ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ

ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ
*ಆನ್ಲೈನ್ ಮೂಲಕ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸ್ವಾಸ್ಥ್ಯ ಸಂಕಲ್ಪ ಕಾಯ೯ಕ್ರಮ
ಮೂಡುಬಿದಿರೆ : ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆಯ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರಾಜ್ಯದ 1000 ಕಾಲೇಜ್ ನಲ್ಲಿ ಆನ್ಲೈನ್ ಮೂಲಕ ವಿದ್ಯಾರ್ಥಿಗಳಿಗೆ ಸ್ವಾಸ್ತ್ಯಸಂಕಲ್ಪ್ ಕಾರ್ಯಕ್ರಮವನ್ನು ಮಂಗಳವಾರ ಆಯೋಜಿಸಲಾಯಿತು.
ಅದರಂತೆ ಶ್ರೀ. ಕ್ಷೇ. ಧ. ಗ್ರಾ. ಯೋಜನೆ, ಕರ್ನಾಟಕ ಜನಜಾಗೃತಿ ವೇದಿಕೆ ಮೂಡುಬಿದಿರೆ ಇದರ ಸಹಯೋಗದಲ್ಲಿ ತಾಲೂಕಿನ ಶಿರ್ತಾಡಿ ವಲಯದ ವಾಲ್ಪಾಡಿ ಕಾರ್ಯಕ್ಷೇತ್ರದ ಅಳಿಯೂರು ಪ. ಪೂ. ಕಾಲೇಜಿನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾಯ೯ಕ್ರಮ ನಡೆಯಿತು.

ಅಖಿಲ   
ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಲಕ್ಷ್ಮಣ ಸುವರ್ಣ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರವೀಂದ್ರ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. 
  ವಿದ್ಯಾರ್ಥಿಗಳಿಗೆ ಶ್ರೀ ಕ್ಷೇ. ಧಮ೯ಸ್ಥಳದ ಧಮಾ೯ಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಮತ್ತು ಹೇಮಾವತಿ ಅವರು ದುಶ್ಚಟ ಮುಂಜಾಗ್ರತೆ ಕುರಿತು ಆನ್ಲೈನ್ ಮೂಲಕ ಮಾಹಿತಿ ನೀಡಿದರು. 

ಕರ್ನಾಟಕ ರಾಜ್ಯ ಪೊಲೀಸ್ ಅಧಿಕಾರಿ ಹೆಚ್. ಎನ್. ವೆಂಕಟೇಶ್ ಪ್ರಸನ್ನ ಅವರು ದುಶ್ಚಟದಿಂದ ಆಗುವ ಪರಿಣಾಮ ಕುರಿತು ಸಮಗ್ರ ಮಾಹಿತಿ ಮಾರ್ಗದರ್ಶನ ನೀಡಿದರು. 

ಕಾಲೇಜ್ ನ ಪ್ರಾಂಶುಪಾಲರಾದ ಚಂದ್ರಶೇಖರ್ ಹಾಗೂ ಪದ್ಮಿನಿ ವಿದ್ಯಾ ಸಂದೀಪ್ ನಾಯಕ್, ಮಂಜುಳ ರಂಜನಕುಮಾರಿ, ಮಣಿತ ತೇಜಶ್ರೀ, ದಿಶಾ, ಸರೋಜಿನಿ ಅವರು ಉಪಸ್ಥಿತರಿದ್ದರು.  

 ಮೇಲ್ವಿಚಾರಕಿ ಪುಷ್ಪ ಕಾಯ೯ಕ್ರಮ ನಿರೂಪಿಸಿದರು. ಸೇವಾಪ್ರತಿನಿಧಿ ಸುಶೀಲ ವಂದಿಸಿದರು.

Post a Comment

0 Comments

Advertisement