕ್ತ ವ್ಯವಸ್ಥೆಯಿಲ್ಲದೆ ಮಣ್ಣನ್ನು ಸೇರುತ್ತಿದೆ. ಹೆಣ್ಣು ಮಕ್ಕಳು ಪ್ಯಾಡ್ ಗಳನ್ನು ಬಳಸುತ್ತಿರುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರುತ್ತಿವೆ ಆದ್ದರಿಂದ ತೀರ ಅನಿವಾಯ೯ ಸಂದಭ೯ಗಳಲ್ಲಿ ಮಾತ್ರ ನ್ಯಾಪ್ಕಿನ್ ಮತ್ತು ಸ್ಯಾನಿಟರಿ ಪ್ಯಾಡ್ ಗಳನ್ನು ಬಳಸಬೇಕು ಇಲ್ಲದಿದ್ದರೆ ತಮ್ಮ ಅಜ್ಜಿಯಂದಿರು ಅಮ್ಮನವರು ಬಳಸುತ್ತಿದ್ದ ಹಳೆ ಪದ್ಧತಿಯನ್ನು ಅನುಸರಿಸಿದರೆ ಸ್ವಲ್ಪ ಮಟ್ಪಿನ ತ್ಯಾಜ್ಯವನ್ನು ಕಡಿಮೆಗೊಳಿಸಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.
ಪಯಾ೯ವರಣ ಸಂರಕ್ಷಣಾ ತಂಡದ ಪ್ರಾಂತ ಸಂಯೋಜಕ ವೆಂಕಟೇಶ್ ಸಂಗನಾಳ್ ಮಾತನಾಡಿ ಪ್ಲಾಸ್ಟಿಕ್ ತ್ಯಾಜ್ಯಗಳಿಂದ ಮಣ್ಣು, ಗಾಳಿ ಮತ್ತು ನೀರು ಕಲುಷಿತವಾಗುತ್ತಿದೆ ಜತೆಗೆ ಕ್ಯಾನ್ಸರ್ ಹೆಚ್ಚೆಚ್ಚು ಆಗುತ್ತಿದೆ. ಏಕ ಬಳಕೆಯ ವಸ್ತುಗಳನ್ನು ಬಳಸುವುದನ್ನು ನಿಲ್ಲಿಸಬೇಕು ಮತ್ತು ಕಸದ ನಿವ೯ಹಣಿಯ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸಬೇಕು ಹಾಗೂ ಹಸಿರು ಸಂವಾದಗಳನ್ನು ಅಲ್ಲಲ್ಲಿ ನಡೆಸಬೇಕಾಗಿದೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ ಕರಾವಳಿ ಕನಾ೯ಟಕವು ಒಂದು ಕಡೆ ಅರಬ್ಬೀ ಸಮುದ್ರ ಇನ್ನೊಂದು ಕಡೆ ವಿಶ್ವದ ಜೀವ ವೈವಿದ್ಯದ ಅತ್ಯಂತ ಸೂಕ್ಷ್ಮ ಪರಿಸರ ವಲಯಗಳಲ್ಲಿ ಒಂದಾದ ಪಶ್ಚಿಮ ಘಟ್ಟಗಳಿಂದ ಆವೃತವಾಗಿರುವ ಅಪರೂಪದ ಭೌಗೋಳಿಕ ಪ್ರದೇಶವನ್ನು ಹೊಂದಿದೆ ಇಂತಹ ಅಮೂಲ್ಯ ನೈಸಗಿ೯ಕ ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ನೀಡುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಮೇಲಿದೆ ಎಂದರು.
ಆಳ್ವಾಸ್ ಕಾಲೇಜಿನ ಪ್ರಾಚಾಯ೯ ಡಾ. ಕುರಿಯನ್ 'ಹಸಿರು ಸಂವಾದ' ಅಭಿಯಾನದ ಬಗ್ಗೆ ಮಾಹಿತಿ ನೀಡಿ, ಅಭಿಯಾನವು ಮೂರು ಹಂತಗಳಲ್ಲಿ ಅನುಷ್ಠಾನಗೊಳ್ಳಲಿದ್ದು ಮೊದಲ ಹಂತವು ಜುಲೈ -ಆಗಸ್ಟ್, ಎರಡನೇ ಹಂತವು ಆಗಸ್ಟ್-ನವೆಂಬರ್, ಮೂರನೇ ಹಂತವು ಡಿಸೆಂಬರ್ ನಲ್ಲಿ ನಡೆಯಲಿದೆ. ಈ ಸಂದಭ೯ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ.
ತ್ಯಾಜ್ಯವನ್ನು ನದಿಗಳಿಗೆ ಸೇರುವ ಪ್ರಮಾಣವನ್ನು ಅತ್ಯಂತ ಕಡಿಮೆಗೊಳಿಸಿದ ಗ್ರಾಮಕ್ಕೆ 'ಸ್ವಚ್ಛ ಗ್ರಾಮ' ಪ್ರಶಸ್ತಿ ಪ್ರದಾನ ಮಾಡಲಾಗುವುದು. ಉತ್ತಮ ಸಾಧನೆ ತೋರಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ರಾಜ್ಯ ಹಾಗೂ ಕೇಂದ್ರ ಸರಕಾರದ ಪರಿಸರ ಪ್ರಶಸ್ತಿಗಳಿಗೆ ಶಿಫಾರಸ್ಸು ಮಾಡಲಾಗುವುದು. ಪರಿಸರ ಸಂರಕ್ಷಣೆಯಲ್ಲಿ ವಿಶೇಷ ಸೇವೆ ಸಲ್ಲಿಸಿದ 'ವೇಸ್ಟ್ ವಾರಿಯರ್ಸ್' ವಿದ್ಯಾಥಿ೯ಗಳು ಹಾಗೂ ಸ್ಪಧಾ೯ ವಿಜೇತರಿಗೆ ಸನ್ಮಾನಿಸಲಾಗುವುದು ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಪಯಾ೯ವರಣ ಸಂರಕ್ಷಣಾ ತಂಡ ಹಾಗೂ ವಿವಿಧ ಶೈಕ್ಷಣಿಕ ಸಂಸ್ಥೆಗಳು, ಸ್ವಯಂಸೇವಾ ಸಂಘಟನೆಗಳು, ಕೈಗಾರಿಕೆಗಳು ಮತ್ತು ಆಡಳಿತ ವ್ಯವಸ್ಥೆಯ ಸಹಭಾಗಿತ್ವದಲ್ಲಿ
ಈ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮ ಆರಂಭಗೊಂಡಿದ್ದು, ವೈಜ್ಞಾನಿಕ ತ್ಯಾಜ್ಯ ನಿವ೯ಹಣೆ ಮತ್ತು ಸುಸ್ಥಿರ ಪರಿಸರ ಸಂರಕ್ಷಣೆಗೆ ಮಾದರಿಯಾಗುವ ಗುರಿಯನ್ನು ಹೊಂದಿದೆ.
ಈ ಸಂದಭ೯ದಲ್ಲಿ ಪಯಾ೯ವರಣ ಸಂರಕ್ಷಣಾ ತಂಡದ ಜಯರಾಮ್ ಬೊಳ್ಳಾಜೆ, ಸ್ವಚ್ಛ ಕಾಕ೯ಳ ಬ್ರಿಗೇಡ್ ನ ಅಜು೯ನ್, ಪರಿಸರ ವಿಜ್ಞಾನಿಗಳಾದ ಡಾ. ಬಿನೀಶಾ, ರಾಮ್ ಪ್ರಸಾದ್, ಹೊಸದಿಗಂತ ದೈನಿಕದ ಸಿಇಓ ಪ್ರಕಾಶ್ ಪಿ. ಎಸ್. ಉಪಸ್ಥಿತರಿದ್ದರು.
'ಹಸಿರು ಸಂವಾದ' ಅಭಿಯಾನದ ಮಂಜುನಾಥ್ ಶೆಟ್ಟಿ ಸ್ವಾಗತಿಸಿದರು. ಆಳ್ವಾಸ್ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ ಕಾಯ೯ಕ್ರಮ ನಿರೂಪಿಸಿದರು.


0 Comments